ನರೇಗಾ ಯೋಜನೆ ದಿನದ ಕೂಲಿ 202 ರೂ.ಗೆ ಏರಿಕೆ

ನವದೆಹಲಿ, ಮೇ 14 : "ನರೇಗಾ ಯೋಜನೆಯಡಿ ಪ್ರತಿ ದಿನದ ಕೆಲಸಕ್ಕೆ ನೀಡುತ್ತಿದ್ದ ಕೂಲಿಯನ್ನು 182 ರೂ. ಗಳಿಂದ 202 ರೂ.ಗಳಿಗೆ ಏರಿಕೆ ಮಾಡಲಾಗುತ್ತದೆ" ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

Recommended Video

      ನಡೆದು ಹೋಗ್ತಿರೋ ಅಮ್ಮನ ಸೂಟ್ ಕೇಸ್ ಮೇಲೆಯೇ ನಿದ್ರೆ ಮಾಡ್ತಿರೋ ಕಂದ..ಸರ್ಕಾರಕ್ಕೆ ಕಣ್ಣಿಲ್ವಾ? | Punjab

      ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು 20 ಲಕ್ಷ ಕೋಟಿ ಪ್ಯಾಕೇಜ್‌ನ ಎರಡನೇ ಹಂತದ ವಿವರಗಳನ್ನು ನೀಡಿದರು. "ಕನಿಷ್ಠ ಕೂಲಿಯನ್ನು ಎಲ್ಲಾ ಕಾರ್ಮಿಕರಿಗೂ ಅನ್ವಯವಾಗುವಂತೆ ಜಾರಿಗೊಳಿಸಲಾಗುತ್ತದೆ. ಪ್ರಸ್ತುತ ಶೇ 30ರಷ್ಟು ಕಾರ್ಮಿಕರಿಗೆ ಮಾತ್ರ ಇದೆ" ಎಂದರು.

      "ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಕನಿಷ್ಠ ಕೂಲಿಯನ್ನು ನಮೂದಿಸಿಯೇ ಅಪಾಯಿಂಟ್‌ಮೆಂಟ್ ಲೆಟರ್ ನೀಡುವಂತೆ" ಬದಲಾವಣೆ ತರುಲಾಗುತ್ತದೆ ಎಂದು ಸಚಿವರು ವಿವರಣೆ ನೀಡಿದರು.

      Wage Under MGNREGA Increase To 202 Rs Per Day

      "ಕಳೆದ ಎರಡು ತಿಂಗಳಿನಲ್ಲಿ ನರೇಗಾ ಯೋಜನೆಯಡಿ 10,000 ಕೋಟಿ ಖರ್ಚು ಮಾಡಲಾಗಿದ್ದು 14.62 ಕೋಟಿ ದಿನದ ಉದ್ಯೋಗವನ್ನು ಸೃಷ್ಟಿ ಮಾಡಲಾಗಿದೆ. ಇದರಿಂದಾಗಿ ವಲಸೆ ಕಾರ್ಮಿಕರಿಗೆ ಸಹಾಯಕವಾಗಿದೆ" ಎಂದು ಹಣಕಾಸು ಸಚಿವರು ತಿಳಿಸಿದರು.

      "ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ನರೇಗಾ ಯೋಜನೆಯಡಿ ಕೂಲಿ ಬಯಸುತ್ತಿರುವವರ ಸಂಖ್ಯೆ 40 ರಿಂದ 50ರಷ್ಟು ಹೆಚ್ಚಾಗಿದೆ. ಯೋಜನೆಯಡಿ ನೀಡುತ್ತಿದ್ದ ದಿನ ಕೂಲಿಯನ್ನು 182 ರಿಂದ 202 ರೂ.ಗೆ ಏರಿಕೆ ಮಾಡಲಾಗಿದೆ" ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+