Weather Forecast: ಈ ಭಾಗಗಳಲ್ಲಿ ಮೂರು ದಿನ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ
Weather Forecast: ಈಗಾಗಲೇ ಮುಂಗಾರು ಮಳೆ ಆರ್ಭಟದಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಅವಾಣತರಗಳೇ ಸೃಷ್ಟಿಯಾಗಿವೆ. ಆದರೆ ಇದೀಗ ರಣಭೀಕರ ಚಳಿ ನಡುವೆಯೂ ಹಲವೆಡೆ ಮಳೆ ಮುಂದುವರೆದಿದೆ. ಹಾಗೆಯೇ ಇಂದಿನಿಂದ ಮುಂದಿನ ಮೂರು ದಿನ ಈ ಭಾಗಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಡಿಸೆಂಬರ್ 27 ಮತ್ತು ಡಿಸೆಂಬರ್ 28ರಂದು ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆ ಸುರಿಯುವ ಸಾಧ್ಯತೆಯಿದೆ.

ಎಲ್ಲೆಲ್ಲಿ ಯಾವಾಗ ಮಳೆ?: ಇಂದು (ಡಿಸೆಂಬರ್ 26) ಕರಾವಳಿ ಆಂಧ್ರಪ್ರದೇಶ, ತಮಿಳುನಾಡಿನ ಪುದುಚೇರಿ, ಕಾರೈಕಲ್‌ನಲ್ಲಿ ಮಿಂಚು, ಗುಡುಗು ಸಹಿತ ಲಘು ಮಳೆಯಾಗುವ ಸಾಧ್ಯೆತೆಯಿದೆ. ಸಂಭವಿಸುತ್ತವೆ. ಡಿಸೆಂಬರ್ 26 ಮತ್ತು ಡಿಸೆಂಬರ್ 27ರಂದು ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಪಂಜಾಬ್, ಚಂಡೀಗಢ ಮತ್ತು ರಾಜಸ್ಥಾನದಲ್ಲಿ ಗುಡುಗು ಸಹಿತ ಚದುರಿದಂತೆ ಪ್ರತ್ಯೇಕವಾಗಿ ಮಳೆಯಾಗು ಸಾಧ್ಯತೆಯಿದೆ ಎಂದು ತಿಳಿಸಿದೆ.
ಡಿಸೆಂಬರ್ 27 ಮತ್ತು 28ರಂದು ಛತ್ತೀಸ್‌ಗಢ, ಮಧ್ಯಪ್ರದೇಶ, ಡಿಸೆಂಬರ್ 26ರಿಂದ 28 ರವರೆಗೆ ಮಧ್ಯ ಮಹಾರಾಷ್ಟ್ರದ ಹಲವೆಡೆ ಇದೇ ರೀತಿಯ ವಾತಾವರಣ ಇರಲಿದೆ ಎಂದು ಮುನ್ಸೂಚನೆ ನೀಡಿದೆ. ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಡಿಸೆಂಬರ್ 27ರಿಂದ ಡಿಸೆಂಬರ್ 28ರ ವರೆಗೆ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಳಿಯ ಪ್ರಮಾನ ಹೆಚ್ಚಳ: ಡಿಸೆಂಬರ್ 26 ರಂದು ಹಿಮಾಚಲ ಪ್ರದೇಶ, ಪಂಜಾಬ್, ಲಡಾಖ್, ಜಮ್ಮು ಮತ್ತು ಕಾಶ್ಮೀರದಲ್ಲಿ ಶೀತ ಗಾಳಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಡಿಸೆಂಬರ್ 27 ಮತ್ತು 28ರಂದು ರಾಜಸ್ಥಾನ, ನವದೆಹಲಿ, ಚಂಡೀಗಢ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಇದೇ ರೀತಿಯ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ದಟ್ಟ ಮಂಜಿನ ಎಚ್ಚರಿಕೆ: ಡಿಸೆಂಬರ್ 26ರಿಂದ ಡಿಸೆಂಬರ್ 29ರ ವರೆಗೆ ಹಿಮಾಚಲ ಪ್ರದೇಶದಲ್ಲಿ ತಡರಾತ್ರಿ ಮತ್ತು ಮುಂಜಾನೆ ದಟ್ಟವಾದ ಮಂಜು ಆವರಿಸಲಿದೆ. ಡಿಸೆಂಬರ್ 27ರಿಂದ 28ರ ವರೆಗೆ ನವದೆಹಲಿ, ಪಂಜಾಬ್, ಚಂಡೀಗಢ ಡಿಸೆಂಬರ್ 31ರಂದು ಹರಿಯಾಣ, ಡಿಸೆಂಬರ್ 26 ರಂದು ಮೇಘಾಲಯ, ಬಿಹಾರ, ಒಡಿಶಾ , ಉತ್ತರ ಪ್ರದೇಶ ಮತ್ತು ಅಸ್ಸಾಂ, ಡಿಸೆಂಬರ್ 28 ರಿಂದ ಡಿಸೆಂಬರ್ 31ರ ವರೆಗೆ ರಾಜಸ್ಥಾನದಲ್ಲಿ ಇದೇ ರೀತಿಯ ವಾತಾವರಣ ಇರಲಿದೆ ಎಂದು ತಿಳಿಸಿದೆ.
ಈ ಬಾರಿ ಅಂದರೆ 2024ರಲ್ಲಿ ಮುಂಗಾರು ಮೊದಲು ಕೇರಳಕ್ಕೆ ಎಂಟ್ರಿ ಕೊಟ್ಟು ಬಳಿಕ ಕರ್ನಾಟಕಕ್ಕೆ ಆಗಮಿಸಿತು. ಬಳಿಕ ದೇಶಾದ್ಯಂತ ಆವರಿಸಿ ಅವಾಂತರಗಳನ್ನೇ ಸೃಷ್ಟಿಸಿತು. ಮತ್ತೊಂದೆಡೆ ನೋಡುವುದಾದರೆ ಬರದ ಬೇಗೆಯಿಂದ ಬೆಂದಿದ್ದ ರೈತರ ಹೊಟ್ಟೆ ತಣ್ಣಗಾಗುವಂತೆ ಈ ಬಾರಿ ಸುರಿದ ಮುಂಗಾರು ಮಳೆ ಮಾಡಿದೆ.












Click it and Unblock the Notifications