ವೈರಲ್ ವಿಡಿಯೋ: ಈ ಗುರುಗಳ ಪಾಠಕ್ಕೆ ಕುಣಿದು ಕುಪ್ಪಳಿಸಿದ್ರು ಮಕ್ಳು!

ಇತ್ತೀಚೆಗೆ ತಮಿಳು ನಾಡಿನ ಶಿಕ್ಷಕರೊಬ್ಬರನ್ನು ಬೀಳ್ಕೊಡುವಾಗ ಮಕ್ಕಳು ಅವರನ್ನು ತಬ್ಬಿ ಅತ್ತಿದ್ದ ಸುದ್ದಿ ಓದಿರಬಹುದು. ಶಿಕ್ಷಕರಂದ್ರೆ ಹೀಗಿರಬೇಕು ಅಂತ ಆ ಸುದ್ದಿಯನ್ನು ನೋಡಿ ಅನ್ನಿಸಿದ್ದರೆ ಅಚ್ಚರಿಯಿಲ್ಲ.

ಹೌದು, ಮುಗ್ಧ-ತುಂಟ ಮಕ್ಕಳು ಕಲಿಕೆಯನ್ನೂ ಸಂಭ್ರಮಿಸಬಲ್ಲ ಸನ್ನಿವೇಶವನ್ನು ಶಾಲೆಯಲ್ಲಿ ಸೃಷ್ಟಿಸುವ ತಾಕತ್ತಿರುವುದು ಶಿಕ್ಷಕರಿಗೆ ಮಾತ್ರ. ಅಂಥದೇ ಒಬ್ಬ ಶಿಕ್ಷಕರ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

ಇದು ಯಾವ ಶಾಲೆ, ಶಿಕ್ಷಕರ ಹೆಸರೇನು ಎಂಬ ಮಾಹಿತಿ ಇಲ್ಲ. ಆದರೆ ಶಿಕ್ಷಕರು ಮಕ್ಕಳಲ್ಲಿ ಕಲಿಕೆಯ ಬಗ್ಗೆ ಪ್ರೀತಿ ಮೂಡಿಸುವುದು ಹೇಗೆ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಿಕೊಟ್ಟಿದ್ದಾರೆ ಗುರುಗಳು. ಮಕ್ಕಳಿಗೆ ಕಾಗುಣಿತವನ್ನು ಕಲಿಸುವಾಗ ನೃತ್ಯ ಮಾಡುತ್ತ, ಎಲ್ಲರನ್ನೂ ಒಂದೆಡೆ ಸೇರಿಸಿ ಜೋರು ದನಿಯಲ್ಲಿ ಕಾಗುಣಿತವನ್ನು ಮಕ್ಕಳು ಉಚ್ಚರಿಸುವುದಕ್ಕೆ ಪ್ರಚೋದಿಸುತ್ತ ತಾವೂ ಅವರೊಂದಿಗೆ ಮಕ್ಕಳಾಗಿ ಆನಂದಿಸಿದ್ದಾರೆ ಈ ಶಿಕ್ಷಕರು.

Viral video: Teachers unique way to teach students

ಮಕ್ಕಳ ಮೇಲೆ ಶಿಕ್ಷಕರೇ ಹಲ್ಲೆ ನಡೆಸುವ, ಅತ್ಯಾಚಾರ ಎಸಗುವ, ಕೊಲೆ ಮಾಡುವ ಸುದ್ದಿಗಳನ್ನೇ ಕೇಳುತ್ತಿರುವ ಈ ಕಾಲದಲ್ಲಿ ಇಂಥ ವಿಡಿಯೋಗಳು 'ಆಚಾರ್ಯ ದೇವೋ ಭವ' ಎಂಬ ಮಾತನ್ನು ಜೀವಂತವಾಗಿರಿಸುವುದು ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+