ಮೋದಿ ಪಾಠಶಾಲೆ: ತಾಯಿ ಜನ್ಮ ನೀಡಿದರೆ, ಶಿಕ್ಷಕರು ಜೀವನ ನೀಡುತ್ತಾರೆ

ನವದೆಹಲಿ, ಸೆ. 04: ದೆಹಲಿಯ ಮಾಣೆಕ್‌ ಷಾ ಸಭಾಂಗಣ­ದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರು ಶಿಕ್ಷಕರ ದಿನಾಚರಣೆ ಅಂಗವಾಗಿ ಭಾಷಣ ಮಾಡಿದ್ದಾರೆ, ಈ ಭಾಷಣ ಹಾಗೂ ಸಂವಾದ ಏಕಕಾಲಕ್ಕೆ ಟಿವಿ, ರೆಡಿಯೋ, ಸಾಮಾಜಿಕ ಜಾಲ ತಾಣಗಳಾದ ಯೂ ಟ್ಯೂಬ್ ಸೇರಿದಂತೆ ಹಲವಾರು ವೆಬ್‌ಸೈಟ್‌ಗಳಲ್ಲಿ ನೇರ ಪ್ರಸಾರವಾಗುತ್ತಿದೆ.

ತಾಯಿ ನಿಮಗೆ ಜನ್ಮ ನೀಡುತ್ತಾಳೆ, ನೌಕರಿ ಇಲ್ಲದೆ ಇದ್ದರು ಶಿಕ್ಷಕರು ಯಾವಾಗಲು ನಿವೃತ್ತಿ ಹೊಂದುವುದಿಲ್ಲ, ಕಲಿಸುವ ತುಡಿತ ಅವರಲ್ಲಿ ಇರುತ್ತದೆ ಎಂದು ಮೋದಿ ತಮ್ಮ ಪಾಠಶಾಲೆಯಲ್ಲಿ ಹೇಳಿದರು. [ಪಾಠ ಹೇಳಿದವರು ನಂತರ ರಾಜಕಾರಣಕ್ಕೆ ಬಂದರು]

ಇದೇ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ, ಶಿಕ್ಷಣತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸ್ಮರಣಾರ್ಥ 125 ಹಾಗೂ 10 ರು ಮೌಲ್ಯದ ವಿಶೇಷ ನಾಣ್ಯಗಳನ್ನು ಪ್ರಧಾನಿ ಮೋದಿ ಅವರು ಲೋಕಾರ್ಪಣೆ ಮಾಡಿದರು. [ಮಕ್ಕಳ ಮುಂದೆ ಬಾಲ್ಯದ ರಹಸ್ಯ ಬಿಚ್ಚಿಟ್ಟ ಮೋದಿ]

ಮೋದಿ ಅವರ ಭಾಷಣದ ವಿಡಿಯೋ ಮುಂದೆ ನೋಡಿ... ಭಾಷಣದ ನಂತರ ದೇಶದ ವಿವಿಧೆಡೆಗಳಿಂದ ಪ್ರಧಾನಿ ಮೋದಿ ಅವರ ಜೊತೆ ಸಂವಾದ ಕಾರ್ಯಕ್ರಮ ನಡೆಸಲಾಗುತ್ತಿದೆ.

ಮೋದಿ ಅವರಿಂದ ಸಂವಾದ ಕಾರ್ಯಕ್ರಮ

ಮೋದಿ ಅವರಿಂದ ಸಂವಾದ ಕಾರ್ಯಕ್ರಮ

ಭಾಷಣದ ನಂತರ ದೇಶದ ವಿವಿಧೆಡೆಗಳಿಂದ ಪ್ರಧಾನಿ ಮೋದಿ ಅವರ ಜೊತೆ ಸಂವಾದ ಕಾರ್ಯಕ್ರಮ ನಡೆಸಲಾಗುತ್ತಿದೆ. ಪ್ರಶ್ನೆ ಕೇಳುವ ವಿದ್ಯಾರ್ಥಿ/ನಿ ಯ ಸಾಧನೆ ಬಗ್ಗೆ ವಿಡಿಯೋ ತೋರಿಸಲಾಗುತ್ತಿದೆ.

ಮೋದಿ ಅವರ ಭಾಷಣದ ವಿಡಿಯೋ ಮುಂದೆ ನೋಡಿ

ಮೋದಿ ಅವರ ಭಾಷಣದ ವಿಡಿಯೋ ಮುಂದೆ ನೋಡಿ

ಹೆಚ್ಚು ಕಾಲ ಗ್ರಂಥಾಲಯದಲ್ಲಿ ಕಾಲ ಕಳೆಯುತ್ತಿದ್ದೆ

ಹೆಚ್ಚು ಕಾಲ ಗ್ರಂಥಾಲಯದಲ್ಲಿ ಕಾಲ ಕಳೆಯುತ್ತಿದ್ದೆ, ನನಗೆ ಸ್ವಾಮಿ ವಿವೇಕಾನಂದ ಅವರ ಜೀವನ ಸ್ಪೂರ್ತಿ ನೀಡಿದೆ ಎಂದು ಪ್ರಧಾನಿ ಹೇಳಿದರು.

ಡಿಜಿಟಲ್ ಇಂಡಿಯಾ ಹೇಗೆ ಸಾಕಾರಗೊಳ್ಳಲಿದೆ?

ಡಿಜಿಟಲ್ ಇಂಡಿಯಾ ಹೇಗೆ ಸಾಕಾರಗೊಳ್ಳಲಿದೆ? ದೇಶದಲ್ಲಿ ಎಷ್ಟೋ ಕಡೆ ವಿದ್ಯುತ್ ಪೂರೈಕೆ ಇಲ್ಲವಲ್ಲ ಎಂದು ಉತ್ತರಾಖಂಡ್ ನ ಸಾರ್ಥಕ್ ಭಾರದ್ವಾಜ್ ಪ್ರಶ್ನೆ..
ಮೋದಿ: ಮುಂದಿನ 1000 ದಿನಗಳಲ್ಲಿ 18,000 ಗ್ರಾಮಗಳಿಗೆ ವಿದ್ಯುತ್ ಒದಗಿಸುತ್ತೇವೆ ಎಂದು ಭರವಸೆ ನೀಡಿದ ಮೋದಿ.

ಮಾಣಿಕ್ ಷಾ ಆಡಿಟೋರಿಯಂನಲ್ಲಿ ಸಂವಾದ

ಮಾಣಿಕ್ ಷಾ ಆಡಿಟೋರಿಯಂನಲ್ಲಿ ಸಂವಾದದ ನಡುವೆ ವಿದ್ಯಾರ್ಥಿಗಳ ಜೊತೆ ಸಂತಸ ಹಂಚಿಕೊಂಡ ಮೋದಿ

ಸ್ವಚ್ಛಭಾರತ ಯೋಜನೆ ಬಗ್ಗೆ ಪ್ರಶ್ನೆ

ಬೆಂಗಳೂರಿನ ಶಾಲೆ ವಿದ್ಯಾರ್ಥಿನಿಯಿಂದ ಸ್ವಚ್ಛಭಾರತ ಯೋಜನೆ ಬಗ್ಗೆ ಪ್ರಶ್ನೆ

ಶಾಲಾ ಮಕ್ಕಳು ಈ ಯೋಜನೆಯಲ್ಲಿ ಕೈಜೋಡಿಸಿದರೆ ಇಡೀ ಭಾರತ ಸ್ವಚ್ಛ ಮಾಡುವುದು ಕಷ್ಟದ ಕೆಲಸವಲ್ಲ, ತ್ಯಾಜ್ಯ ನಿರ್ವಹಣೆ ಬಗ್ಗೆ ಅಪ್ಲಿಕೇಷನ್ ಮಾಡುವ ನಿಮಗೆ ಈ ಕೆಲಸ ಕಷ್ಟವಲ್ಲ: ಮೋದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+