Video: ರೈಲಿನಲ್ಲಿ ಎಲ್ಲರೆದುರೇ ವ್ಯಕ್ತಿ ಮೂತ್ರ ವಿಸರ್ಜನೆ! ಪ್ರಯಾಣಿಕರಿಂದ ಹಿಗ್ಗಾ ಮುಗ್ಗ ಥಳಿತ, ವೈರಲ್

Viral Video: ಸಾರ್ವಜನಿಕರು ರಾಜ್ಯ, ದೇಶದಲ್ಲಿ ರೈಲು ಸಾರಿಗೆ ಅಭಿವೃದ್ಧಿ ಆದರೆ ಸಾಕು, ಹೊಸ ಹೊಸ ರೈಲುಗಳನ್ನು ಬಿಟ್ಟರೆ ಸಾಕು ಎಂದೆಲ್ಲ ಆಶಯ ವ್ಯಕ್ತಪಡಿಸುತ್ತಾರೆ. ಆದರೆ ಒಂದೆರಡು ರಾಜ್ಯಗಳಲ್ಲಿ ಜನ ಇದೇ ರೈಲುಗಳಿಗೆ ಕಲ್ಲು ಹೊಡೆಯುತ್ತಾರೆ. ಬೋಗಿ ಒಳಗೆ ಸೀಟುಗಳಿಗೆ ಬೆಂಕಿ ಹಚ್ಚುವುದು, ಹಾನಿ ಮಾಡುವುದನ್ನು ನೋಡಿದ್ದೇವೆ. ಇದೀಗ ಇಲ್ಲೊಬ್ಬ ವ್ಯಕ್ತಿ ಚಲಿಸುವ ರೈಲಿನಲ್ಲಿ ಮಹಿಳೆಯರು, ಸಹ ಪ್ರಯಾಣಿಕರು ಇರುವಾಗಲೇ ಮೂತ್ರ ವಿಸರ್ಜನೆ ಮಾಡಿ ಥಳಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಹ ಪ್ರಯಾಣಿಕರ ತಾಳ್ಮೆ ಕಟ್ಟೆಯೊಡೆದಿದ್ದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ವಿಡಿಯೋದಲ್ಲಿ ರೈಲಿನ ಬೋಗಿಯಲ್ಲಿ ಪ್ರಯಾಣಿಕರ ನಡುವೆ ವ್ಯಕ್ತಿಯೊಬ್ಬ ಸಲೀಸಾಗಿ ಎದ್ದು ನಿಂತು ಮೂತ್ರ ವಿಸರ್ಜನೆ ಮಾಡಿ ಏನು ಆಗಿಲ್ಲ ಎಂಬಂತೆ ತೋರುವ ವರ್ತನೆ ರೈಲಿನ ಒಳಗೆ ಕೋಲಾಹಲ ಎಬ್ಬಿಸಿದೆ.. ಮಹಿಳೆ ಮಕ್ಕಳು, ಸಹ ಪ್ರಯಾಣಿಕರ ಮುಂದೆ, ಮೂತ್ರ ಮಾಡಿದ್ದು, ವಿಡಿಯೋದಲ್ಲಿ ರೆಕಾರ್ಡ್ ಆಗಿದೆ..

Viral Video

ಇದೆಲ್ಲ ನೋಡಿದ ಸಾರ್ವಜನಿಕರು ಆತನಿಗೆ ಗೂಸಾ ಕೊಟ್ಟಿದ್ದಾರೆ. ಆತನನ್ನು ನೆಲಕ್ಕೆ ಕೆಡವಿ ಹಿಗ್ಗಾ ಮುಗ್ಗ ಥಳಿಸಿದ್ದಾರೆ. 'ಇಲ್ಲಿ ಇಷ್ಟೊಂದು ಮಹಿಳೆಯರು ಮತ್ತು ಮಕ್ಕಳಿದ್ದಾರೆ, ನಿನಗೆ ಸ್ವಲ್ಪವೂ ನಾಚಿಕೆ ಆಗುವುದಿಲ್ಲವೇ? ಎಂದು ಪ್ರಶ್ನಿಸುತ್ತಲೇ ಸರಿಯಾಗಿ ಭಾರಿಸಿದ್ದಾರೆ. ಇನ್ನೊಬ್ಬ ಪ್ರಯಾಣಿಕ ನಿನಗೆ ಮನೆಯಲ್ಲಿ ತಾಯಿ, ತಂಗಿಯರು ಇಲ್ಲವೇ? ಸಾರ್ವಜನಿಕ ಸ್ಥಳದಲ್ಲಿ ನಿನ್ನ ಇಂತಹ ವರ್ತನೆ ಸರಿಯಲ್ಲ ಎಂದು ಬೈದು ಬುದ್ದಿ ಹೇಳಿವುದು ಕೇಳಿಸುತ್ತದೆ.

ಪ್ರಯಾಣಿಕರಿಂದ ಭಾರೀ ಆಕ್ರೋಶ ವ್ಯಕ್ತ

ಬಹುತೇಕ ಪ್ರಯಾಣಿಕರು ಆಕ್ರೋಶಗೊಂಡಿದ್ದು, ಈತನನ್ನು ಹಿಡಿದು ಕೆಳಗೆ ರೈಲಿನಿಂದ ತಳ್ಳಿ, ರೈಲಿನಿಂದ ಹೊರಹಾಕಿ ಎಂದೆಲ್ಲ ಆಗ್ರಹಿಸಿದ್ದು ಕಂಡು ಬಂತು. ಈ ವ್ಯಕ್ತಿ ಮೇಲ್ನೋಟಕ್ಕೆ ಕುಡಿದು ಬಂದಿದ್ದ ಎನ್ನಲಾಗಿದೆ. ಅಮಲಿನಲ್ಲಿ ಈ ರೀತಿ ಮಾಡಿದ ಧರ್ಮದೇಟು ತಿಂದಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ನಡವಳಿಕೆ, ಅನುಚಿತ ವರ್ತನೆಯನ್ನು ಯಾರೊಬ್ಬರು ಸಹಿಸಲು ಸಾಧ್ಯವಿಲ್ಲ ಎಂದು ಜನ ದೂರಿದ್ದಾರೆ. ಇದು ಬಹುಶಃ ಬಿಹಾರದಲ್ಲಿ ನಡೆದ ಘಟನೆ ಆಗಿರಬೇಕೆಂದು ಅನೇಕರು ಅಂದಾಜಿಸಿದ್ದಾರೆ. ಕೆಲವರು ಜಾರ್ಖಂಡ್, ಯುಪಿ ಅಂತಲೂ ಕಾಮೆಂಟ್ ಮಾಡಿದ್ದಾರೆ. ಇದು ಯಾವ ರೈಲಿನಲ್ಲಿ ನಡೆದಿದೆ ಎಂಬುದು ತಿಳಿಯಬೇಕಿದೆ.

ನೀವೆ ದೂರು ನೀಡಿ ಎಂದ ಟಿಸಿ!

ಕೂಡಲೇ ಸ್ಥಳಕ್ಕೆ ಬಂದ ರೈಲ್ವೆ ಉದ್ಯೋಗಿ/ಟಿಟಿಇ "ನಾವೇನಾದರೂ ಮಾಡಲು ಹೋದರೆ ಪ್ರಯಾಣಿಕರೇ ದೂರು ನೀಡುತ್ತಾರೆ. ಇದೆಲ್ಲ ಕಣ್ಣಾರೆ ಕಂಡ ನೀವೇ 139 ಸಂಖ್ಯೆಗೆ ಕರೆ ಮಾಡಿ ದೂರು ನೀಡಿ ಎಂದು ಪ್ರಯಾಣಿಕರಿಗೆ ಸೂಚಿಸಿದ್ದಾರೆ.

ಇಷ್ಟೆಲ್ಲ ಆದರೂ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ. ಇದು ನಡವಳಿಗೆ ಪ್ರಯಾಣಿಕರನ್ನು ಮತ್ತಷ್ಟು ಕೆರಳಿಸಿತ್ತು. ಪ್ರಯಾಣಿಕರೊಂದಿಗೆ ವಾದ ಮಾಡುವುದು, ಅವರಿಗೆ ತಿರುಗಿ ವಾದಿಸುತ್ತಾನೆ. ಆಗಲೇ ಗಲಾಟೆ ಮತ್ತು ಥಳಿತ ಮತ್ತೊಂದು ಹಂತಕ್ಕೆ ತಲುಪುತ್ತದೆ.

ಆತನಿಂದಲೇ ನೆಲ ಸಚ್ಚಗೊಳಿಸಿಸಿ: ಮಹಿಳಾ ಪ್ರಯಾಣಿಕಳ ಆಗ್ರಹ

ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡು ಮಹಿಳೆಯರು, 'ಈತನಿಂದ ರೈಲಿನ ಒಳಗಿನ ಇಡೀ ಜಾಗವೇ ನಾರುತ್ತಿದೆ, ಆತನಿಂದಲೇ ನೆಲವನ್ನು ಸ್ವಚ್ಛಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಆತ ನೆಲ ಒರೆಸಲು ಶರ್ಟ್ ಬಿಚ್ಚಿದ್ದು, ಪ್ರಯಾಣಿಕರು ಆಕ್ರೋಶದ ಮಾತುಗಳು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

Viral Video

ಪ್ರಯಾಣಿಕರ ಕೈಗೆಟುಕುವ, ಸುರಕ್ಷಿತ ಸಾರಿಗೆಗೆ ಹಾನಿ ಆಗದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ಪರಿವಾರ ಸಮೇತ ರೈಲಿನಲ್ಲಿ ಸಂಚರಿಸುತ್ತಾರೆ. ಯಾರೇ ಆದರೆ ಸಾರ್ವಜನಿಕವಾಗಿ ಉತ್ತಮ ನಡವಳಿಕೆ ಪ್ರದರ್ಶಿಸದಿದ್ದರೂ, ಈ ರೀತಿ ಅಸಭ್ಯ, ಅನುಚಿತ ವರ್ತನೆ ತೋರಬಾರದು. ಸದ್ಯ ರೈಲಿನಲ್ಲಿ ಮೂತ್ರ ಮಾಡಿದವನ ವಿರುದ್ಧ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+