Vande Bharat Express: ವಂದೇ ಭಾರತ್ ಪ್ರಯಾಣಿಕರಿಗೆ ಉಚಿತ ಸ್ನಾನದ ಆಫರ್! ವಿಡಿಯೋ ವೈರಲ್
ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತದ ರೈಲ್ವೇ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಈ ವಂದೇ ಭಾರತ್ ರೈಲು ಕನಸು ಸದ್ಯ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಟಿಕೆಟ್ ದರ ದುಬಾರಿ ಎನ್ನುವ ಆರೋಪಗಳ ನಡುವೆಯೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಯಶಸ್ವಿಯಾಗಿ ಸಂಚಾರ ಮಾಡುತ್ತಿವೆ. ಜೂನ್ 26ರಂದು ಹೊಸದಾಗಿ 5 ರೈಲುಗಳು ಸಂಚಾರ ಆರಂಭಿಸಲಿವೆ.
ಆದರೆ, ವಂದೇ ಭಾರತ್ ಎಕ್ಸ್‌ಪ್ರೆಸ್ ಕುರಿತಂತೆ ವಿಡಿಯೋ ಈಗ ಭಾರಿ ವೈರಲ್ ಆಗಿದ್ದು, ವಂದೇ ಭಾರತ್ ಎಕ್ಸ್‌ಪ್ರಸ್ ರೈಲುಗಳ ಗುಣಮಟ್ಟದ ಬಗ್ಗೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಹೌದು, ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಎಸಿಯಿಂದ ನೀರು ಸೋರುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಬಗೆ ಬಗೆಯಾಗಿ ಕಾಮೆಂಟ್ ಮಾಡಿದ್ದಾರೆ.

ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದು, "ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಉಚಿತ ಮತ್ತು ಕಡ್ಡಾಯ ಸ್ನಾನದ ಸೌಲಭ್ಯ ಇದಗಿಸಲಾಗಿದೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಆರಂಭಗೊಂಡಿರುವ ಈ ದೂರದೃಷ್ಟಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು" ಎಂದು ಕಾಲೆಳದಿದ್ದು ಭಾರಿ ವೈರಲ್ ಆಗಿದ್ದು.
Since most of the #VandeBharat trains are scheduled to start running as early as 6 in the morning, the Indian Railways under the visionary leadership of PM Modi has started another noble initiative to provide free mandatory shower facility for all passengers that too on their… pic.twitter.com/jXZQbvcFgc
— Vinay Kumar Dokania (@VinayDokania) June 14, 2023
ಇನ್ನೂ ಕೆಲವರು, ಈ ವಿಶೇಷ ಸೌಲಭ್ಯಕ್ಕೆ ಪ್ರತ್ಯೇಕ ಭತ್ಯೆ ಭರಿಸಬೇಕೆ ಅಥವಾ ಪ್ಯಾನ್, ಆಧಾರ್ ಕಾರ್ಡ್ ಲಿಂಗ್ ಮಾಡಿದರೆ ಸಾಕಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದು ಯಾವಾಗಿನ ವಿಡಿಯೋ ಎಂದು ತಿಳಿದಿಲ್ಲವಾದರೂ, ಕಳೆದ ಎರಡು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಭಾರಿ ವೈರಲ್ ಆಗಿದೆ.
ಇನ್ನೂ ಕೆಲವರು ಪ್ರತಿಕ್ರಿಯೆ ನೀಡಿದ್ದು, ವಂದೇ ಭಾರತ್‌ನಲ್ಲಿ ಪ್ರಯಾಣಿಸಲು ದುಬಾರಿ ಟಿಕೆಟ್ ಬೆಲೆ ಇದ್ದು, ಉತ್ತಮ ಗುಣಮಟ್ಟದ ಸೇವೆ ಕೊಡುವುದನ್ನು ರೈಲ್ವೆ ಇಲಾಖೆ ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನೂ ಕೆಲವರು, ಹೊಸ ರೈಲುಗಳನ್ನು ಉದ್ಘಾಟನೆ ಮಾಡುವ ಅವಸರದಲ್ಲಿ ಇಂತಹ ಎಡವಟ್ಟುಗಳಾಗಿವೆ ಎಂದು ದೂರಿದ್ದಾರೆ.
ಮತ್ತೊಬ್ಬರು ಟ್ವೀಟ್ ಮಾಡಿದ್ದು, ಹೌದು ಕಳೆದ ತಿಂಗಳು ನಾನು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುವಾಗ ಇದೇ ರೀತಿಯ ಸಮಸ್ಯೆಯಾಗಿತ್ತು. ಎಸಿಯಿಂದ ನೀರು ಸೋರುತ್ತಿದೆ ಎಂದು ಕೂಗುತ್ತಿದ್ದರು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತೊಬ್ಬರು ಟ್ವೀಟ್ ಮಾಡಿ, "ಈ ವಿಡಿಯೋ ಅಸಲಿಯೋ? ನಕಲಿಯೋ? ಎಂದು ಪ್ರಶ್ನೆ ಮಾಡಿದ್ದಾರೆ, ಒಂದು ವೇಳೆ ಇದು ನಕಲಿಯಾಗಿದ್ದರೆ ಇದನ್ನು ಹಂಚಿಕೊಂಡವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ, ಒಂದು ವೇಳೆ ಅಸಲಿಯಾಗಿದ್ದರೆ ಈ ರೀತಿಯ ಅವ್ಯವಸ್ಥೆಯ ಹೊಣೆಯನ್ನು ಯಾರು ಹೊರುತ್ತಾರೆ? ಎಂದು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications