ನಾನು ಯಾರು ಹೇಳಿ? ಸಚಿವೆ ನಿರ್ಮಲಾಗೆ ರಮ್ಯಾ ಕುಹಕದ ಟ್ವೀಟ್
ಬೆಂಗಳೂರು, ಜನವರಿ 7: ಲೋಕಸಭೆಯಲ್ಲಿ ರಫೇಲ್ ಡೀಲ್ ಕುರಿತು ವಿರೋಧ ಪಕ್ಷಗಳ ಆರೋಪದ ವಿರುದ್ಧ ಸತತ ಭಾಷಣ ಮಾಡಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಅವರ ವಿರೋಧಿಗಳು ಮುಗಿಬಿದ್ದಿದ್ದಾರೆ.
ಸಚಿವರ ಹೇಳಿಕೆಗೆ ಮರು ಪ್ರಶ್ನೆಗಳನ್ನು ಹಾಕಿ ಉತ್ತರ ನೀಡಿ ಎಂದು ಪಟ್ಟಿಗಳನ್ನು ಮುಂದಿಡುತ್ತಿದ್ದಾರೆ.
ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಕೂಡ ನಿರ್ಮಲಾ ವಿರುದ್ಧ ಟೀಕಾಪ್ರಹಾರ ನಡೆಸಲು ಟ್ವಿಟ್ಟರನ್ನು ಆಯ್ದುಕೊಂಡಿದ್ದಾರೆ.

ನಿರ್ಮಲಾ ಅವರ ಬಗ್ಗೆ ವ್ಯಂಗ್ಯದ ಟ್ವೀಟ್ಅನ್ನು ಅವರು ಮಾಡಿದ್ದಾರೆ.
'ನನ್ನ ಗಂಡ ಆಂಧ್ರಪ್ರದೇಶದಲ್ಲಿ ಮೂರು ಬಾರಿ ಸ್ಫರ್ಧಿಸಿ ಸೋತಿದ್ದರೂ ಸಂಪುಟ ದರ್ಜೆ ಹೊಂದಿದ್ದಾರೆ.
ನನ್ನ ಮಾವ ಆಂಧ್ರಪ್ರದೇಶದ ಕಾಂಗ್ರೆಸ್ ಸರ್ಕಾರದಲ್ಲಿ ಅನೇಕ ಅವಧಿ ಸಚಿವರಾಗಿದ್ದರು.
ನನ್ನ ಅತ್ತೆ ಆಂಧ್ರಪ್ರದೇಶದ ಕಾಂಗ್ರೆಸ್ ಶಾಸಕಿಯಾಗಿದ್ದರು.
ಹಾಗಾದರೆ ನಾನು ಯಾರು?
My husband held a Cabinet Rank in AP, even though he fought and lost 3 elections;
— Divya Spandana/Ramya (@divyaspandana) 7 January 2019
My father-in-law was a many term Minister in Congress Govts in AP.
My mother-in-law was an AP Congress MLA.
Hint: Lies about HAL, Rafale & background.
Who am I ?
ಸುಳಿವು: ಎಚ್‌ಎಎಲ್, ರಫೇಲ್ ಮತ್ತು ಹಿನ್ನೆಲೆ ಬಗ್ಗೆ ಸುಳ್ಳು ಹೇಳಿದವರು' ಎಂದು ರಮ್ಯಾ, ಪರೋಕ್ಷವಾಗಿ ನಿರ್ಮಲಾ ಅವರ ಬಗ್ಗೆ ಕುಹಕದ ಪ್ರಶ್ನೆ ಇರಿಸಿದ್ದಾರೆ.
ನಿರ್ಮಲಾ ಅವರ ಪತಿ ಪರಕಳ ಪ್ರಭಾಕರ್ ಆಂಧ್ರಪ್ರದೇಶ ಸರ್ಕಾರದಲ್ಲಿ ಸಂವಹನ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮಾವ ಪರಕಳ ಶೇಷಾವತಾರಂ ಸಚಿವರಾಗಿದ್ದರು. ಅತ್ತೆ ಪರಕಳ ಕಾಳಿಕಾಂಬ ಶಾಸಕಿಯಾಗಿ ಆಯ್ಕೆಯಾಗಿದ್ದರು.












Click it and Unblock the Notifications