Budget 2024: ಮಧ್ಯಂತರ ಮತ್ತು ಪೂರ್ಣ ಬಜೆಟ್ ನಡುವಿನ ವ್ಯತ್ಯಾಸವಿದು..
ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಕೇಂದ್ರ ಬಜೆಟ್ 2024 ಅನ್ನು ಮಂಡಿಸಲು ಸಿದ್ಧರಾಗಿದ್ದಾರೆ. ಇದು ಅವರ ಆರನೇ ಬಜೆಟ್ ಆಗಲಿದೆ.
2019 ರಲ್ಲಿ ನಿರ್ಮಲಾ ಸೀತಾರಾಮನ್ ದೇಶದ ಮೊದಲ ಪೂರ್ಣ ಸಮಯದ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಈ ಬಾರಿ ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. ಏನಿದು ಮಧ್ಯಂತರ ಬಜೆಟ್ ಮತ್ತು ಪೂರ್ಣ ಬಜೆಟ್? ಇದರ ನಡುವಿನ ವ್ಯತ್ಯಾಸವನ್ನು ನೋಡೋಣ.

ಮಧ್ಯಂತರ ಬಜೆಟ್ ಎನ್ನುವುದು ಒಂದು ನಿರ್ದಿಷ್ಟ ಅವಧಿಗೆ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಪ್ರಸ್ತುತಪಡಿಸಲಾದ ತಾತ್ಕಾಲಿಕ ಬಜೆಟ್ ಆಗಿದೆ. ಹೊಸ ಸರ್ಕಾರ ರಚನೆಯಾಗುವವರೆಗೆ ಅಲ್ಪಾವಧಿಗೆ ಈ ಬಜೆಟ್ ಬಳಸಲಾಗುತ್ತದೆ.
ಇದು ಸಾರ್ವತ್ರಿಕ ಚುನಾವಣೆಯ ವರ್ಷವಾಗಿರುವುದರಿಂದ, ನಿರ್ಹಮನ ಸರ್ಕಾರಕ್ಕೆ ಸಾಮಾನ್ಯ ಪೂರ್ಣ ಬಜೆಟ್ ಬದಲಿಗೆ ಮಧ್ಯಂತರ ಬಜೆಟ್ ಅಥವಾ ವೋಟ್-ಆನ್-ಅಕೌಂಟ್ ಮಂಡಿಸಲು ಮಾತ್ರ ಅವಕಾಶವಿರುತ್ತದೆ.
ಇದರೊಂದಿಗೆ ಮಧ್ಯಂತರ ಬಜೆಟ್ ಸೇರಿದಂತೆ ಆರು ಬಜೆಟ್ಗ್ಗಳನ್ನು ಮಂಡಿಸಿದ ಮೊದಲ ಮಹಿಳಾ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ನಿರ್ಮಲಾ ಸೀತಾರಾಮನ್ ಅವರು ಪಾತ್ರರಾಗಲಿದ್ದಾರೆ. ಮುಂದಿನ ದಿನಗಳಲ್ಲಿ ಅಂದರೆ ಚುನಾವಣೆ ಬಳಿಕ ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಜುಲೈನಲ್ಲಿ ನಿಯಮಿತ ಪೂರ್ಣ ಬಜೆಟ್ ಮಂಡಿಸುವ ಸಾಧ್ಯತೆ ಇದೆ.
ಭಾರತದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ.
ಪೂರ್ಣ ಬಜೆಟ್ನಂತೆ, ಮಧ್ಯಂತರ ಬಜೆಟ್ ಅನ್ನು ಲೋಕಸಭೆಯಲ್ಲಿ ಚರ್ಚಿಸಿ ಅಂಗೀಕರಿಸಲಾಗುವುದು ಮತ್ತು ವೋಟ್-ಆನ್-ಅಕೌಂಟ್ ಸಂದರ್ಭದಲ್ಲಿ ಅದನ್ನು ಯಾವುದೇ ಔಪಚಾರಿಕ ಚರ್ಚೆಯಿಲ್ಲದೆ ಅಂಗೀಕರಿಸಲಾಗುತ್ತದೆ. ಮಧ್ಯಂತರ ಬಜೆಟ್ ತೆರಿಗೆ ಆಡಳಿತದಲ್ಲಿ ಬದಲಾವಣೆಗಳನ್ನು ಪ್ರಸ್ತಾಪಿಸಬಹುದು, ಆದರೆ ವೋಟ್-ಆನ್-ಅಕೌಂಟ್ ಯಾವುದೇ ಸಂದರ್ಭದಲ್ಲೂ ತೆರಿಗೆ ಆಡಳಿತವನ್ನು ಬದಲಾಯಿಸಲು ಸಾಧ್ಯವಿಲ್ಲ. ಏಪ್ರಿಲ್‌ನಿಂದ ಜೂನ್/ಜುಲೈವರೆಗೆ ಅಥವಾ ಹೊಸ ಸರ್ಕಾರವು ತನ್ನ ಪೂರ್ಣ ಪ್ರಮಾಣದ ಬಜೆಟ್ ಅನ್ನು ಮಂಡಿಸುವವರೆಗೆ ಭಾರತದ ಸಂಚಿತ ನಿಧಿಯಿಂದ ಹಣವನ್ನು ಹಿಂಪಡೆಯಲು ಇದು ಸಂಸತ್ತಿನ ಅನುಮೋದನೆಯಾಗಿದೆ.
2024ರ ಸಂಪೂರ್ಣ ಬಜೆಟ್ ಜುಲೈನಲ್ಲಿ ಮಂಡನೆಯಾಗಲಿದೆ. ಹೊಸದಾಗಿ ಆಯ್ಕೆಯಾದ ಕೇಂದ್ರ ಹಣಕಾಸು ಸಚಿವರು ಬಜೆಟ್ ಮಂಡಿಸಲಿದ್ದಾರೆ. ಹಿಂದಿನ ಮಧ್ಯಂತರ ಬಜೆಟ್ ಅನ್ನು ಫೆಬ್ರವರಿ 1, 2019 ರಂದು ಆಗಿನ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಮಂಡಿಸಿದ್ದರು.
2024ರ ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31ರಂದು ಪ್ರಾರಂಭವಾಗುತ್ತದೆ. ಫೆ.9ರವರೆಗೆ ಸಮ್ಮೇಳನ ನಡೆಯಲಿದೆ. ಭಾರತದ ಪ್ರಸ್ತುತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019, 2020, 2021, 2022 ಮತ್ತು 2023 ರ ಐದು ಬಜೆಟ್‌ಗಳನ್ನು ಮಂಡಿಸಿದ್ದಾರೆ. ಫೆಬ್ರವರಿ 1, 2024 ರ ಬಜೆಟ್ ಅವರ ಆರನೇ ಬಜೆಟ್ ಮಂಡನೆಯಾಗಿದೆ.












Click it and Unblock the Notifications