ಡಿ.21, 26ರಂದು ಪ್ರತ್ಯೇಕವಾಗಿ ಕೊಹ್ಲಿ-ಅನುಷ್ಕಾ ಮದುವೆ ಆರತಕ್ಷತೆ

ನವದೆಹಲಿ, ಡಿಸೆಂಬರ್ 12: ಪ್ರಣಯ ಪಕ್ಷಿಗಳಂತೆ ಕಳೆದ ನಾಲ್ಕು ವರ್ಷಗಳಿಂದ ಮಾಧ್ಯಮಗಳ ಕಣ್ತಪ್ಪಿಸಿ ದೇಶ-ವಿದೇಶ ಸುತ್ತಾಡುತ್ತಿದ್ದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಜೋಡಿ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ಸೋಮವಾರ ಇಟಲಿಯ ಟಸ್ಕನಿ ಎಂಬಲ್ಲಿ ವಿರಾಟ್ ಮತ್ತು ಅನುಷ್ಕಾ ವಿವಾಹ ಮಹೋತ್ಸವ ಅದ್ದೂರಿಯಾಗಿ ನಡೆದಿದೆ. ವಿವಾಹದಲ್ಲಿ ಕುಟುಂಬಸ್ಥರು, ತೀರಾ ಆಪ್ತ ಬಂಧುಗಳು, ಸ್ನೇಹಿತರು ಉಪಸ್ಥಿತರಿದ್ದರು. ಇನ್ನುಳಿದ ಸ್ನೇಹಿತರು, ಆಫೀಸರ್, ಉದ್ಯಮಿಗಳಿಗೆ , ಕ್ರಿಕೆಟರ್ಸ್, ನಟ-ನಟಿಯರಿಗೆ ಪ್ರತ್ಯೇಕವಾಗಿ ಕೊಹ್ಲಿ ಮತ್ತು ಅನುಷ್ಕಾ ತಮ್ಮ ಮದುವೆ ಆರತಕ್ಷತೆ ಸಮಾರಂಭವನ್ನು ಆಯೋಜಿಸಿದ್ದಾರೆ.

Virat Kohli, Anushka Sharma to hold grand reception in Delhi and mumbai on Dece 21, 26th

ಅನುಷ್ಕಾ ಹಾಗೂ ಕೊಹ್ಲಿ ತಮ್ಮ ಸಂಬಂಧಿಕರಿಗೆ ಡಿಸೆಂಬರ್ 21ರಂದು ದೆಹಲಿಯ ತಾಜ್ ಡಿಪ್ಲೊಮೆಟಿಕ್ ಎನ್ ಕ್ಲೇವ್ ನ ದರ್ಬಾರ್ ಹಾಲ್ ನಲ್ಲಿ ಆರತಕ್ಷತೆ ಇಟ್ಟುಕೊಂಡಿದ್ದಾರೆ. ಇನ್ನು ಸ್ನೇಹಿತರಿಗೆ, ಕ್ರಿಕೆಟರ್ಸ್, ಉದ್ಯಮಿಗಳಿಗೆ, ನಟ-ನಟಿಯರಿಗೆ ಡಿಸೆಂಬರ್ 26 ಮುಂಬೈನಲ್ಲಿ ಅರತಕ್ಷತೆ ಆಯೋಜಿಸಿದ್ದಾರೆ.

ಬಳಿಕ ಮುಂಬರುವ ದಕ್ಷಿಣ ಆಫ್ರಿಕಾ ಟೂರ್ನಿ ಇರುವುದರಿಂದ ಕೊಹ್ಲಿ ಜೊತೆ ಅನುಷ್ಕಾ ಸಹ ತೆರಳಲಿದ್ದಾರೆ. ನವ ಜೋಡಿಗಳು ಹೊಸ ವರ್ಷವನ್ನು ದಕ್ಷಿಣ ಆಫ್ರಿಕಾದಲ್ಲಿ ಆಚರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+