Viral Video: ಪ್ರಿಯಕರನ ಜೊತೆಯಲ್ಲಿದ್ದಾಗ ಏಕಾಏಕಿ ಬಾಗಿಲು ಬಡಿದ ತಾಯಿ.. ಮುಂದಾಗಿದ್ದೇನು ವಿಡಿಯೋ ನೋಡಿ..
ಕೆಲವೊಮ್ಮೆ ಪ್ರೇಮಿಗಳ ವಿಚಾರದಲ್ಲಿ ಅಚ್ಚರಿಯ ಘಟನೆಗಳು ನಡೆಯುತ್ತವೆ. ಪ್ರೇಮಿಗಳು ತಮ್ಮ ಪೋಷಕರಿಂದ ಬಚಾವಾಗಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಇಲ್ಲೊಂದು ವೈರಲ್ ವಿಡಿಯೋದಲ್ಲಿ ಸಿನಿಮಾ ಶೈಲಿಯಲ್ಲಿ ಪ್ರೇಮಿಗಳು ಬಚಾವ್ ಆಗಲು ಪ್ರಯತ್ನಿಸಿರುವ ಘಟನೆ ನಡೆದಿದೆ.
ಕೋಣೆಯಲ್ಲಿ ಪ್ರೇಮಿಗಳು ಒಂಟಿಯಾಗಿರುವಾಗ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಯಾರಿಲ್ಲದ ವೇಳೆ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ನೋಡಲು ಮನೆಗೆ ಬಂದಿದ್ದಾನೆ. ಅದೇ ವೇಳೆ ಪ್ರೇಯಸಿಯ ತಾಯಿ ಕೂಡ ಮನೆಗೆ ಬಂದಿದ್ದಾಳೆ. ತಾಯಿಯಿಂದ ಪ್ರಿಯಕರನನ್ನು ಬಚಾವ್ ಮಾಡಲು ಪ್ರೇಯಸಿ ಬಿಗ್‌ಪ್ಲ್ಯಾನ್‌ವೊಂದನ್ನು ಮಾಡಿದ್ದಾಳೆ. ಟ್ರಂಕ್‌ನಲ್ಲಿದ್ದ ಬಟ್ಟೆಗಳನೆಲ್ಲಾ ಹೊರಹಾಕಿ ಅದರಲ್ಲಿ ಹುಡುಗನನ್ನು ಕೂಡಿಸಿ ಬೀಗ ಹಾಕಿದ್ದಾಳೆ. ತಾಯಿ ಮುಂದೆ ಯಾರೂ ಕೂಡ ಬಂದಿಲ್ಲವೆಂಬಂತೆ ನಟಿಸಿದ್ದಾಳೆ.

ಆದರೆ ಒಳಗಡೆ ಬಂದಾಗ ತಾಯಿಗೆ ಕೋಣೆಯಲ್ಲಿ ಬಟ್ಟೆಯೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡು ಅನುಮಾನ ಬಂದಿದೆ. ಇದರ ಬಗ್ಗೆ ತಾಯಿ ಮಗಳನ್ನು ವಿಚಾರಿಸುತ್ತಾಳೆ. ಆದರೆ ಯುವತಿ ಕೆಲವು ಸಬೂಬುಗಳನ್ನು ನೀಡಲು ಪ್ರಯತ್ನಿಸುತ್ತಾಳೆ. ಆದರೆ ಇದ್ದಕ್ಕಿದ್ದಂತೆ ಮಗಳ ನಡುವಳಿಕೆಯಲ್ಲಿ ಬದಲಾವಣೆಯನ್ನು ಕಂಡು ತಾಯಿಗೆ ಅನುಮಾನ ಬಂದಿದೆ. ಮನೆಯೊಳಗೆ ಯಾರೋ ಬಂದಿರುವ ಶಂಕೆ ಮೂಡಿದೆ. ಆಗ ತಾಯಿ ಮನೆಯೆಲ್ಲಾ ಹುಡುಕಾಡುತ್ತಾಳೆ. ಆದರೆ ಯಾರೂ ಕಾಣಸಿಗುವುದಿಲ್ಲ.
प्रेमिका ने प्रेमी को बक्से मे किया बंद...l pic.twitter.com/q3zm9YY0cG
— Viral Vibes (@Viralvibes07) October 17, 2024
ಆದರೂ ತಾಯಿಗೆ ಅನುಮಾನ ಹೋಗುವುದಿಲ್ಲ. ಮಗಳೂ ಕೂಡ ಯಾವುದೇ ವಿಚಾರವನ್ನೂ ಬಾಯಿ ಬಿಡುವುದಿಲ್ಲ. ಮಗಳ ಮುಖದಲ್ಲಿದ್ದ ಗಾಬರಿ ಕಂಡು ತಾಯಿ ಹಾಗೂ ಕುಟುಂಬಸ್ಥರಿಗೆ ಅನುಮಾನ ಹೆಚ್ಚಾಗಿದೆ. ಈ ವೇಳೆ ಕುಟುಂಬ ಸದಸ್ಯರೊಬ್ಬರು ವಿಡಿಯೋ ಮಾಡುತ್ತಲೇ ಟ್ರಂಕ್ ತೆರೆಯಲು ಯುವತಿಗೆ ಹೇಳುತ್ತಾರೆ. ಆದರೆ ಹುಡುಗಿ ಟ್ರಂಕ್ ಓಪನ್ ಮಾಡಲು ಒಪ್ಪುವುದೇ ಇಲ್ಲ. ಯುವತಿ ಮಾತಿನಲ್ಲಿ ಅನುಮಾನ ಬಂದು ಕೊನೆಗೆ ಎಲ್ಲರೂ ಸೇರಿ ಟ್ರಂಕ್ ತೆರೆಯಲು ಒತ್ತಾಯಿಸುತ್ತಾರೆ. ಆದರೂ ಮಗಳು ಆರಂಭದಲ್ಲಿ ಟ್ರಂಕ್ ತೆಗೆಯಲು ವಿರೋಧಿಸುತ್ತಾಳೆ.
ತಾಯಿ ಎಷ್ಟೇ ಜೋರು ಮಾಡಿದರೂ ಹುಡುಗಿ ಟ್ರಂಕ್ ಓಪನ್ ಮಾಡಲು ಒಪ್ಪುವುದಿಲ್ಲ. ಟ್ರಂಕ್ ಅನ್ನು ಭದ್ರವಾಗಿ ಬೀಗ ಹಾಕಿ ಕೀಲಿ ಕೈಯನ್ನು ತನ್ನೊಂದಿಗೆ ಇರಿಸಿಕೊಂಡಿರುತ್ತಾಳೆ. ಮಗಳು ಟ್ರಂಕ್ ಓಪನ್ ಮಾಡಲು ಒಪ್ಪದೇ ಇದ್ದಾಗ ಟ್ರಂಕ್ ಅನ್ನು ಅತ್ತಿತ್ತ ಸರಿಸಾಡಿದಾಗ ಟ್ರಂಕ್ ತುಂಬಾ ಭಾರವಾಗಿರುವಂತೆ ತೋರುತ್ತದೆ. ಇದರಿಂದ ಟ್ರಂಕ್‌ನಲ್ಲಿ ಯಾರೋ ಇರುವುದನ್ನು ಖಾತ್ರಿಯಾಗಿದೆ.
ಆಗ ತಾಯಿ ಮಗಳಿಗೆ ಜೋರು ಮಾಡಿದಾಗ ಆಕೆ ಟ್ರಂಕ್ ಬೀಗ ತೆಗೆಯುತ್ತಾಳೆ. ಈ ವೇಳೆ ಟ್ರಂಕ್‌ನಲ್ಲಿದ್ದ ಹುಡುಗ ಇರುವುದನ್ನು ಕಂಡು ಎಲ್ಲರೂ ಗಾಬರಿಗೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಟ್ರಂಕ್‌ನಿಂದ ಹೊರ ಬಂದ ಯುವಕನ ಮೈ ಮೇಲೆ ಗಾಳಿಯಾಡದೇ ತುಂಬಾ ಬೆವರು ಇರುವುದು ಕಂಡು ಬಂದಿದೆ.
ವಿಡಿಯೋದಲ್ಲಿ ಕಂಡು ಬರುವ ಟ್ರಂಕ್ ತುಂಬಾ ಪುಟ್ಟದು ಇದರಲ್ಲಿ ಹುಡುಗನಿರಲು ಸಾಧ್ಯವಿಲ್ಲ ಎಂದು ಅನಿಸುತ್ತದೆ. ಆದರೆ ಆ ಪುಟ್ಟ ಟ್ರಂಕ್‌ನಿಂದ ಹುಡುಗ ಎದ್ದು ನಿಲ್ಲುವ ದೃಶ್ಯ ನಿಜಕ್ಕೂ ಅಚ್ಚರಿಯನ್ನುಂಟು ಮಾಡಿದೆ. ಗಾಳಿಯಾಡದೆ ಪುಟ್ಟ ಟ್ರಂಕ್‌ನಲ್ಲಿ ಹುಡುಗ ಉಸಿರಾಡಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ಮೂಡಿದೆ.
ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು. ಇದಕ್ಕೆ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. "ಎಕ್ಸಿಲೆಂಟ್.. ಅವಳ ಸ್ಕೆಚ್ ಸಾಮಾನ್ಯವಾಗಿದ್ದಲ್ಲ" ಎಂದು ಕೆಲವರು ಹೇಳಿದರೆ. ಕೆಲವರು 'ಹುಡುಗನಿಗೆ ಉಸಿರಾಟಕ್ಕೆ ತೊಂದರೆ ಆಗಿದ್ದರೆ ಹೇಗೆ?' ಎಂದು ಪ್ರಶ್ನೆ ಮಾಡಿದ್ದಾರೆ. ಈ ವೀಡಿಯೊ ಪ್ರಸ್ತುತ 3 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.












Click it and Unblock the Notifications