• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಕ್ಕಳ ಮುಂದೆ ಬಾಲ್ಯದ ರಹಸ್ಯ ಬಿಚ್ಚಿಟ್ಟ ಮೋದಿ

By Mahesh
|

ನವದೆಹಲಿ, ಸೆ.5: ಶಿಕ್ಷಕರ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧೆಡೆ ಇರುವ ಮಕ್ಕಳನ್ನು ಉದ್ದೇಶಿಸಿ ಶುಕ್ರವಾರ ಮಧ್ಯಾಹ್ನ ಭಾಷಣ ಮಾಡಿದರು. ಭಾಷಣಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳೊಡನೆ ಮೋದಿ ನಡೆಸುವ ಸಂವಾದ ಬೃಹತ್ ಮಟ್ಟದಲ್ಲಿ ಎಲ್ಲೆಡೆ ಪ್ರಸಾರವಾಗಿದೆ. ಮಕ್ಕಳ ಜೊತೆ ನಡೆದ ಸಂವಾದದಲ್ಲಿ ಮಾತನಾಡುತ್ತಾ ತಮ್ಮ ಬಾಲ್ಯದ ದಿನದ ರಹಸ್ಯಗಳನ್ನು ಮೋದಿ ಬಿಚ್ಚಿಟ್ಟರು.

ನವದೆಹಲಿಯ ದೆಹಲಿಯ ಮಾಣೆಕ್‌ ಷಾ ಸಭಾಂಗಣ­ದಲ್ಲಿ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮೋದಿ ಅವರು ಭಾಷಣ ಮಾಡಿದರು., ಈ ಭಾಷಣ ಹಾಗೂ ಸಂವಾದ ಏಕಕಾಲಕ್ಕೆ ಟಿವಿ, ರೆಡಿಯೋ, ಸಾಮಾಜಿಕ ಜಾಲ ತಾಣಗಳಾದ ಯೂ ಟ್ಯೂಬ್ ಸೇರಿದಂತೆ ಹಲವಾರು ವೆಬ್‌ಸೈಟ್‌ಗಳಲ್ಲಿ ನೇರ ಪ್ರಸಾರವಾಗಿದೆ.

ಕರ್ನಾಟಕದಲ್ಲೂ ವ್ಯವಸ್ಥೆಯಾಗಿದೆ: ಪ್ರಧಾನಿ ನರೇಂದ್ರ ಮೋದಿ ಶಿಕ್ಷಕರ ದಿನವಾದ ಶುಕ್ರವಾರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡುವ ಭಾಷಣವನ್ನು ಕರ್ನಾಟಕದ 56 ಲಕ್ಷಕ್ಕೂ ಅಧಿಕ ಮಕ್ಕಳು ವೀಕ್ಷಿಸಲಿದ್ದಾರೆ. ರಾಜ್ಯದ ವಿದ್ಯಾರ್ಥಿ­ಗಳಿಗೆ ಈ ಭಾಷಣದ ವೀಕ್ಷಣೆಗೆ ಅವಕಾಶ ಕಲ್ಪಿಸಲು ರಾಜ್ಯ ಶಿಕ್ಷಣ ಇಲಾಖೆ ಸಕಲ ರೀತಿಯಲ್ಲಿ ಸಜ್ಜಾಗಿದೆ.[ತಂದೆ-ತಾಯಿ ಎರಡೂ ಆಗಬಲ್ಲವನೇ ಗುರು]

ಡಿಡಿ ನ್ಯೂಸ್‌, ಡಿಡಿ ಭಾರತಿ, ಡಿಡಿ ಚಂದನ ಸೇರಿದಂತೆ 15 ಪ್ರಾದೇಶಿಕ ಚಾನೆಲ್‌ಗಳು, 52 ಖಾಸಗಿ ಚಾನೆಲ್‌ಗಳು ಮತ್ತು ಆಕಾಶವಾಣಿ­ ನೇರಪ್ರಸಾರ ಲಭ್ಯವಿದೆ. ಕಾರ್ಯಕ್ರಮದ ವಿಡಿಯೋ ವೀಕ್ಷಿಸಿ...

ಮೋದಿ ಭಾಷಣ ಹಾಗೂ ಸಂವಾದದ ಮುಖ್ಯಾಂಶಗಳು

* ಚಿಕ್ಕಂದಿನಲ್ಲಿ ಎಂದಾದರೂ ಪ್ರಧಾನಿಯಾಗುವ ಕನಸು ಕಂಡಿದ್ರಾ?

-ಇಲ್ಲ, ಸಾಮಾನ್ಯ ಕುಟುಂಬದ ಮಗುವಾಗಿ ಬೆಳೆದ ನಾನು ಶಾಲೆಯ ವಿದ್ಯಾರ್ಥಿ ಮುಖ್ಯಸ್ಥನಾಗುವ ಬಗ್ಗೆಯೂ ಯೋಚಿಸಿರಲಿಲ್ಲ.

* ನಾನು ದೇಶದ ಪ್ರಧಾನಿಯಾಗಬಹುದೇ?

- ಜನ ಸಾಮಾನ್ಯನೊಬ್ಬ ಉನ್ನತ ಪದವಿಗೇರಬಹುದು ಎಂಬುದು ಸಾಬೀತಾಗಿದೆ. ಧೈರ್ಯವಾಗಿ 2024ರ ಚುನಾವಣೆಗೆ ಸಿದ್ಧವಾಗು.

* ನಿಜ ಹೇಳಿ ಚಿಕ್ಕಂದಿನಲ್ಲಿ ನೀವು ಯಾವ ರೀತಿ ವಿದ್ಯಾರ್ಥಿಯಾಗಿದ್ರಿ?

- ತುಂಟತನವಿರದ ವಿದ್ಯಾರ್ಥಿಗಳಿಲ್ಲ. ತುಂಟನಾಗಿರದಿದ್ದರೆ ಮಗುವಿನ ದೋಷವಲ್ಲ, ಅದು ವ್ಯವಸ್ಥೆಯ ದೋಷವಾಗಿರುತ್ತದೆ. ನಿಜ ಹೇಳಬೇಕೆಂದರೆ ನಾನು ತುಂಬಾ ತುಂಟನಾಗಿದ್ದೆ. ಮದುವೆ ಸಮಾರಂಭಕ್ಕೆ ಹೋದಾಗ ಗಂಡು ಹೆಣ್ಣಿನ ಉಡುಗೆಗಳಿಗೆ ಸ್ಟೆಪ್ಲರ್ ಬಳಸಿ ಬೆಸುಗೆ ಹಾಕುತ್ತಿದ್ದೆವು. ಪೀಪೀ ಊದುವವರ ಮುಂದೆ ಹುಣಸೆ ಹಣ್ಣು ಇಟ್ಟುಕೊಂಡು ಸತಾಯಿಸುತ್ತಿದ್ದೆವು.

* ನಮ್ಮೊಳಗಿನ ತುಂಟತನದ ಮಗುವಿನಂಥ ಮನಸ್ಸು ನನ್ನನ್ನು ಸದಾ ಜಾಗೃತಗೊಳಿಸುತ್ತದೆ.

* ಗೂಗಲ್ ಗುರುವಿನಿಂದ ನಿಮಗೆ ಮಾಹಿತಿಯಷ್ಟೆ ಸಿಗುತ್ತದೆ ಅದರೆ, ಜ್ಞಾನ ಸಿಗುವುದಿಲ್ಲ. ಸರಿ ತಪ್ಪಿನ ಅರಿವು ಪಡೆಯಲು ಸಾಧ್ಯವಿಲ್ಲ.

* ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳ ಸಾಧಕರ ಆತ್ಮಕಥೆಗಳನ್ನು ತಪ್ಪದೇ ಓದಬೇಕು. ಇದರಿಂದ ಸತ್ಯದ ದರ್ಶನವಾಗಲಿದೆ.

* ತಂತ್ರಜ್ಞಾನದ ಮಹತ್ವ ದಿನೇದಿನೇ ಹೆಚ್ಚಾಗುತ್ತಿದೆ. ಮಕ್ಕಳು ತಂತ್ರಜ್ಞಾನದ ಸದ್ಬಳಕೆ ಮಾಡಿಕೊಳ್ಳಲು ಉತ್ತೇಜಿಸಬೇಕು. ಇಲ್ಲದಿದ್ದರೆ ಇದು ಸಾಮಾಜಿಕ ದುರಂತವಾಗಲಿದೆ.

* ವಿದ್ಯಾರ್ಥಿ ಜೀವನದಲ್ಲಿ ನೂರಾರು ಕನಸುಗಳನ್ನು ಕಾಣಬೇಕು. ಒಳ್ಳೆ ಸಂಕಲ್ಪ, ಶ್ರದ್ಧೆಯಿದ್ದರೆ ನಿಮ್ಮ ಕನಸು ಖಂಡಿತಾ ಈಡೇರುವುದು.

* ಜಪಾನ್ ಪ್ರವಾಸದ ವೇಳೆ ಶಾಲಾ ಮಕ್ಕಳು ತಮ್ಮಮ್ಮ ಕೊಠಡಿ ಸ್ವಚ್ಛತೆ ಬಗ್ಗೆ ನೀಡಿದ ಮಹತ್ವ ನಮ್ಮನ್ನು ಸ್ತಂಭೀಭೂತನನ್ನಾಗಿಸಿತು.

* ಅನೇಕ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ವಿದ್ಯಾರ್ಥಿನಿಯರಿಗೆ ಬೇಕಾದ ಅಗತ್ಯ ಸೌಲಭ್ಯ ನೀಡಲು ಶಾಲೆಗಳ ನೆರವು ಬೇಕಿದೆ.

* ದೇಶದ ಭವಿಷ್ಯದ ಬೆಳಕುಗಳಾದ ನಿಮ್ಮೊಂದಿಗೆ ಸಂವಾದ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ ಎಂದು ಪ್ರಧಾನಿ ಮೋದಿ ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Teacher’s Day:In the first mass contact programme of its kind, Prime Minister Narendra Modi interacting live with millions of young students and teachers across the nation on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more