Viral Video: ಚಲಿಸುತ್ತಿದ್ದ ರೈಲಿಗೆ ನಾಯಿ ಹತ್ತಿಸಿದ ವ್ಯಕ್ತಿ.... ಮುಂದೇನಾಯ್ತು, ವೈರಲ್ ವಿಡಿಯೋ!
ನಾಯಿಯೊಂದನ್ನು ರೈಲು ಹತ್ತಿಸಲು ಹೋಗಿ ಆ ನಾಯಿ ರೈಲು ಹಳಿಗಳ ಕೆಳಗೆ ಬಿದ್ದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯಗಳು ಭಯಾನಕವಾಗಿದ್ದು ನಾಯಿಯನ್ನು ಈ ರೀತಿ ಹಿಂಸೆ ಮಾಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಜನ ಈ ವೈರಲ್ ವಿಡಿಯೋವನ್ನು ನೋಡಿ ಕಣ್ಣೀರಾಗಿದ್ದಾರೆ. ಭಾರತೀಯ ರೈಲ್ವೆ ಈ ವ್ಯಕ್ತಿಯ ಮೇಲೆ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಇಷ್ಟಕ್ಕೂ ಆ ವೈರಲ್ ವಿಡಿಯೋದಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.
ಕೆಲವೊಂದು ವೈರಲ್ ವಿಡಿಯೋ ಜನರ ಮುಖದಲ್ಲಿ ಮಂದಹಾಸ ಮೂಡಿಸಿದರೆ. ಇನ್ನೂ ಕೆಲವೊಂದು ವೈರಲ್ ವಿಡಿಯೋಗಳು ಜನರಲ್ಲಿ ನೋವನ್ನು ಉಂಟು ಮಾಡುತ್ತದೆ. ಅದೇ ರೀತಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹೊರಟಿದ್ದ ರೈಲಿಗೆ ಸಾಕು ನಾಯಿಯನ್ನು ಮಾಲೀಕರೊಬ್ಬರು ಹತ್ತಿಸಲು ಪ್ರಯತ್ನಿಸಿದ್ದಾರೆ. ಆದರೆ ರೈಲು ಮೂವ್ ಆಗಿದ್ದು ಇದರಿಂದ ರೈಲು ಹತ್ತುವುದಕ್ಕೆ ನಾಯಿಯಿಂದ ಸಾಧ್ಯವಾಗಿಲ್ಲ. ಈ ಸಂದರ್ಭದಲ್ಲಿ ನಾಯಿ ಪರದಾಡಿರುವ ದೃಶ್ಯಗಳು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ರೈಲು ಹತ್ತಲು ಆಗಲಾಗದೆ ರೈಲು ಹಾಗೂ ಪ್ಲಾಟ್‌ಫಾರಂನ ನಡುವೆ ಸಿಲುಕಿಕೊಂಡಿರುವ ಹೃದಯ ವಿದ್ರಾವಕ ವಿಡಿಯೋ ಇದೀಗ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ವ್ಯಕ್ತಿಯೊಬ್ಬ ನಾಯಿಯನ್ನು ಎಳೆದುಕೊಂಡು ಚಲಿಸುತ್ತಿರುವ ರೈಲಿನಲ್ಲಿ ಹತ್ತಿಸುವುದಕ್ಕೆ ಪ್ರಯತ್ನಿಸಿದ್ದಾನೆ. ಆದರೆ ಈ ವೇಳೆ ನಾಯಿಯ ಕುತ್ತಿಗೆಗೆ ಕಟ್ಟಲಾಗಿದ್ದ ಬೆಲ್ಟ್ ಕಳಚಿಕೊಂಡು ನಾಯಿ ಓಡುತ್ತಿರುವ ರೈಲಿನ ಕೆಳಗೆ ಬಿದ್ದಿದೆ.
ಮುಂಬೈನ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ರೈಲು ನಿಲ್ದಾಣದಲ್ಲಿ ಸ್ಟೇಷನ್‌ನಿಂದ ಹೊರಟ್ಟಿದ್ದ ರಾಜಧಾನಿ ಎಕ್ಸ್ಪ್ರೆಸ್ ರೈಲಿಗೆ ನಾಯಿಯನ್ನು ಹತ್ತಿಸುವುದಕ್ಕೆ ಪ್ರಯತ್ನಿಸಲಾಗಿದ್ದು. ನಾಯಿ ಕಾಲು ಜಾರಿ ಕೆಳಗೆ ಬಿದ್ದಿದೆ. ರೈಲು ಬೋಗಿ ಸಂಖ್ಯೆ 193751ಕ್ಕೆ ನಾಯಿ ಹತ್ತಿಸಲು ಪ್ರಯತ್ನಿಸಿರುವುದು ವಿಡಿಯೋದಲ್ಲಿ ಇದೆ.
The dog was clearly resisting, but the man still forced it onto the moving train.pic.twitter.com/RYks0StjDS
— Aaraynsh (@aaraynsh) April 2, 2025
ರೈಲು ನಿಲ್ದಾಣದಲ್ಲೇ ಆಕ್ರೋಶ: ಇನ್ನು ನಾಯಿ ಪ್ಲಾಟ್‌ಫಾರಂ ಹಾಗೂ ಚಲಿಸುತ್ತಿದ್ದ ರೈಲಿನ ಕೆಳಗೆ ಬೀಳುತ್ತಿದ್ದಂತೆಯೇ ಈ ರೈಲು ನಿಲ್ದಾಣದಲ್ಲಿದ್ದ ಜನ ಆ ವ್ಯಕ್ತಿಯ ಮೇಲೆ ಆಕ್ರೋಶಗೊಂಡಿದ್ದಾರೆ. ರೈಲು ನಿಲ್ದಾಣದಲ್ಲೇ ಆ ವ್ಯಕ್ತಿಗೆ ಜನ ಛೀಮಾರಿ ಹಾಕಿದ್ದಾರೆ. ನೋಡಿಕೊಳ್ಳಲು ಆಗಲ್ವಾ ಚಲಿಸುತ್ತಿರುವ ರೈಲಿಗೆ ನಾಯಿಯನ್ನು ಯಾರಾದರೂ ಹತ್ತಿಸುತ್ತಾರೇನ್ರಿ ಅಂತ ಅವಾಜ್ ಹಾಕಿದ್ದಾರೆ. ನಾಯಿ ಕೆಳಗೆ ಬೀಳುವುದನ್ನು ನೋಡಿದ ಜನ ಓಡೋಡಿ ಬಂದು ನಾಯಿಗೆ ಏನಾಯ್ತು ಅಂತ ನೋಡಿದ್ದಾರೆ. ಈ ದೃಶ್ಯಗಳು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.
ದುಡ್ಡಿದ್ದವರ ದರ್ಪ ಎಂದ ಜನ: ಇನ್ನು ಹಲವರು ಸೋಷಿಯಲ್ ಮೀಡಿಯಾದಲ್ಲಿ ಜನ ಈ ವಿಡಿಯೋವನ್ನು ನೋಡಿ ಭಾರತದಲ್ಲಿ ಕೆಲವರಿಗೆ ಮಾನವೀಯತೆ ಹಾಗೂ ಸಭ್ಯತೆಯನ್ನು ಕಲಿಸುವ ಅವಶ್ಯಕತೆ ಇದೆ. ದುಡ್ಡಿದ್ದರೆ ಏನಾದರೂ ನಡೆಯುತ್ತದೆ ಎಂದು ಕೆಲವು ಅಂದುಕೊಳ್ಳುತ್ತಾರೆ ಅದಕ್ಕೆ ಇದು ಮತ್ತೊಂದು ಉದಾಹರಣೆ ಎಂದು ಜನ ಹೇಳುತ್ತಿದ್ದಾರೆ.












Click it and Unblock the Notifications