ಈ ಬಾರಿ ವಾಡಿಕೆಗಿಂತ ಹೆಚ್ಚು ಸುರಿಯಲಿದೆ ಮುಂಗಾರು ಮಳೆ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 02 : ಭೀಕರ ಬರಗಾಲದಿಂದ ಕಂಗೆಟ್ಟಿರುವ ಜನರಿಗೆ ಸಿಹಿ ಸುದ್ದಿ. ಈ ಬಾರಿ ದೇಶದಲ್ಲಿ ಮುಂಗಾರು ಉತ್ತಮವಾಗಿರಲಿದ್ದು, ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ. ಮುಂಗಾರು ಮಾರುತಗಳಿಗೆ ಈ ಬಾರಿ ಎಲ್‌ ನಿನೋ ಅಡ್ಡಗಾಲು ಹಾಕುವುದಿಲ್ಲ.

ವೆದರ್‌ ರಿಸ್ಕ್‌ ಮ್ಯಾನೇಜ್‌ಮೆಂಟ್‌ ಸರ್ವೀಸಸ್ ಲಿಮಿಟೆಡ್‌ ಎಂಬ ಹವಾಮಾನ ವಿಶ್ಲೇಷಣಾ ಸಂಸ್ಥೆ ಈ ಬಗ್ಗೆ ಅಧ್ಯಯನ ನಡೆಸಿದೆ. ಸಂಸ್ಥೆಯ ಕಾಂತಿ ಪ್ರಸಾದ್‌ ಅವರು ಈ ಕುರಿತು ಮಾಹಿತಿ ನೀಡಿದ್ದು, 'ಕಳೆದ ಎರಡು ವರ್ಷ ದೇಶದಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿತ್ತು. ಈ ಬಾರಿ ಉತ್ತಮ ಮಳೆಯಾಗಲಿದೆ' ಎಂದು ಹೇಳಿದ್ದಾರೆ. [ಸುಡುತ್ತಿದೆ ಕರ್ನಾಟಕ, ಬಾ ಮಳೆಯೇ ಬೇಗ ಬಾ]

rain

ಅಧ್ಯಯನ ವರದಿ ಪ್ರಕಾರ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತದೆ. ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಶೇ 25 ರಷ್ಟು ಹೆಚ್ಚು ಮಳೆಯಾಗಲಿದೆ. ಜೂನ್ ತಿಂಗಳ ಬಳಿಕ ಮಳೆಯ ಪ್ರಮಾಣ ಕಡಿಮೆ ಆಗಲಿದೆ. ಆದರೆ, ಮಳೆಯ ಕೊರತೆ ಉಂಟಾಗುವುದಿಲ್ಲ. [ಎರಡೇ ಎರಡು ಬಕೆಟ್ ನೀರುಳಿಸಲು ಸಾಧ್ಯವೆ? ಪ್ರಯತ್ನಿಸಿ]

ಮುಂಗಾರು ಮಳೆ ಉತ್ತಮವಾಗಿ ಸುರಿದರೆ ಈಶಾನ್ಯ ಪ್ರದೇಶಗಳಲ್ಲಿ ಮಳೆಯ ಕೊರತೆ ಎದುರಾಗುತ್ತದೆ. ಈ ವರ್ಷವೂ ಅದು ಪುನರಾವರ್ತನೆ ಆಗಲಿದೆ. ಈಶಾನ್ಯ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ಉತ್ತಮ ಮಳೆಯಾಗಲಿದೆ ಎಂದು ವರದಿ ಹೇಳಿದೆ. [ಕರ್ನಾಟಕದಲ್ಲಿ ಭೀಕರ ಬರಗಾಲ, ಹೇಳುವವರಿಲ್ಲ ಕೇಳುವವರಿಲ್ಲ]

ಎಲ್‌ ನಿನೋ ಅಡ್ಡಗಾಲು ಹಾಕಲ್ಲ : ಎರಡು ವರ್ಷಗಳಿಂದ ಎಲ್‌ ನಿನೋ ಮಾರುತಗಳು ಮುಂಗಾರು ಮಳೆ ಸುರಿಯದಂತೆ ಅಡ್ಡಗಾಲು ಹಾಕುತ್ತಿದ್ದವು. ಆದರೆ, ಈ ವರ್ಷ ಮೇ ತಿಂಗಳ ಹೊತ್ತಿಗೆ ಎಲ್‌ ನಿನೋ ಸಂಪೂರ್ಣವಾಗಿ ದುರ್ಬಲವಾಗಲಿದೆ. ಆದ್ದರಿಂದ, ಉತ್ತಮ ಮಳೆಯಾಗುತ್ತದೆ ಎಂದು ವರದಿ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
According to Skymet Weather Services Pvt. monsoon is set to bring cheers to Indian farmers this year. Showers during the four month rainy season starting June will probably be normal as the El Nino is seen returning to neutral conditions.
Please Wait while comments are loading...