ಜಾನಪದ ನೃತ್ಯಕ್ಕೆ ಹೆಜ್ಜೆ ಹಾಕಿದ ರಾಹುಲ್ ಗಾಂಧಿ ವಿಡಿಯೋ ವೈರಲ್!
ರಾಂಚಿ, ಮಾರ್ಚ್ 02: ಜಾರ್ಖಂಡ್ ನ ರಾಂಚಿಯಲ್ಲಿ ಸಭೆಯೊಂದರಲ್ಲಿ ಬಾಗವಹಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಜಾನಪದ ನೃತ್ಯಕ್ಕೆ ಹೆಜ್ಜೆ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಾರ್ಖಂಡ್ ನ ಜಾನಪದ ನೃತ್ಯ ಶೈಲಿಯಲ್ಲಿ ಕೆಲವು ಮಹಿಳೆಯರು ನೃತ್ಯ ಮಾಡುವಾಗ, ಅವರೊಂದಿಗೆ ರಾಹುಲ್ ಗಾಂಧಿ ಅವರೂ ಹೆಜ್ಜೆ ಹಾಕಿದರು.

ಅದಕ್ಕೂ ಮುನ್ನ ಸಭೆಯಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ, ಎಂದಿನಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿದರು. "ಎಲ್ಲಾ ಕಳ್ಳರ ಹೆಸರೂ ಮೋದಿ ಎಂದೇ ಇದೆಯಲ್ಲ, ಯಾಕೆ ಎಂಬುದೇ ನನಗೆ ಅರ್ಥವಾಗುವುದಿಲ್ಲ. ನೀರವ್ ಮೋದಿ, ಲಲಿತ್ ಮೋದಿ... ನರೇಂದ್ರ ಮೋದಿ" ಎಂದು ಮೋದಿ ಅವರಿಗೆ ಟಾಂಗ್ ನೀಡಿದರು.
#WATCH: Congress President Rahul Gandhi performs folk dance with locals in Ranchi, Jharkhand. (Video Source- AICC) pic.twitter.com/IrFRrYLtcV
— ANI (@ANI) March 2, 2019
"ಭಾರತೀಯ ವಾಯುಸೇನೆ ನಮ್ಮ ದೇಶವನ್ನು ಕಾಪಾಡುತ್ತಿದೆ. ವಾಯುಸೇನೆಯ ಪೈಲಟ್ ಗಳು ತಮ್ಮ ಪ್ರಾಣ ತ್ಯಾಗ ಮಾಡುತ್ತಿದ್ದಾರೆ. ಆದರೆ ನಮ್ಮ ಪ್ರಧಾನಿ ವಾಯುಸೇನೆಯಿಂದ ಹಣ ಕಬಳಿಸಿ, ಅನಿಲ್ ಅಂಬಾನಿಯ ಜೇಬಿಗೆ ತುಂಬುತ್ತಿದ್ದಾರೆ" ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದರು.












Click it and Unblock the Notifications