Weather Forecast: ದೆಹಲಿಯಲ್ಲಿ ಮುಂಜಾನೆ ಧಾರಾಕಾರ ಮಳೆ- ಇನ್ನೆಷ್ಟು ದಿನ ಮಳೆ?
ದೆಹಲಿ ಜೂನ್ 28: ರಾಜಧಾನಿ ದೆಹಲಿಯಲ್ಲಿ ಕಳೆದ ಹಲವು ದಿನಗಳಿಂದ ಮಳೆ ವಾತಾವರಣವಿದ್ದು ಇಂದು ಮುಂಜಾನೆಯಿಂದ ಭಾರಿ ಮಳೆಯಾಗುತ್ತಿದೆ. ಹೀಗಾಗಿ ದೆಹಲಿ ಬಿಸಿಲಿನ ತಾಪದಿಂದ ಕೊಂಚ ರಿಲ್ಯಾಕ್ಸ್ ಆಗಿದೆ. ದೆಹಲಿಯಲ್ಲಿ ಮುಂದಿನ ಕೆಲ ದಿನಗಳವರೆಗೆ ಭಾರೀ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ದೆಹಲಿಯ ಪಕ್ಕದ ನೋಯ್ಡಾದಲ್ಲೂ ಧಾರಾಕಾರ ಮಳೆಯಾಗುತ್ತಿದೆ. ಪ್ರಸ್ತುತ ರಾಜಧಾನಿ ದೆಹಲಿ ಸೇರಿದಂತೆ ಎನ್‌ಸಿಆರ್‌ನ ಅನೇಕ ಪ್ರದೇಶಗಳನ್ನು ಮಳೆ ಮೋಡ ಆವರಿಸಿಕೊಂಡಿದೆ. ಇಂದು ಬೆಳ್ಳಂಬೆಳಿಗ್ಗೆ ಸುರಿದ ಭಾರೀ ಮಳೆಗೆ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಇದರಿಂದ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

#WATCH | Delhi: Heavy rain lashes parts of National Capital.
— ANI (@ANI) June 27, 2024
(Visuals from Moti Bagh) pic.twitter.com/jGZFJXAmKp
ದೆಹಲಿಯಲ್ಲಿ ಮಳೆ
ಗುರುವಾರ ಬೆಳಗ್ಗೆಯೂ ದೆಹಲಿಯಲ್ಲಿ ಜೋರು ಮಳೆಯಾಗಿತ್ತು. ಅದರ ನಂತರ ದೆಹಲಿಯ ವಾತಾವರಣ ತಂಪಾಗಿದೆ. ಶುಕ್ರವಾರ ಬೆಳಿಗ್ಗೆ ದೆಹಲಿ ಮಳೆಯಿಂದ ಎಚ್ಚರಗೊಂಡಿದೆ. ಇಂದು (ಜೂನ್ 28) ದೆಹಲಿಯ ಹಲವೆಡೆ ಗುಡುಗು, ಮಿಂಚು ಸಹಿತ ಮಳೆ ನಿರಂತರವಾಗಿ ಸುರಿದಿದೆ.
ಜುಲೈ 3ರವರೆಗೆ ಮಳೆ- ಯಲ್ಲೋ ಅಲರ್ಟ್
ಜುಲೈ 3ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಶನಿವಾರ ಅಂದರೆ ಜೂನ್ 29ರಂದು ಭಾರೀ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ವಾರಾಂತ್ಯದಲ್ಲಿ ಅಧಿಕ ಮಳೆಯಿಂದಾಗಿ ತಾಪಮಾನ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.

ತಾಪಮಾನ 34 ರಿಂದ 33 ಡಿಗ್ರಿ ಸೆಲ್ಸಿಯಸ್ ತಲುಪಬಹುದು. ಈ ಹಿಂದೆ ಹವಾಮಾನ ಇಲಾಖೆ ಶುಕ್ರವಾರ ಲಘು ಮಳೆಯಾಗುವ ಮುನ್ಸೂಚನೆ ನೀಡಿತ್ತು. ಮುಂದಿನ ಮೂರು ದಿನಗಳಲ್ಲಿ ದೆಹಲಿಗೆ ಮುಂಗಾರು ಅಪ್ಪಳಿಸುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿತ್ತು. ಇಂದು ದೆಹಲಿಯಲ್ಲಿ ಮಳೆಯೊಂದಿಗೆ ಮೋಡ ಕವಿದ ವಾತಾವರಣ ಇರಲಿದೆ.
29 ಮತ್ತು 30ರಂದು ದೆಹಲಿಯಲ್ಲಿ ಭಾರೀ ಮಳೆ
ಹವಾಮಾನ ಇಲಾಖೆ ಪ್ರಕಾರ ಜೂನ್ 29 ಮತ್ತು 30 ರಂದು ದೆಹಲಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಎರಡು ದಿನಗಳಲ್ಲಿ ಇಡೀ ದೆಹಲಿ-ಎನ್‌ಸಿಆರ್‌ನಲ್ಲಿ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ. ಇದರಿಂದಾಗಿ ರಸ್ತೆಯಲ್ಲಿ ನೀರು ನಿಲ್ಲುವುದು ಮತ್ತು ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ಅಲ್ಲದೆ ಬಲವಾದ ಗಾಳಿ, ಮಿಂಚು ಮತ್ತು ಗುಡುಗು ಸಮೇತ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. ಜುಲೈ 1 ಮತ್ತು 2 ರಂದು ಸಾಧಾರಣ ಮಳೆ ಮತ್ತು ಗುಡುಗು ಸಹಿತ ಮಳೆಯ ಮುನ್ಸೂಚನೆಯನ್ನು IMD ನೀಡಿದೆ. ಇದರಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸ್ಥಿರವಾಗಿರುತ್ತದೆ. ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಲಿದ್ದು ಗಾಳಿಯ ವೇಗ ಗಂಟೆಗೆ 25-35 ಕಿಮೀ ಇರಲಿದೆ.












Click it and Unblock the Notifications