Viral Video: ಸುರಂಗ ಮಾರ್ಗದಲ್ಲಿ ಸಿಲುಕಿದ ಮೆಟ್ರೋ ರೈಲು: ನಡೆದುಕೊಂಡೇ ಹೊರ ಬಂದ ಜನ, ಇಲ್ಲಿದೆ ವೈರಲ್ ವಿಡಿಯೋ!
Viral Video: ತಂತ್ರಜ್ಞಾನ ಕೈಕೊಟ್ಟರೆ ಏನೆಲ್ಲಾ ಆಗಲಿದೆ ಎನ್ನುವುದಕ್ಕೆ ಈಚೆಗೆ ದೇಶದ ಪ್ರಮುಖ ಮೆಟ್ರೋ ನಿಲ್ದಾಣದಲ್ಲಿ ಆಗಿರುವ ಘಟನೆಯೇ ಉದಾಹರಣೆಯಾಗಿದೆ. ಇಂದು ಇಡೀ ವಿಶ್ವವೇ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಅದರಲ್ಲೂ ಈಗ ಎಐ ಜಮಾನ ಬೇರೆ. ಕ್ಷಣಾರ್ಧದಲ್ಲಿ ಎಐ ಯಾವುದೇ ಪ್ರಮುಖ ಕೆಲಸವನ್ನಾದರೂ ಮಾಡಿ ಮುಗಿಸುತ್ತದೆ. ಇನ್ನು ಈ ರೀತಿ ಇರುವಾಗ ಯಾವುದಾದರೂ ತಂತ್ರಜ್ಞಾನ ಕೈಕೊಟ್ಟರೂ ಜನ ಪರದಾಡುವುದು ಗ್ಯಾರಂಟಿ.
ಈ ರೀತಿಯ ಒಂದು ಘಟನೆ ನೆರೆಯ ತಮಿಳುನಾಡಿನ ಚೆನ್ನೈ ಮಹಾನಗರದಲ್ಲಿ ನಡೆದಿದೆ. ಜನ ಇಲ್ಲಿನ ಮೆಟ್ರೋದಲ್ಲಿ ಎಂದಿನಿಂತೆ ಪ್ರಯಾಣ ಮಾಡುವಾಗ ಏಕಾಕೈಕಿ ಮೆಟ್ರೋ ಸುರಂಗ ಮಾರ್ಗದಲ್ಲಿ ಸ್ಥಗಿತವಾಗಿದೆ. ಕೆಲಸಕ್ಕೆ ಹಾಗೂ ತಮ್ಮ ದಿನನಿತ್ಯದ ಪ್ರಮುಖ ಕೆಲಸಗಳಿಗಾಗಿ ಚೆನ್ನೈ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಚೆನ್ನೈನ ಸುರಂಗ ಮಾರ್ಗದಲ್ಲಿ ಮೆಟ್ರೋ ಸ್ಥಗಿತವಾಗಿದ್ದು, ಪ್ರಯಾಣಿಕರು ಸುರಂಗ ಮಾರ್ಗದಿಂದ ನಡೆದುಕೊಂಡೇ ಹೊರಗೆ ಬಂದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚೆನ್ನೈನಲ್ಲಿ ಯಾವ ಪ್ರಯಾಣಿಕರು ಈ ರೀತಿ ಮೆಟ್ರೋದಲ್ಲಿ ನಡೆದುಕೊಂಡು ಬರಬೇಕು ಎಂದು ಅಂದಾಜಿಸಿರಲಿಲ್ಲ. ಚೆನ್ನೈನ ಮೆಟ್ರೋ ಮೂಲಕ ವಿಮ್ಕೊ ನಗರ ಡಿಪೋ ಕಡೆಗೆ ಪ್ರಯಾಣಿಸುತ್ತಿದ್ದ ಜನರು ರೈಲು ಸುರಂಗಮಾರ್ಗದಲ್ಲಿ ಸಿಲುಕಿಕೊಂಡ ನಂತರ ರೈಲ್ವೆ ಹಳಿಯಲ್ಲಿ ಬಹುದೂರ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ವಿಮ್ಕೊ ನಗರ ಡಿಪೋ ಮತ್ತು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಚಲಿಸುವ ಚೆನ್ನೈ ಮೆಟ್ರೋ ರೈಲಿನ ನೀಲಿ ಮಾರ್ಗವು ಮುಂಜಾನೆ ತಾಂತ್ರಿಕ ದೋಷವನ್ನು ಎದುರಿಸಿತು.
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣದ ನಡುವಿನ ಸುರಂಗಮಾರ್ಗದಲ್ಲಿ ರೈಲು ಸಿಲುಕಿಕೊಂಡಿದ್ದು, ಪ್ರಯಾಣಿಕರು ವಿದ್ಯುತ್ ಸಂಪರ್ಕವೂ ಕಡಿತವಾಗಿತ್ತು. ಕೆಲ ಕ್ಷಣಗಳ ವರೆಗೆ ಉಸಿರಾಡುವುದಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ದೂರಿದ್ದಾರೆ. ಪ್ರಯಾಣಿಕರು ನಿಧಾನವಾಗಿ ಮೆಟ್ರೋ ರೈಲಿನ ಸುರಂಗ ಮಾರ್ಗದಿಂದ ಹೊರಗೆ ಬರುತ್ತಿರುವ ವಿಡಿಯೋ ವೈರಲ್ ಆಗಿದೆ.
ಮೆಟ್ರೋ ಮುಂದಕ್ಕೆ ಹೋಗಲ್ಲ ಎಂದು ತಿಳಿದ 10 ನಿಮಿಷಗಳ ನಂತರ, ಹತ್ತಿರದ ಮೆಟ್ರೋ ನಿಲ್ದಾಣವಾದ ಹೈಕೋರ್ಟ್ ನಿಲ್ದಾಣಕ್ಕೆ ಸುಮಾರು 500 ಮೀಟರ್ ದೂರಕ್ಕೆ ನಡೆದುಕೊಂಡು ಹೋಗುವಂತೆ ಪ್ರಕಟಣೆ ಹೊರಡಿಸಲಾಯಿತಿ ಎಂದು ಪ್ರಯಾಣಿಕರು ಹೇಳಿದ್ದಾರೆ. ಸದ್ಯ ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮತ್ತೊಂದು ವೀಡಿಯೊದಲ್ಲಿ, ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತು ಸುರಂಗದ ಮೂಲಕ ನಡೆಯುತ್ತಿರುವುದು ವೈರಲ್ ಆಗಿದೆ.
Chennai Metro train dies in tunnel, 1000+ people forced to walk 400m in the dark like it’s a school fire drill.
— Mohini Maheshwari (@MohiniWealth) December 3, 2025
Bro, we invented zero but still can’t keep the lights on in 2025—peak Indian engineering! 😂💀 pic.twitter.com/tVFK86SOeE
ಸುರಂಗ ಮಾರ್ಗದಲ್ಲಿ ಮೆಟ್ರೋ ಸಿಲುಕುವುದಕ್ಕೆ ಕಾರಣವೇನು ?
ಇನ್ನು ಚೆನ್ನೈ ಮೆಟ್ರೋ ಯಾವ ಕಾರಣಕ್ಕೆ ಸ್ಥಗಿತವಾಗಿದೆ ಎನ್ನುವ ವಿಚಾರವೂ ನಂತರ ಬಹಿರಂಗವಾಗಿದೆ. ವಿದ್ಯುತ್ ವ್ಯತ್ಯಯ ಅಥವಾ ತಾಂತ್ರಿಕ ದೋಷದಿಂದ ಈ ಅಡಚಣೆ ಉಂಟಾಗಿರಬಹುದು ಎಂದು ಹೇಳಲಾಗಿದೆ. ಸೇವೆಗಳು ಸಾಮಾನ್ಯ ಸ್ಥಿತಿಗೆ ಮರಳಿವೆ ಎಂದು ಚೆನ್ನೈ ಮೆಟ್ರೋ ರೈಲು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ತಿಳಿಸಿದೆ.
ಬ್ಲೂ ಲೈನ್‌ನಲ್ಲಿ ವಿಮಾನ ನಿಲ್ದಾಣ ಮತ್ತು ವಿಮ್ಕೊ ನಗರ ಡಿಪೋ ನಡುವಿನ ಮೆಟ್ರೋ ರೈಲು ಸೇವೆಗಳು ಸಾಮಾನ್ಯ ಕಾರ್ಯಾಚರಣೆಯನ್ನು ಪುನರಾರಂಭಿಸಿವೆ. ಪುರಚ್ಚಿ ತಲೈವರ್ ಡಾ. ಎಂ.ಜಿ. ರಾಮಚಂದ್ರನ್ ಸೆಂಟ್ರಲ್ ಮೆಟ್ರೋದಿಂದ ಸೇಂಟ್ ಥಾಮಸ್ ಮೌಂಟ್‌ಗೆ ಹಸಿರು ಮಾರ್ಗವು ಸಾಮಾನ್ಯ ವೇಳಾಪಟ್ಟಿಯ ಪ್ರಕಾರ ಚಾಲನೆಯಲ್ಲಿದೆ ಎಂದು ಚೆನ್ನೈ ಮೆಟ್ರೋ ರೈಲು ಎಕ್ಸ್‌ನಲ್ಲಿ ತಿಳಿಸಿದೆ.
ಈ ಘಟನೆಯು ಎರಡು ದಿನಗಳ ಮುಂಚೆ ನಡೆದಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಟ್ರೆಂಡ್ ಸೃಷ್ಟಿ ಮಾಡಿದೆ.












Click it and Unblock the Notifications