Lok Sabha Results: 23 ಸ್ಥಾನದಲ್ಲಿ ಬಿಜೆಪಿಗೆ ಗೆಲುವು? ಕಾಂಗ್ರೆಸ್‌ಗೆ ಎಷ್ಟು ಸ್ಥಾನ?
ಲೋಕಸಭೆ ಚುನಾವಣೆ 2024 ಅಂತಿಮ ಹಂತಕ್ಕೆ ಬಂದು ತಲುಪಿದೆ. ಗೆಲುವಿಗಾಗಿ ಬಿಜೆಪಿ & ಕಾಂಗ್ರೆಸ್ ನಾಯಕರು ಇಷ್ಟುದಿನ ಸಿಕ್ಕಾಪಟ್ಟೆ ತಿಕ್ಕಾಟ ನಡೆಸಿದ್ದರ ಫಲಿತಾಂಶ ಇನ್ನೇನು ಕೆಲವೇ ಗಂಟೆಗಳಲ್ಲಿ ಹೊರಬೀಳಲಿದೆ. ಅದಕ್ಕೂ ಮೊದಲು ಈ ಬಗ್ಗೆ ಒಂದು ದೊಡ್ಡ ಚರ್ಚೆ ಕೂಡ ಶುರುವಾಗಿದೆ. 23 ಸ್ಥಾನದಲ್ಲಿ ಬಿಜೆಪಿಗೆ ಗೆಲುವು? ಹಾಗಾದರೆ ಕಾಂಗ್ರೆಸ್‌ಗೆ ಎಷ್ಟು ಸ್ಥಾನಗಳು? ಅಂತಾ ಚರ್ಚೆ ನಡೀತಾ ಇದೆ.
ಭಾರತ ಪ್ರಜಾಪ್ರಭುತ್ವದ ದೇಗುಲ, ಭಾರತವೇ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭರ್ಜರಿ ಹ್ಯಾಟ್ರಿಕ್ ಬಾರಿಸಿ, ಕೇಂದ್ರದ ಅಧಿಕಾರ ಹಿಡಿಯೋದಕ್ಕೆ ಎನ್‌ಡಿಎ ಒಕ್ಕೂಟ ಸಜ್ಜಾಗಿದೆ ಅದ್ರಲ್ಲೂ ಈ ಬಾರಿ ಕನಿಷ್ಠ 400 ಸ್ಥಾನ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿತ್ತು. ಹಾಗಾದ್ರೆ ಬಿಜೆಪಿ ಪಕ್ಷದ 'ಮಿಷನ್ 400' ಸಕ್ಸಸ್ ಆಗುತ್ತಾ? ಎಂಬ ಚರ್ಚೆ ನಡೆಯುವಾಗಲೇ ಆ ಒಂದು ರಾಜ್ಯದಲ್ಲಿ ಬಿಜೆಪಿ ಮತ್ತು ಎಷ್ಟು ಸ್ಥಾನ ಗೆಲ್ಲಬಹುದು ಎಂಬ ಬಗ್ಗೆ ಒಂದು ಮಾಹಿತಿ ಹರಿದಾಡುತ್ತಿದೆ. ಆ ಮಾಹಿತಿ ತಿಳಿಯಲು ಮುಂದೆ ಓದಿ.

ಬಿಜೆಪಿಗೆ 23 ರಿಂದ 26 ಸ್ಥಾನ?
'ಜನಮತ ಪೋಲ್ಸ್' ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ 23 ರಿಂದ 26 ಸ್ಥಾನ ಗೆಲ್ಲಬಹುದು ಎನ್ನಲಾಗಿದೆ. ಹಾಗೇ ಇಲ್ಲಿ ಕಾಂಗ್ರೆಸ್ ಪಕ್ಷವು ತಮ್ಮ ಮೈತ್ರಿ ಪಕ್ಷಗಳ ಜೊತೆಗೆ 20 ರಿಂದ 22 ಸ್ಥಾನ ಗೆಲ್ಲಬಹುದು ಎಂದು 'ಜನಮತ ಪೋಲ್ಸ್' ಸಮೀಕ್ಷೆ ಹೇಳಿದೆ. ಈ ಮೂಲಕ ಬಿಜೆಪಿ ಮಹಾರಾಷ್ಟ್ರ ರಾಜ್ಯದಲ್ಲಿ ಮೇಲುಗೈ ಸಾಧಿಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ, ಇದು ಕೇವಲ ಸಮೀಕ್ಷೆ. ಹೀಗಾಗಿ ಜೂನ್ 4ಕ್ಕೆ ರಿಯಲ್ ರಿಸಲ್ಟ್ ಹೊರಬೀಳಲಿದ್ದು, ಅಂದೇ ಯಾರಿಗೆ ಗೆಲುವು? ಯಾರಿಗೆ ಸೋಲು? ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಎಂಬ ಕುರಿತು ಪಕ್ಕಾ ಮಾಹಿತಿ ಗೊತ್ತಾಗಲಿದೆ.
ಅಂತಿಮ ಹಂತಕ್ಕೆ ಚುನಾವಣೆ!
ಇದೀಗ ಚುನಾವಣೆ ಕೊನೇ ಹಂತಕ್ಕೆ ಬಂದು ನಿಂತಿದ್ದು ಇನ್ನೇನು ಮಂಗಳವಾರ ಲೋಕಸಭೆಯ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಹಾಗಾದ್ರೆ ಬಿಜೆಪಿ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಲಿದೆ? ಈ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಪಕ್ಷಗಳು ಎಷ್ಟು ಸ್ಥಾನ ಪಡೆಯಲಿವೆ? ಎಂಬ ಕುರಿತಾಗಿ ಈಗ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ. ಹಾಗೇ ಸೋಷಿಯಲ್ ಮೀಡಿಯಾಗೆ ಕೂಡ ಭಾರತದ ಲೋಕಸಭೆ ಚುನಾವಣೆಯ ಫಲಿತಾಂಶದ ಜ್ವರ ಬಂದಿದೆ.
ಸೋಷಿಯಲ್ ಮೀಡಿಯಾ ಪೂರ್ತಿ ಭಾರತದ ಲೋಕಸಭೆ ಚುನಾವಣೆ ಫಲಿತಾಂಶದ ಸುದ್ದಿ ಟ್ರೆಂಡ್ ಹುಟ್ಟುಹಾಕಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಕಾಳಗದಲ್ಲಿ ಗೆಲ್ಲುವುದು ಯಾರು? ಅನ್ನೋದು ಜೂನ್ 4ಕ್ಕೆ ಗೊತ್ತಾಗಲಿದೆ. ಅದಕ್ಕಿಂತ ಮೊದಲು ಚುನಾವಣೋತ್ತರ ಸಮೀಕ್ಷೆಗೆ ಶನಿವಾರ ಮುಹೂರ್ತ ಫಿಕ್ಸ್ ಆಗಿದೆ!












Click it and Unblock the Notifications