ಅರ್ನಬ್ 'ರಿಪಬ್ಲಿಕ್' ಟಿವಿ ಆರಂಭಕ್ಕೆ ಕಾಲ ಕೂಡಿ ಬಂತು!
ಪತ್ರಕರ್ತ ಅರ್ನಬ್ ಗೋಸ್ವಾಮಿಗಳ ಅಭಿಮಾನಿಗಳಿಗೆ ಸಂತಸದ ಸುದ್ದಿ ಇಲ್ಲಿದೆ. ಟೈಮ್ಸ್ ನೌನ ಮಾಜಿ ಉದ್ಯೋಗಿ ಅರ್ನಬ್ ಅವರ ಹೊಚ್ಚ ಹೊಸ ಟಿವಿ ಚಾನೆಲ್ ರಿಪಬ್ಲಿಕ್ ಟಿವಿ ಆರಂಭವಾಗುವ ಕಾಲ ಸನ್ನಿಹಿತವಾಗಿದ್ದು, ಮೇ ತಿಂಗಳಿನಲ್ಲಿ ಮೊದಲ ಶೋ ಕಾಣಬಹುದು.
ನವದೆಹಲಿ, ಏಪ್ರಿಲ್ 12: ಪತ್ರಕರ್ತ ಅರ್ನಬ್ ಗೋಸ್ವಾಮಿಗಳ ಅಭಿಮಾನಿಗಳಿಗೆ ಸಂತಸದ ಸುದ್ದಿ ಇಲ್ಲಿದೆ. ಟೈಮ್ಸ್ ನೌನ ಮಾಜಿ ಉದ್ಯೋಗಿ ಅರ್ನಬ್ ಅವರ ಹೊಚ್ಚ ಹೊಸ ಟಿವಿ ಚಾನೆಲ್ ರಿಪಬ್ಲಿಕ್ ಟಿವಿ ಆರಂಭವಾಗುವ ಕಾಲ ಸನ್ನಿಹಿತವಾಗಿದ್ದು, ಮೇ ತಿಂಗಳಿನಲ್ಲಿ ಮೊದಲ ಶೋ ಕಾಣಬಹುದು.
ಚಾನೆಲ್ ಆರಂಭಕ್ಕೆ ಇದ್ದ ವಿಘ್ನ ನಿವಾರಣೆಯಾಗಿದ್ದು, ಸುದ್ದಿ ವಾಹಿನಿಯ ಟೆಸ್ಟ್ ರನ್ ಈಗಾಗಲೇ ಆರಂಭವಾಗಿದೆ. ಮೇ ತಿಂಗಳಿನಲ್ಲಿ ಚಾನೆಲ್ ಆರಂಭವಾಗಲಿದೆ ಎಂಬ ಸುದ್ದಿ ಲಭ್ಯವಾಗಿದ್ದರೂ ದಿನಾಂಕ ಇನ್ನೂ ನಿಗದಿಯಾಗಿಲ್ಲ. [ಅರ್ನಬ್ 'ರಿಪಬ್ಲಿಕ್' ಸಂಸ್ಥೆಗೆ ಸಂಸದ ರಾಜೀವ್ ಹೂಡಿಕೆ!]

ಕಳೆದ ನಾಲ್ಕು ತಿಂಗಳಿನಿಂದ ಚಾನೆಲ್ ಆರಂಭದ ಬಗ್ಗೆ ಸುದ್ದಿ ಬರುತ್ತಲೇ ಇದೆ. ವಿವಿಧ ಮಾಧ್ಯಮಗಳ ಪ್ರಮುಖರನ್ನು ಅರ್ನಬ್ ಅವರು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ.
ಟೈಮ್ಸ್ ನೌ ಮಾಜಿ ಎಡಿಟರ್ ಇನ್ ಚೀಫ್ ಅರ್ನಬ್ ಗೋಸ್ವಾಮಿ ಅವರ ಹೊಸ ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಹೂಡಿಕೆದಾರರ ವಿವರ ಬಹಿರಂಗವಾಗಿದೆ. ಬಿಜೆಪಿ ಬೆಂಬಲಿತ ರಾಜೀವ್ ಚಂದ್ರಶೇಖರ್ ಹಾಗೂ ಉದ್ಯಮಿ ಮೋಹನ್ ದಾಸ್ ಪೈ ಹೂಡಿಕೆ ಮಾಡಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ರಿಪಬ್ಲಿಕ್ ಹೆಸರಿನ ಈ ಸುದ್ದಿ ಚಾನೆಲ್ ನವೆಂಬರ್ ಕೊನೆಗೆ ಅಪ್‌ಲಿಂಕ್ ಹಾಗೂ ಡೌನ್‌ಲೋಡಿಂಗ್ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿದೆ. ರಿಪಬ್ಲಿಕ್, ಎಆರ್ ಸಿ ಔಟ್ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಯ ಅಂಗ ಸಂಸ್ಥೆಯಾಗಿದೆ.
1995ರಲ್ಲಿ ಟಿವಿ ಲೋಕಕ್ಕೆ ಪರಿಚಿತರಾದ ಅರ್ನಬ್ ಅವರು ಟೈಮ್ ನೌ ನ ಪ್ರಧಾನ ಸಂಪಾದಕರಾಗಿದ್ದರು. ಟೈಮ್ಸ್ ನೌ ಸಂಸ್ಥೆಗೂ ಮುನ್ನ ಕೋಲ್ಕತ್ತಾದ ದಿ ಟೆಲಿಗ್ರಾಫ್ ನಲ್ಲಿ ಪತ್ರಕರ್ತರಾಗಿ ಸಿಎನ್ಎನ್ ಐಬಿಎನ್ ನಲ್ಲಿ ರಾಜದೀಪ್ ಸರ್ದೇಸಾಯಿ ಹಾಗೂ ಎನ್ ಡಿ ಟಿವಿಯಲ್ಲಿ ಪ್ರಣವ್ ರಾಯ್ ಅವರ ಜತೆ ಕಾರ್ಯನಿರ್ವಹಿಸಿದ್ದರು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications