Watch Viral News: 63 ಜನರ ಜೀವ ಉಳಿಸಿದ ಸಾಕುನಾಯಿ: ಬೊಗಳಿ ಬೊಗಳಿ ಹೀರೋ ಆದ 'ರಾಕಿ'!

Watch Viral News: ನಾಯಿಗಳೆಂದರೆ ಕೆಲವರಿಗೆ ಪ್ರಾಣ. ಮನೆ ಮಕ್ಕಳಂತೆ ನಾಯಿಗಳನ್ನು ಸಾಕುತ್ತಾರೆ. ಮಾಲೀಕರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ, ಮನುಷ್ಯನ ಕ್ರಿಯೆಗೆ ಸ್ಪಂದಿಸುವ ಸಾಕು ಪ್ರಾಣಿಗಳಲ್ಲಿ ನಾಯಿಗೆ ಅಗ್ರಸ್ಥಾನವಿದೆ. ಇಂತಹ ನಾಯಿಯೊಂದು ಸುಮಾರು 63 ಜೀಗಳನ್ನು ಉಳಿಸಿ ಅಚ್ಚರಿ ಮೂಡಿಸಿದೆ. ಕೊಂಚ ತಡವಾಗಿದ್ದರು ಮನೆಗಳ ಅವಶೇಷಗಳಡಿ ಸಿಕ್ಕು ಜಲಸಮಾಧಿ ಆಗುತ್ತಿದ್ದ ಹತ್ತಾರು ಕುಟುಂಬಗಳನ್ನು ನಾಯಿ ರಕ್ಷಣೆ ಮಾಡಿದ ಘಟನೆ ನಡೆದಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಜೂನ್ 26 ರಂದು ಈ ಘಟನೆ ನಡೆದಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಅಂದು ನಿರಂತರವಾಗಿ ಭಾರೀ ಮಳೆ ಸುರಿದಿತ್ತು. ಮಳೆಗೆ ಪ್ರವಾಹ ಸ್ಥಿತಿ ಉಂಟಾಗಿತ್ತು. ಇದೇ ವೇಳೆ ಭೀಕರ ಭೂಕುಸಿತ ಸಂಭವಿಸುವ ಮುನ್ನ ಸಾಕು ನಾಯಿ ರಾಕಿ ಕೊಟ್ಟ ಎಚ್ಚರಿಕೆಯಿಂದ 63 ಜೀವಗಳು ಬದುಕುಳಿದವರು.

Watch Viral News of Hero Dog Rocky Saves 63 Lives from Landslide in Himachal Pradesh

ಇಲ್ಲಿನ ಸಿಯಾತಿ ಗ್ರಾಮದಲ್ಲಿ ಭಾರೀ ಮಳೆಗೆ ಜನರು ರಾತ್ರಿ ಬಾಗಿಲು ಹಾಕಿಕೊಂಡು ಮನೆಯೊಳಗೆ ಬೆಚ್ಚಗೆ ನಿದ್ದೆ ಮಾಡುತ್ತಿದ್ದರು. ತಡರಾತ್ರಿ 12:30 ರಿಂದ 1:00 ಗಂಟೆ ಹೊತ್ತಿಗೆ ಮಳೆ ಮತ್ತಷ್ಟು ಜೋರಾಗಿದೆ. ಮನೆಯ ನೆಲ ಮಹಡಿಯಲ್ಲಿ ಮಲಗಿದ್ದ ನಾಯಿ ವಿಪರೀತವಾಗಿ ಕೂಗಲಾರಂಭಿಸಿದೆ. ಅದರ ಬೊಗಳಿಕೆ ನೋಡಿ ರಾಕಿ ಮಾಲೀಕ ಲಲಿತ್ ಕುಮಾರ್ ಎಚ್ಚರಗೊಂಡಿದ್ದಾರೆ. ಏಕಷ್ಟು ಗದ್ದಲ ಮಾಡುತ್ತಿದೆ ಎಂದು ನೋಡಿದಾಗ, ಗೋಡೆ ಬಿರುಕು ಬಿಟ್ಟದ್ದನ್ನು ನೋಡಿ ನಾಯಿ ಬೊಗಳುತ್ತಿರುವುದು ಗೊತ್ತಾಗಿದೆ. ಅಲ್ಲಿಂದಲೇ ಮನೆಗೆ ವೇಗವಾಗಿ ನೀರು ನುಗ್ಗಿ ಬರುತ್ತಿದ್ದನ್ನು ಲಲಿತ್ ಗಮನಿಸಿದ್ದಾರೆ.

ಕೂಡಲೇ ನಾನು ಎರಡನೇ ಮಹಡಿಯಿಂದ ಕೆಳಗೆ ಧಾವಿಸಿ, ನಾಯಿಯನ್ನು ಎತ್ತಿಕೊಂಡು ಹೊಸ ಓಡಿ ಹೋದೆ. ಮಹಡಿಯಲ್ಲಿದ್ದವರಿಗೆ ಹಾಗೂ ನೆರೆ ಹೊರೆಯ ಕುಟುಂಬಗಳನ್ನು ಎಚ್ಚರಿಸಿದೆ. ಎಲ್ಲರು ಸುರಕ್ಷಿತ ಸ್ಥಳಕ್ಕೆ ಓಡಿ ಹೋದೆವು. ನೋಡ ನೋಡುತ್ತಿದ್ದಂತೆ ಭೂಕುಸಿತ ಸಂಭವಿಸಿತು. ಅಪಾರ ನೀರು ಮನೆಗಳತ್ತ ನುಗ್ಗಿತು. ಅನೇಕ ಮನೆಗಳು ನೆಲಸಮಗೊಂಡವು. ನಾವೆಲ್ಲರು ನಾಯಿ ಬೊಗಳಿದ್ದರಿಂದಲೇ ಅಪಾಯದಿಂದ ಪಾರಾದೆವು ಎಂದು ಲಲಿತ್ ಅವರು ತಿಳಿಸಿದ್ದಾರೆ.

12 ಮನೆಗಳು ನೆಲಸಮ, ಅಪಾರ ಹಾನಿ

ನಾನಿದ್ದ ಬಹುಮಹಡಿ ಸೇರಿದಂತೆ ನೆರೆ ಹೊರೆಯಲ್ಲಿ 22 ಕುಟುಂಬಗಳಿದ್ದವು. ಎಲ್ಲವು ಬೇರೆಡೆ ತೆರಳಿ ಜೀವ ಉಳಿಸಿಕೊಂಡೆವು. ನಂತರ ಕೆಲವೇ ನಿಮಿಷಗಳಲ್ಲಿ ಗ್ರಾಮದಲ್ಲಿ ಭಾರಿ ಭೂಕುಸಿತ ಸಂಭವಿಸಿತು. ಸುಮಾರು 12 ಮನೆಗಳು ಉರುಳಿಬಿದ್ದವು. ಕೇವಲ ನಾಲ್ಕು ಮನೆಗಳು ಉಳಿದವು. ಆರೇಳು ಮನೆಗಳು ಸಂಪೂರ್ಣ ಹಾಳಾಗಿವೆ ಎಂದು ಲಲಿತ್ ಮಾಹಿತಿ ನೀಡಿದರು.

ಅನೇಕ ಜೀವಗಳು ಉಳಿಸಿದ ಕೀರ್ತಿ ಲಲಿತ್ ಅವರ ಸಾಕು ನಾಯಿ ಹಾಗೂ ನಾಯಿ ಕ್ರಿಯೆಗೆ ಸ್ಪಂದಿಸಿ ತ್ವರಿತವಾಗಿ ಜನರನ್ನು ಎಬ್ಬಿಸಿದ ಲಲಿತ್ ಅವರಿಗೆ ಸಲ್ಲುತ್ತಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಕಪ್ಪು, ಕೆಂದು ಮಿಶ್ರಿತ ನಾಯಿಯ ಫೋಟೋ ಎಲ್ಲೆಡೆ ವೈರಲ್ ಆಗುತ್ತದೆ.

ಅದೃಷ್ಟ ರಾಕಿ ಎಂದ ಜನರು

ಸದ್ಯ ರಾಕಿಗೆ ಕೇಲವ ಎಂಟು ತಿಂಗಳು. ಐದು ತಿಂಗಳು ಇದ್ದಾಗ ಮಂಡಿಯ ಸ್ಯಾಂಡ್‌ಹೋಲ್‌ನಲ್ಲಿರುವ ತನ್ನ ಸಹೋದರನಿಂದ ತೆಗೆದುಕೊಂಡು ಬಂದಿದ್ದೆ. ರಾಕಿ ಇಲ್ಲಿಗೆ ಬಂದು ಮೂರು ತಿಂಗಳಾಯಿತು. ನಿವಾಸಿಗಳನ್ನು ಕೂಗಿ ಎಬ್ಬಿಸಿದಾಗ ಎಲ್ಲ ಹೊರ ನಡೆದರು. ನಂತರ ರಾಕಿ ಸಿಲುಕದಂತೆ ಅವನನ್ನು ರಕ್ಷಿಸಿ ಹೊರತಂದೆವು ಎಂದು ಲಲಿತ್ ಹೇಳಿಕೊಂಡಿದ್ದಾರೆ. ಎಲ್ಲರು ಇದು ಅದೃಷ್ಟದ ನಾಯಿ ಎಂದು ನಾಯಿ ನಿಯತ್ತು, ಸಮಯೋಚಿತ ನಡೆಯನ್ನು ಮೆಚ್ಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+