ಅಮೀರ್ ಖಾನ್ ಜತೆ ಕೆಲಸ ಮಾಡುವುದು ನನಗಿಷ್ಟ: ಮಾನುಷಿ ಚಿಲ್ಲಾರ್

Subscribe to Oneindia Kannada

ಮುಂಬೈ, ನವೆಂಬರ್ 27: ಮಿಸ್ ವರ್ಲ್ಡ್ - 2017ಕಿರೀಟ ಗೆದ್ದು ಭಾರತಕ್ಕೆ ಆಗಮಿಸಿರುವ ಚೆಲುವೆ ಮಾನುಷಿ ಚಿಲ್ಲಾರ್ ಇಂದು ಮುಂಬೈನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭ ಆಕೆ ಹಲವು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಮಾನುಷಿ ಚಿಲ್ಲರ್ ಬಗ್ಗೆ ಶಶಿ ತರೂರ್ ವ್ಯಂಗ್ಯ: ಮಹಿಳಾ ಮಣಿಗಳ ಆಕ್ರೋಶ

ದೈಹಿಕ ಸೌಂದರ್ಯ... ಹಿಂದಿ ಸಿನಿಮಾಗಳಲ್ಲಿ ನಟನೆ... ಋತುಸ್ರಾವದ ಸಂದರ್ಭದ ಸ್ವಚ್ಛತೆ... ದೀಪಿಕಾ ಪಡುಕೋಣೆಗೆ ಬರುತ್ತಿರುವ ಬೆದರಿಕೆ... ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನ.. ಹೀಗೆ ಸಾಲು ಸಾಲು ವಿಚಾರಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮನಬಿಚ್ಚಿ ಮಾತನಾಡಿದರು ಮಾನುಷಿ ಚಿಲ್ಲಾರ್.

ಮಿಸ್ ವರ್ಲ್ಡ್ ಗೋಸ್ ಟು.. ಇಂಡಿಯಾ! ಪ್ರಶಸ್ತಿ ಗೆದ್ದ ಹರ್ಯಾಣದ ಚೆಲುವೆ

ಇತ್ತೀಚೆಗೆ ಚೀನಾದ ಸನ್ಯಾದಲ್ಲಿ ನಡೆದ ಮಿಸ್ ವರ್ಲ್ಡ್ 2017ರ ಸ್ಪರ್ಧೆಯಲ್ಲಿ ಹರ್ಯಾಣದ 20 ವರ್ಷದ ಮೆಡಿಕಲ್ ವಿದ್ಯಾರ್ಥಿ ಮಾನುಷಿ ಚಿಲ್ಲಾರ್ ಕಿರೀಟ ಗೆದ್ದುಕೊಂಡಿದ್ದರು.

ಬೇಟಿ ಬಚಾವೋ ಬೇಟಿ ಪಡಾವೋಗೆ ಕೊಡುಗೆ

ಬೇಟಿ ಬಚಾವೋ ಬೇಟಿ ಪಡಾವೋಗೆ ಕೊಡುಗೆ

"ಹರ್ಯಾಣ ಸರ್ಕಾರ ನನಗೆ ನೀಡುತ್ತಿರುವ ಎಲ್ಲಾ ಸೌಲಭ್ಯಗಳಿಗಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಅವುಗಳಲ್ಲಿ ಒಂದು ನಾನು ಸರ್ಕಾರಿ ಕಚೇರಿಯಲ್ಲಿ ತೆಗೆದುಕೊಳ್ಳಬಹುದಾದ ಸ್ಥಾನವಾಗಿದೆ. ಇದೇ ಸಂದರ್ಭದಲ್ಲಿ ನಾನು 'ಬೇಟಿ ಬಚಾವೊ ಬೇಟಿ ಪಡಾವೋ' ಆಂದೋಲನಕ್ಕೆ ಕೊಡುಗೆ ನೀಡಲು ಬಯಸುತ್ತೇನೆ," ಎಂದು ಮಾನುಷಿ ಚಿಲ್ಲಾರ್ ಹೇಳಿದರು.

ಅಮೀರ್ ಖಾನ್ ಗೆ ನಟಿ

ಅಮೀರ್ ಖಾನ್ ಗೆ ನಟಿ

"ಎಲ್ಲಾ ನಟರು ತುಂಬಾ ಸುಂದರ ಮತ್ತು ಪ್ರತಿಭಾವಂತರು. ಆದರೆ ನಾನು ಅಮೀರ್ ಖಾನ್ ಅವರೊಂದಿಗೆ ಕೆಲಸ ಮಾಡಲು ಇಚ್ಛಿಸುತ್ತೇನೆ. ಅವರು ನಿಜವಾಗಿಯೂ ಸವಾಲಿನ ಪಾತ್ರಗಳನ್ನು ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರ ಚಲನಚಿತ್ರಗಳು ಸಂದೇಶವನ್ನು ನೀಡುವುದರ ಜತೆಗೆ ಸಮಾಜದೊಂದಿಗೆ ಸಂಪರ್ಕ ಕಲ್ಪಿಸುತ್ತವೆ," ಎಂದು ಮಿಸ್ ವರ್ಲ್ಡ್ ಹೇಳಿದ್ದು, "ಪ್ರಿಯಾಂಕಾ ಚೋಪ್ರಾ ಅವರು ನನ್ನ ಪ್ರಿಯವಾದ ನಟಿ" ಎಂದಿದ್ದಾರೆ.

ಮಹಿಳೆಯರಲ್ಲಿ ಆತ್ಮವಿಶ್ವಾಸ ವೃದ್ಧಿ

ಮಹಿಳೆಯರಲ್ಲಿ ಆತ್ಮವಿಶ್ವಾಸ ವೃದ್ಧಿ

ಪದ್ಮಾವತಿ ಸಿನಿಮಾಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಬರುತ್ತಿರುವ ಬೆದರಿಕೆಗಳ ಬಗ್ಗೆ ಮಾತನಾಡಿರುವ ಮಾನುಷಿ ಚಿಲ್ಲಾರ್, "ಭಾರತೀಯ ಮಹಿಳೆಯರಲ್ಲಿ ಒಂದು ಸಾಮ್ಯತೆ ಇದೆ. ಇದು ಮಹಿಳೆಯರ ಸ್ನೇಹಿ ಸಮಾಜವಲ್ಲವೆಂದು ನಾವು ಭಾವಿಸುತ್ತೇವೆ. ಆದರೆ ಪ್ರತ್ಯೇಕ ವ್ಯಕ್ತಿಗಳಾಗಿ ನಾವು ಮಾದರಿಗಳಾಗುತ್ತೇವೆ ಈ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತೇವೆ," ಎಂದಿದ್ದಾರೆ.

ಬರಿಯ ದೈಹಿಕ ಸೌಂದರ್ಯವಲ್ಲ

ಬರಿಯ ದೈಹಿಕ ಸೌಂದರ್ಯವಲ್ಲ

ಮಿಸ್ ವರ್ಲ್ಡ್ ಎನ್ನುವುದು ಬರಿಯ ದೈಹಿಕ ಸೌಂದರ್ಯ ಮಾತ್ರವಲ್ಲ. ಈ ಸೌಂದರ್ಯವನ್ನು ನೀವು ಯಾವುದಾದರೂ ಉತ್ತಮ ಕೆಲಸಕ್ಕೆ ಹೇಗೆ ಬಳಸಿಕೊಳ್ಳುತ್ತೀರಿ ಎಂಬುದಾಗಿ ಎಂದು ಮಾನುಷಿ ವಿವರಣೆ ನೀಡಿದ್ದಾರೆ.

ಋತುಸ್ರಾವ ನೈರ್ಮಲ್ಯ ಯೋಜನೆ

ಋತುಸ್ರಾವ ನೈರ್ಮಲ್ಯ ಯೋಜನೆ

ಋತುಸ್ರಾವ ನೈರ್ಮಲ್ಯ ಯೋಜನೆ ಬಗ್ಗೆ ಮಾತನಾಡಿದ ಮಾನುಷಿ, "ನಾನು ಈ ಯೋಜನೆಯನ್ನು ಪ್ರಾರಂಭಿಸಿದಾಗ, ಮುಟ್ಟಿನ ನೈರ್ಮಲ್ಯದ ಬಗ್ಗೆ ಮತ್ತು ನ್ಯಾಪ್ಕಿನ್ ಗಳ ಲಭ್ಯತೆಯ ಬಗ್ಗೆ ಕಡಿಮೆ ಅರಿವು ಇದೆ ಎಂಬುದನ್ನು ಅರಿತುಕೊಂಡೆ. ನಂತರ ನಾವು ಅದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂಬುದನ್ನು ತಿಳಿದುಕೊಂಡೆ," ಎಂಬುದಾಗಿ ಅವರು ಹೇಳಿದರು.

ಬಾಲಿವುಡ್ ಬಗ್ಗೆ ಮನಸ್ಸಿಲ್ಲ

ಬಾಲಿವುಡ್ ಬಗ್ಗೆ ಮನಸ್ಸಿಲ್ಲ

"ಋತುಸ್ರಾವದ ನೈರ್ಮಲ್ಯದ ಬಗ್ಗೆ ನಾನು ಜಾಗೃತಿ ಮೂಡಿಸುತ್ತಿದ್ದೇನೆ ಎಂದು ನನಗೆ ಖುಷಿಯಾಗುತ್ತಿದೆ. ಜತೆಗೆ ನಾನು ಇತರ ಮಿಸ್ ವರ್ಲ್ಡ್ ಗಳ ಸಾಲಿನಲ್ಲಿ ಸೇರಿಕೊಳ್ಳುತ್ತಿದ್ದೇನೆ. ಇದೂ ನನಗೆ ಸಂಭ್ರಮದ ವಿಷಯ," ಎಂದು ಹೇಳಿದ ಮಾನುಷಿ, "ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಮನಸ್ಸು ನನಗೆ ಈಗ ಇಲ್ಲ," ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Miss World Manushi Chhillar says she would love to work in an Aamir Khan film as the superstar is known to make socially-relevant movies.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ