Viral Video: ರೀಲ್ಸ್‌ಗಾಗಿ ಸಿಗರೇಟ್ ಸೇದಿದ ಅಪ್ರಾಪ್ತೆ; ಅಪ್ಪನಿಂದ ಸಿಕ್ತು ವಿಶೇಷ 'ಚಿಕಿತ್ಸೆ'!
ಸಾಮಾಜಿಕ ಮಾಧ್ಯಮ ಎನ್ನುವುದು ಇಂದು ಜನರ ಬದುಕಿನ ಭಾಗವೇ ಎನ್ನುವಂತಾಗಿದೆ. ರೀಲ್ಸ್ ಮಾಡುವುದು, ಹೆಚ್ಚು ಲೈಕ್ ಗಿಟ್ಟಿಸಿಕೊಳ್ಳುವುದು ಹಲವರಿಗೆ ಪ್ರತಿಷ್ಠೆ ಎನ್ನವಂತಾಗಿದೆ. ಹೆಚ್ಚು ಲೈಕ್ ಪಡೆಯಲು ಹಲವು ಬಾರಿ ಯುವಕ-ಯುವತಿಯರು ಹುಚ್ಚು ಸಾಹಸಕ್ಕೆ ಕೈಹಾಕಿ ಜೀವಕ್ಕೆ ಕುತ್ತು ತಂದುಕೊಂಡಿರುವುದನ್ನು ನೋಡಬಹುದು.
ಇಲ್ಲೊಬ್ಬಳು ಯುವತಿ ಈಗ ಹೆಚ್ಚು ಲೈಕ್ ಗಿಟ್ಟಿಸಿಕೊಳ್ಳಲು ಧೂಮಪಾನ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹುಡುಗಿ ರಸ್ತೆಯಲ್ಲಿ ಸಿಗರೇಟ್ ಸೇದಿದ್ದಲ್ಲದೆ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾತಾಣದಲ್ಲಿ ಹಂಚಿಕೊಂಡಿದ್ದಾಳೆ.

ಸಿಗರೇಟ್ ಸೇದಿದ ಯುವತಿಯ ವಿಡಿಯೋ ನೋಡಿದ ಅಪ್ಪ ರೊಚ್ಚಿಗೆದ್ದಿದ್ದು, ಧೂಮಪಾನ ಮಾಡಿದ ಮಗಳಿಗೆ ಬೆಲ್ಟ್ ಟ್ರೀಟ್‌ಮೆಂಟ್ ಕೊಟ್ಟಿದ್ದಾರೆ.
ಬೆಲ್ಟ್‌ನಿಂದ ಬಾರಿಸಿದ ಅಪ್ಪ
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ವಿಡಿಯೋ ವೈರಲ್ ಆಗಿದೆ. ಹುಡುಗಿ ಆಕಸ್ಮಿಕವಾಗಿ ಬೀದಿಯಲ್ಲಿ ಧೂಮಪಾನ ಮಾಡುತ್ತಿರುವುದನ್ನು ನೋಡಬಹುದು.
ವೈರಲ್ ವೀಡಿಯೊದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಬೀದಿಯಲ್ಲಿ ಸಿಗರೇಟ್ ಸೇದುವುದನ್ನು ಸಾಮಾಜಿಕ ಮಾಧ್ಯಮಕ್ಕಾಗಿ ರೀಲ್‌ಗಳನ್ನು ಮಾಡುತ್ತಿರುವುದನ್ನು ಕಾಣಬಹುದು, ಇದರ ಪರಿಣಾಮವು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಗಮನ ಸೆಳೆಯಿತು.
ಸಿಗರೇಟ್ ಸೇದುವ ವಿಡಿಯೋ ಮಾಡಿದ ಬಳಿಕ ಹುಡುಗಿ ಹೆಚ್ಚಿನ ಲೈಕ್ ಮತ್ತು ಕಮೆಂಟ್‌ಗಳನ್ನು ನಿರೀಕ್ಷೆ ಮಾಡಿದ್ದಳು. ಆದರೆ, ಬೀದಿಯಲ್ಲಿ ಧೂಮಪಾನ ಮಾಡುವ ಹುಡುಗಿಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಅದು ಆಕೆಯ ಕುಟುಂಬಸ್ಥರ ಕಣ್ಣಿಗೂ ಬಿದ್ದಿದೆ. ಇದರ ಪರಿಣಾಮವಾಗಿ ಮನೆಯಲ್ಲಿ ಬೆಲ್ಟ್ ಟ್ರೀಟ್‌ಮೆಂಟ್ ಸಿಕ್ಕಿತು.
#WestBengal : This girl was smoking a cigarette and making reel on road.
— Amitabh Chaudhary (@MithilaWaala) June 29, 2024
Little did she know that the #reels went viral and get belt treatment at home from her father & mother. pic.twitter.com/ou0rqobZ29
ವಿಡಿಯೋ ವೈರಲ್ ಆದ ಬಳಿಕ ಮಗಳು ಸಿಗರೇಟ್ ಸೇದಿದ್ದಕ್ಕಾಗಿ ತಂದೆ ಬೆಲ್ಟ್‌ನಿಂದ ಹೊಡೆಯುವುದನ್ನು ನೋಡಬಹುದು. ಸಿಗರೇಟ್ ಸೇದಿದ ಮಗಳಿಗೆ ತಂದೆ ಕಠಿಣ ಶಿಕ್ಷೆ ಕೊಟ್ಟಿದ್ದಕ್ಕೆ ಈಗ ಪರ ವಿರೋಧ ವ್ಯಕ್ತವಾಗಿದೆ.
ಈ ಘಟನೆಯು ಯುವ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಎಚ್ಚರಿಕೆಯಾಗಿದೆ. ಸಾಮಾಜಿಕ ಮಾಧ್ಯಮ ಎನ್ನುವುದನ್ನು ಒಳ್ಳೆಯದಕ್ಕಾಗಿ ಮಾತ್ರ ಬಳಸಿಕೊಳ್ಳಬೇಕು. ಇಲ್ಲವಾದಲ್ಲಿ ಈ ರೀತಿಯ ಪರರಿಣಾಮಗಳನ್ನು ಎದುರಿಸಬೇಕಾಗಬಹುದು.
ಮಕ್ಕಳು ಜವಾಬ್ದಾರಿಯುತವಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡುವ ಬಗ್ಗೆ ಪೋಷಕರು ಗಮನ ಗಮನ ಹರಿಸಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು?
ಮತ್ತೊಂದೆಡೆ ನೆಟ್ಟಿಗರು ವೈರಲ್ ವೀಡಿಯೊದ ಕಾಮೆಂಟ್ ವಿಭಾಗದಲ್ಲಿ ಎಲ್ಲಾ ಹುಡುಗಿಯನ್ನು ಟೀಕಿಸಿದ್ದಾರೆ. ಒಬ್ಬ ಬಳಕೆದಾರರು, ನಾನೇನಾದರೂ ಹೀಗೆ ಮಾಡಿದ್ದರೆ ನಮ್ಮ ಅಪ್ಪ ತಲೆ ಬೋಳಿಸುತ್ತಿದ್ದರು ಎಂದು ಬರೆದಿದ್ದಾರೆ.
ಅವಳ ತಂದೆ ಜೈಲಿಗೆ ಹೋಗುವುದು ಖಚಿತ. ಅವರು ಮಗಳಿಗೆ ಹೊಡೆಯುವುದನ್ನು ವಿಡಿಯೋ ಮಾಡಬಾರದಿತ್ತು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಇತ್ತೀಚಿನ ದಿನಗಳಲ್ಲಿ ಫಾಲೋವರ್ಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಯಾವುದೇ ಹಂತಕ್ಕೂ ಹೋಗಲು ಸಿದ್ಧವಾಗುತ್ತಿದ್ದಾರೆ. ಇದು ಅವರನ್ನು ತೊಂದರೆಗೆ ಸಿಲುಕಿಸುತ್ತದೆ.












Click it and Unblock the Notifications