Modi 3.0: ಮೋದಿ ಕ್ಯಾಬಿನೆಟ್‌ನಲ್ಲಿ ಯಾರಿಗೆ ಯಾವ ಖಾತೆ? ಇಲ್ಲಿದೆ ಮಾಹಿತಿ
ನರೇಂದ್ರ ಮೋದಿ ಭಾನುವಾರ ದೇಶದ ಪ್ರಧಾನಿಯಾಗಿ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಜೊತೆಗೆ 71 ಸಚಿವರು ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನು ಯಾರಿಗೆ ಯಾವ ಖಾತೆಗಳು ಎಂಬ ಕುತೂಹಲ ಮಾತ್ರ ಮನೆ ಮಾಡಿದೆ.
ಎನ್‌ಡಿಎ ಮೈತ್ರಿಕೂಟದ ಸರ್ಕಾರ ರಚನೆಯಾಗಿದ್ದು, ಸಚಿವರುಗಳಿಗೆ ಸಚಿವ ಸ್ಥಾನವನ್ನು ಇನ್ನೇನು ಕೆಲವೇ ಕ್ಷಣಗಳಲ್ಲಿ ಘೋಷಿಸಲಿದೆ. ಯಾರಿಗೆ ಯಾವ ಖಾತೆ ಸಿಗುತ್ತದೆ ಎಂಬ ಕುತೂಹಲ ಮನೆ ಮಾಡಿದೆ. ಟಿಡಿಪಿ ಹಾಗೂ ಜೆಡಿಯು ಪಕ್ಷಗಳಿಗೆ ಯಾವ ಖಾತೆ ಸಿಗುತ್ತದೆ ಎಂಬ ಕುತೂಹಲಕ್ಕೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಉತ್ತರ ಲಭಿಸಲಿದೆ.

ದೇಶದ 24 ರಾಜ್ಯಗಳ ಸಂಸದರಿಗೆ ಮಂತ್ರಿಗಿರಿ ಲಭಿಸಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯದ್ದು, ದೊಡ್ಡ ಸಚಿವ ಸಂಪುಟವಾಗಿದೆ. 2014ರಲ್ಲಿ 46 ಸಚಿವರು, 2019ರಲ್ಲಿ 58 ಸಚಿವರು, 2024ರಲ್ಲಿ 72 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೋದಿ, ರಾಜನಾಥ್ ಸಿಂಗ್, ಜಿತನ್ ರಾಮ್ ಮಾಂಝಿ, ಎಚ್.ಡಿ.ಕುಮಾರಸ್ವಾಮಿ, ಮನೋಹರ್ ಲಾಲ್ ಖಟ್ಟರ್, ಸರ್ಬಾನಂದ ಸೋನೋವಾಲ್, ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ 7 ಸಂಸದರು ಈ ಹಿಂದೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
#WATCH | PM Narendra Modi chairs his first Union Cabinet meeting at the start of his third term pic.twitter.com/u85hiGanO5
— ANI (@ANI) June 10, 2024
| ಕ್ರ,ಸಂ | ಸಚಿವರ ಹೆಸರು | ಖಾತೆ |
| 1 | ಅಮಿತ್ ಶಾ | ಗೃಹ ಖಾತೆ/ಗೃಹ ವ್ಯವಹಾರಗಳ ಸಚಿವ/ಸಹಕಾರ ಸಚಿವ |
| 2 | ರಾಜನಾಥ್ ಸಿಂಗ್ | ರಕ್ಷಣಾ ಇಲಾಖೆ |
| 3 | ಎಸ್.ಜೈಶಂಕರ್ | ವಿದೇಶಾಂಗ ಇಲಾಖೆ |
| 4 | ನಿತೀನ್ ಗಡ್ಕರಿ | ಸಾರಿಗೆ ಮತ್ತು ಹೆದ್ದಾರಿ ಸಚಿವ |
| 5 | ನಿರ್ಮಲಾ ಸೀತಾರಾಮನ್ | ಹಣಕಾಸು ಸಚಿವ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ |
| 6 | ಜೆಪಿ ನಡ್ಡಾ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವ |
| 7 | ಶಿವರಾಜ್ ಸಿಂಗ್ ಚೌಹಾಣ್ | ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಸಚಿವ |
| 8 | ಮನೋಹರ್ ಲಾಲ್ ಖಟ್ಟರ್ | ವಿದ್ಯುತ್ ಸಚಿವ /ವಸತಿ ಮತ್ತು ನಗರ ವ್ಯವಹಾರಗಳ ಸಚಿವ |
| 9 | ರಾಮ್ ಮೋಹನ್ ನಾಯ್ಡು | ನಾಗರಿಕ ವಿಮಾನಯಾನ ಸಚಿವ |
| 10 | ಎಚ್‌ಡಿ ಕುಮಾರಸ್ವಾಮಿ | ಭಾರೀ ಕೈಗಾರಿಕೆಗಳ ಸಚಿವ/ಉಕ್ಕಿನ ಸಚಿವ |
| 11 | ಪಿಯೂಷ್ ಗೋಯಲ್ | ವಾಣಿಜ್ಯ ಮತ್ತು ಕೈಗಾರಿಕಾ ಸಚಿವ |
| 12 | ಶ್ರೀಪಾದ್ ನಾಯ್ಕ್ | ಇಂಧನ ಖಾತೆ ರಾಜ್ಯ ಸಚಿವ |
| 13 | ಶಂತನು ಠಾಕೂರ್ | ಶಿಪ್ಪಿಂಗ್ ಖಾತೆ ರಾಜ್ಯ ಸಚಿವ |
| 14 | ಅಶ್ವಿನಿ ವೈಷ್ಣವ್ | ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ/ರೈಲ್ವೆ ಸಚಿವ/ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ |
| 15 | ತೋಖಾನ್ ಸಾಹು | ನಗರಾಭಿವೃದ್ಧಿ ರಾಜ್ಯ ಸಚಿವ |
| 16 | ರಿರಾಜ್ ಸಿಂಗ್ | ಜವಳಿ ಸಚಿವಧರ್ಮೇಂದ್ರ ಪ್ರಧಾನ್, ಶಿಕ್ಷಣ ಸಚಿವ |
| 17 | ಸಿಆರ್ ಪಾಟೀಲ್ | ಜಲ ಶಕ್ತಿ ಸಚಿವ |
| 18 | ಕಿರಣ್ ರಿಜಿಜು | ಸಂಸದೀಯ ವ್ಯವಹಾರಗಳ ಸಚಿವ/ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ |
| 19 | ಸರ್ಬಾನಂದ ಸೋನೋವಾಲ್ | ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವ |
| 20 | ಜ್ಯೋತಿರಾದಿತ್ಯ ಸಿಂಧಿಯಾ | ದೂರಸಂಪರ್ಕ ಸಚಿವ/ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ |
| 21 | ಭೂಪೇಂದ್ರ ಯಾದವ್ | ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ |
| 22 | ಗಜೇಂದ್ರ ಸಿಂಗ್ ಶೇಖಾವತ್ | ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ |
| 23 | ಹರ್ದೀಪ್ ಸಿಂಗ್ ಪುರಿ | ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ |
| 24 | ಮನ್ಸುಖ್ ಮಾಂಡವಿಯಾ | ಕಾರ್ಮಿಕ ಮತ್ತು ಉದ್ಯೋಗ ಸಚಿವ/ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ |
| 25 | ಅಜಯ್ ಟಮಟಾ | ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವ |
| 26 | ಹರ್ಷಾ ಮಲೋತ್ರಾ | ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ; ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಜ್ಯ ಸಚಿವ |
| 27 | ಲಲ್ಲನ್ ಸಿಂಗ್ | ಪಂಚಾಯತ್ ರಾಜ್ ಸಚಿವ/ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೈರಿ |
| 28 | ಡಾ ವೀರೇಂದ್ರ ಕುಮಾರ್ | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ |
| 29 | ಜುಯಲ್ ಓರಾಮ್ | ಬುಡಕಟ್ಟು ವ್ಯವಹಾರಗಳ ಸಚಿವ |
| 30 | ಜಿ ಕಿಶನ್ ರೆಡ್ಡಿ | ಕಲ್ಲಿದ್ದಲು ಸಚಿವ |
| 31 | ಚಿರಾಗ್ ಪಾಸ್ವಾನ್ | ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ |
| 32 | ಕಿಂಜರಾಪು ರಾಮಮೋಹನ್ ನಾಯ್ಡು | ನಾಗರಿಕ ವಿಮಾನಯಾನ ಸಚಿವ |
| 33 | ಧರ್ಮೇಂದ್ರ ಪ್ರಧಾನ್ | ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ |
| 34 | ಅನ್ನಪೂರ್ಣ ದೇವಿ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ |
| 35 | ಗಿರಿರಾಜ್ ಸಿಂಗ್ | ಜವಳಿ ಸಚಿವ |
| 36 | ಪ್ರಹ್ಲಾದ್ ಜೋಶಿ | ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ/ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ |
| 37 | ಜಿತನ್ ರಾಮ್ ಮಾಂಝಿ | ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ |
| 38 | ರಾವ್ ಇಂದರ್ಜೀತ್ ಸಿಂಗ್ | ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ; ಯೋಜನಾ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ); ಮತ್ತು ಸಂಸ್ಕೃತಿ ಸಚಿವಾಲಯದ ರಾಜ್ಯ ಸಚಿವ |
| 39 | ಡಾ ಜಿತೇಂದ್ರ ಸಿಂಗ್ | ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ; ಭೂ ವಿಜ್ಞಾನ ಸಚಿವಾಲಯದ ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ); ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಜ್ಯ ಸಚಿವ; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ರಾಜ್ಯ ಸಚಿವ; ಪರಮಾಣು ಶಕ್ತಿ ಇಲಾಖೆಯಲ್ಲಿ ರಾಜ್ಯ ಸಚಿವ; ಮತ್ತು ಬಾಹ್ಯಾಕಾಶ ಇಲಾಖೆಯಲ್ಲಿ ರಾಜ್ಯ ಸಚಿವರ |
| 40 | ಅರ್ಜುನ್ ರಾಮ್ ಮೇಘವಾಲ್ | ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ); ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ |
| 41 | ಪ್ರತಾಪ್ ರಾವ್ ಜಾಧವ್ | ಆಯುಷ್ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ); ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ |
| 42 | ಜಯಂತ್ ಚೌಧರಿ | ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ); ಮತ್ತು ಶಿಕ್ಷಣ ಸಚಿವಾಲಯದ ರಾಜ್ಯ ಸಚಿವ |
| 43 | ಜಿತೇನ್ ಪ್ರಸಾದ್ | ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವ; ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವ |
| 44 | ಶ್ರೀಪಾದ್ ನಾಯಕ್ | ವಿದ್ಯುತ್ ಸಚಿವಾಲಯದ ರಾಜ್ಯ ಸಚಿವ; ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವ |
| 45 | ಪಂಕಜ್ ಚೌಧರಿ | ಹಣಕಾಸು ಸಚಿವಾಲಯದ ರಾಜ್ಯ ಸಚಿವ |
| 46 | ಕೃಷ್ಣಪಾಲ್ ಗುರ್ಜರ್ | ಸಹಕಾರ ಸಚಿವಾಲಯದಲ್ಲಿ ರಾಜ್ಯ ಸಚಿವ |
| 47 | ರಾಮದಾಸ್ ಅಠವಳೆ | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವ |
| 48 | ರಾಮನಾಥ್ ಠಾಕೂರ್ | ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ |
| 49 | ನಿತ್ಯಾನಂದ ರೈ | ಗೃಹ ಸಚಿವಾಲಯದ ರಾಜ್ಯ ಸಚಿವ |
| 50 | ಅನುಪ್ರಿಯಾ ಪಟೇಲ್ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ; ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ರಾಜ್ಯ ಸಚಿವ. |
| 51 | ವಿ ಸೋಮಣ್ಣ | ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ; ಮತ್ತು ರೈಲ್ವೇ ಸಚಿವಾಲಯದ ರಾಜ್ಯ ಸಚಿವ. |
| 52 | ಚಂದ್ರಶೇಖರ್ ಪೆಮ್ಮಸಾನಿ | ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವ; ಮತ್ತು ಸಂವಹನ ಸಚಿವಾಲಯದ ರಾಜ್ಯ ಸಚಿವ |
| 53 | SP ಸಿಂಗ್ ಬಾಘೆಲ್ | ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವ; ಮತ್ತು ಪಂಚಾಯತ್ ರಾಜ್ ಸಚಿವಾಲಯದ ರಾಜ್ಯ ಸಚಿವ |
| 54 | ಶೋಭಾ ಕರಂದ್ಲಾಜೆ | ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಸಚಿವ; ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವ |
| 55 | ಕೀರ್ತಿ ವರ್ಧನ್ ಸಿಂಗ್ | ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಜ್ಯ ಸಚಿವರು; ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ |
| 56 | ಬಿಎಲ್ ವರ್ಮಾ | ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಸಚಿವ; ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವ |
| 57 | ಸುರೇಶ್ ಗೋಪಿ | ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಸಚಿವ; ಮತ್ತು ಪ್ರವಾಸೋದ್ಯಮ ಸಚಿವಾಲಯದ ರಾಜ್ಯ ಸಚಿವ |
| 58 | ಎಲ್ ಮುರುಗನ್ | ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವ; ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ |
| 59 | ಅಜಯ್ ತಮ್ತಾ | ಅವರು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಜ್ಯ ಸಚಿವ |
| 60 | ಬಂಡಿ ಸಂಜಯ್ ಕುಮಾರ್ | ಗೃಹ ಸಚಿವಾಲಯದ ರಾಜ್ಯ ಸಚಿವ. |
| 61 | ಕಮಲೇಶ್ ಪಾಸ್ವಾನ್ | ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವ |
| 62 | ಭಗೀರಥ ಚೌಧರಿ | ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ |
| 63 | ಸಚಿವ ಸತೀಶ್ ದುಬೆ | ಕಲ್ಲಿದ್ದಲು ಸಚಿವಾಲಯದ ರಾಜ್ಯ; ಮತ್ತು ಗಣಿ ಸಚಿವಾಲಯದ ರಾಜ್ಯ ಸಚಿವ |
| 64 | ಸಂಜಯ್ ಸೇಠ್ | ರಕ್ಷಣಾ ಸಚಿವಾಲಯದ ರಾಜ್ಯ ಸಚಿವ |
| 65 | ರವನೀತ್ ಸಿಂಗ್ ಬಿಟ್ಟು | ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ರಾಜ್ಯ ಸಚಿವ; ಮತ್ತು ರೈಲ್ವೇ ಸಚಿವಾಲಯದ ರಾಜ್ಯ ಸಚಿವ |
| 66 | ದುರ್ಗಾ ದಾಸ್ ಉಕೆಯ್ | ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ |
| 67 | ರಕ್ಷಾ ಖಾಡ್ಸೆ | ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ರಾಜ್ಯ ಸಚಿವ |
| 68 | ಸುಕಾಂತ ಮಜುಂದಾರ್ | ಶಿಕ್ಷಣ ಸಚಿವಾಲಯದ ರಾಜ್ಯ ಸಚಿವ ; ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವ. |
| 69 | ಸಾವಿತ್ರಿ ಠಾಕೂರ್ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಲ್ಲಿ ರಾಜ್ಯ ಸಚಿವ |
| 70 | ತೋಖಾನ್ ಸಾಹು | ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ |
| 71 | ರಾಜಭೂಷಣ ಚೌಧರಿ | ಜಲ ಶಕ್ತಿ ಸಚಿವಾಲಯದಲ್ಲಿ ರಾಜ್ಯ ಸಚಿವ |
| 72 | ಭೂಪತಿ ರಾಜು | ಭಾರೀ ಕೈಗಾರಿಕೆಗಳ ರಾಜ್ಯ ಸಚಿವ ; ಮತ್ತು ಉಕ್ಕಿನ ಸಚಿವಾಲಯದ ರಾಜ್ಯ ಸಚಿವ |
| 73 | ನಿಂಬು ಬೆನ್ ಬಂಬಾನಿಯಾ | ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಸಚಿವ. |
| 74 | ಮುರಳೀಧರ್ ಮೊಹಲ್ | ಸಹಕಾರ ಸಚಿವಾಲಯದಲ್ಲಿ ರಾಜ್ಯ ಸಚಿವ; ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವ. |
| 75 | ಜಾರ್ಜ್ ಕುರಿಯನ್ | ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ರಾಜ್ಯ ಮಂತ್ರಿ; ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವ. |
| 76 | ಪಬಿತ್ರಾ ಮಾರ್ಗರಿಟಾ | ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಮಂತ್ರಿ; ಮತ್ತು ಜವಳಿ ಸಚಿವಾಲಯದ ರಾಜ್ಯ ಸಚಿವ |
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications