Weather Forecast: ಈ ವಾರದ ಹವಾಮಾನದ ವಿವರ; ಎಲ್ಲೆಲ್ಲಿ ಹೆಚ್ಚು ಮಳೆ, ಮಂಜು, ಚಳಿ ತಿಳಿಯಿರಿ
Weather Forecast: ಈಗಾಗಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಮಳೆ ಆರ್ಭಟಿಸಿ ಅವಾಂತರಗಳನ್ನೇ ಸೃಷ್ಟಿಸಿದೆ. ಇದೀಗ ಚಳಿಗಾಲದಲ್ಲೂ ಕೂಡ ಹಲವೆಡೆ ಮಳೆ ಮುಂದುವರೆದಿದೆ. ಹಾಗೆಯೇ ಡಿಸೆಂಬರ್ ಅಂತ್ಯದವರರೆಗೂ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಮಳೆ ಎಂದು ಇಲ್ಲಿ ತಿಳಿಯಿರಿ.
ಎಲ್ಲೆಲ್ಲಿ ಮಳೆ? ಡಿಸೆಂಬರ್ ಅಂತ್ಯದಲ್ಲಿ ದಕ್ಷಿಣ ಭಾರತವು ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಲಕೊಲ್ಲಿಯಲ್ಲಿ ಚಂಡಮಾರುತ ಹಿನ್ನೆಲೆ ಆಂಧ್ರಪ್ರದೇಶದ ರಾಯಲಸೀಮಾ, ತಮಿಳುನಾಡಿನ ಪುದುಚೇರಿಯಲ್ಲಿ ಕಾರೈಕಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಡಿಸೆಂಬರ್ 26ರಿಂದ ವಾರಾಂತ್ಯದವರೆಗೆ ವಾಯುವ್ಯ ಭಾರತದ ಮೇಲೆ ಚಂಡಮಾರುತರ ಪ್ರಭಾವ ಬೀರಲಿರುವ ಹಿನ್ನೆಲೆ ಇಲ್ಲಿನ ನಿವಾಸಿಗಳು ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಡಿಸೆಂಬರ್ 27 ಮತ್ತು 28 ರಂದು ಚದುರಿದಂತೆ ಮಳೆ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಡಿಸೆಂಬರ್ 26 ಮತ್ತು 27ರಂದು ರಾಜಸ್ಥಾನ, ಗುಜರಾತ್ , ಪಂಜಾಬ್, ಹರಿಯಾಣ, ಚಂಡೀಗಢ, ಪಶ್ಚಿಮ ಉತ್ತರ ಪ್ರದೇಶ, ಪಶ್ಚಿಮ ಮಧ್ಯಪ್ರದೇಶ, ಮಧ್ಯ ಮಹಾರಾಷ್ಟ್ರ ಮತ್ತು ಮರಾಠವಾಡ, ಡಿಸೆಂಬರ್ 27ರಿಂದ 28ರ ವರೆಗೆ ಛತ್ತೀಸ್‌ಗಢದಲ್ಲಿ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಅಲ್ಲಲ್ಲಿ ಚದುರಿದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಎಲ್ಲೆಲ್ಲಿ ಹೆಚ್ಚು ಚಳಿ?: ಇನ್ನು ಮುಂದಿನ ಹಲವು ದಿನಗಳ ಕಾಲ ಉತ್ತರ ಭಾರತದ ರಾಜ್ಯಗಳಾದ್ಯಂತ ತಾಪಮಾನದಲ್ಲಿ ತೀವ್ರ ಕುಸಿತವಾಗಲಿದ್ದು, ಚಳಿಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಹಚ್ಚಿದೆ. ಡಿಸೆಂಬರ್ 25 ಮತ್ತು 26ರಂದು ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್, ಮುಜಫರಾಬಾದ್, ಪಂಜಾಬ್, ಹರಿಯಾಣ ಮತ್ತು ಚಂಡೀಗಢದಲ್ಲಿ ಹೆಚ್ಚು ಚಳಿ ಇರಲಿದೆ ಎಂದು ಮುನ್ಸೂಚನೆ ನೀಡಿದೆ.
ದಟ್ಟ ಮಂಜು: ಹವಾಮಾನ ಇಲಾಖೆ ಪ್ರಕಾರ, ರಾಜಸ್ಥಾನ, ಬಿಹಾರ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ತ್ರಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ತಡರಾತ್ರಿ ಮತ್ತು ಮುಂಜಾನೆ ವೇಳೆ ದಟ್ಟವಾದ ಮಂಜು ಕವಿಯಲಿದ್ದು, ಇದರಿಂದ ವಾಹನ ಸವಾರರಿಗೆ ಅಡಚಣೆಯಾಗುವ ಸಾಧ್ಯತೆಯಿದೆ ಎಂದು ಮುನ್ನರಿಕೆ ಸಂದೇಶವನ್ನು ರವಾನಿಸಿದೆ.
ಮೀನುಗಾರರಿಗೆ ಪ್ರಮುಖ ಸೂಚನೆ: ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಇಂದು (ಡಿಸೆಂಬರ್ 25) ನೈಋತ್ಯ ಬಂಗಾಳ ಕೊಲ್ಲಿ, ದಕ್ಷಿಣ ಆಂಧ್ರಪ್ರದೇಶ, ಉತ್ತರ ತಮಿಳುನಾಡು ಕರಾವಳಿ ಮತ್ತು ಪುದುಚೇರಿ ಕರಾವಳಿಗೆ ತೆರಳದಂತೆ ಮೀನುಗಾರರಿಗೆ ಸೂಚಿಸಲಾಗಿದೆ.
ನವದೆಹಲಿ ಹವಾಮಾನದ ವಿವರ: ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಕನಿಷ್ಠ ತಾಪಮಾನ 01°C ವರೆಗೆ ಏರಿಕೆಯಾಗಿದೆ. ನಗರದಾದ್ಯಂತ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 17ರಿಂದ 19 °C ಮತ್ತು 09 ರಿಂದ 10°C ವರೆಗೆ ದಾಖಲಾಗಿದೆ. ಇನ್ನು ಗಾಳಿಯ ಗುಣಮಟ್ಟವಂತೂ ಅತ್ಯಂತ ಕಳಪೆಯಿಂದ ಕೂಡಿದ್ದು, ಇದರಿಂದ ವಾಹನ ಸವಾರರು ಇಲ್ಲಿನ ಜನರು ಬೇಸತ್ತು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ಇಂದು ಬೆಳಗ್ಗೆ 8 ಗಂಟೆಗೆ ನವದೆಹಲಿಯ ವಿವಿಧ ಭಾಗಗಳಲ್ಲಿ AQI ವರದಿ ಬಗ್ಗೆ ಮಾಹಿತಿ ಇಲ್ಲಿದೆ ಗಮನಿಸಿ. ಅಲಿಪುರ್ (328), ರೋಹಿಣಿ (380), ಅಶೋಕ್ ವಿಹಾರ್ (372), ವಾಜಿರ್‌ಪುರ ( 385), ಶಾದಿಪುರ (326), ಮುಂಡ್ಕಾ (394), ಜಹಾಂಗೀರಪುರಿ (377), ನರೇಲಾ (325), ಡಿಟಿಯು (277), ಆರ್‌ಕೆ ಪುರಂ (356), ಆನಂದ್ ವಿಹಾರ್ (360), ಮತ್ತು ಪಂಜಾಬಿ ಬಾಗ್ (431).












Click it and Unblock the Notifications