Viral Video: ಹುಡುಗಿ ವೇಷ ಧರಿಸಿ ಮನೆಯಿಂದ ಹೊರ ಬಂದ ವ್ಯಕ್ತಿ; ಜನರ ವರ್ತನೆಗೆ ಫುಲ್‌ ಸುಸ್ತು, ವೈರಲ್‌ ಆಗುತ್ತಿದೆ ವಿಡಿಯೋ

Viral Video: ಮಹಿಳೆಯರ ಸುರಕ್ಷತೆಯ ಬಗ್ಗೆ ಆಗಾಗ ಪ್ರಶ್ನೆಗಳು ಏಳುತ್ತಲೇ ಇವೆ. ಮಹಿಳೆಯರು ರಾತ್ರಿ ಹೊತ್ತು ಒಬ್ಬಂಟಿಯಾಗಿ ಹೊರಗಡೆ ಹೋಗುವುದು ನಿಜಕ್ಕೂ ಸುರಕ್ಷಿತವೇ? ಇಂಥಹ ಪ್ರಶ್ನೆಗೆ ಉತ್ತರ ಹುಡುಕಲು ಹೊರಟಿದ್ದಾರೆ ಕಟೆಂಟ್‌ ಕ್ರಿಯೇಟರ್‌ ಬಿಜೈಂಟಲ್. ಇವರು ಪ್ರಾಯೋಗಿಕವಾಗಿ ಪರೀಕ್ಷೆ ನಡೆಸುವ ಮೂಲಕ ಈ ಪ್ರಶ್ನೆಗೆ ಉತ್ತರ ಕಂಡುಕೊಂಡಿದ್ದಾರೆ. ಇದಕ್ಕಾಗಿ ಇವರು ತನ್ನ ಲುಕ್‌ ಅನ್ನು ಸಂಪೂರ್ಣವಾಗಿ ಹುಡುಗಿಯ ರೀತಿಯಲ್ಲಿ ಬದಲಾಯಿಸಿಕೊಂಡಿದ್ದಾರೆ. ಹುಡುಗಿಯಂತೆ ಮೇಕಪ್‌ ಮಾಡಿ ವಿಗ್‌ ಹಾಕಿಕೊಂಡು, ಹುಡುಗಿಯರ ಡ್ರೆಸ್‌ ಧರಿಸಿಕೊಂಡು, ಮುಖಕ್ಕೆ ಶಾಲ್‌ ಸುತ್ತಿಕೊಂಡು ರಾತ್ರಿ ವೇಳೆ ತಮ್ಮ ದ್ವಿಚಕ್ರವಾಹನದಲ್ಲಿ ಊರೆಲ್ಲಾ ಸುತ್ತಿದ್ದಾರೆ.

ಇವರ ಲುಕ್‌ ಅನ್ನು ನೋಡಿದವರು ಇವರನ್ನು ಹೆಣ್ಣೆಂದೇ ಭಾವಿಸಿದ್ದಾರೆ. ಇವರು ದೆಹಲಿಯ ಅನೇಕ ಕಡೆಗಳಲ್ಲಿ ಸುತ್ತಾಡಿಕೊಂಡು ಬಂದು ಹುಡುಗಿಯಾಗಿ ತಮ್ಮ ಅನುಭವ ಹೇಗಿತ್ತು ಎನ್ನುವುದನ್ನು ಹೇಳಿದ್ದಾರೆ. ಇವರು ಹುಡುಗಿಯಾಗಿ ಹೊರಗೆ ಕಾಲಿಡುತ್ತಿದ್ದ ಹಾಗೆ ಎದುರಿಸಿದ ಕೆಲವು ಅಹಿತಕರ ಘಟನೆಗಳನ್ನು ವಿಡಿಯೋದಲ್ಲಿ ಶೇರ್‌ ಮಾಡಿದ್ದಾರೆ.

Viral Video Man Dressed Himself Like Women Went Out Alone Shared Video Said Girls Are Not Safe Video Viral

Viral Video: ಮಹಿಳೆಯರ ಸುರಕ್ಷತೆಯ ಬಗ್ಗೆ ಚರ್ಚೆ

ಪೆಟ್ರೋಲ್ ಪಂಪ್‌ಗಳಿಂದ ಹಿಡಿದು, ರಸ್ತೆಗಳಲ್ಲಿ ಸಂಚಾರ ಮಾಡುವಲ್ಲಿವರೆಗೆ ಇವರು ಎದುರಿಸಿದ ಕಿರಿಕಿರಿ ಒಂದೆರಡಲ್ಲ. ಇವರು ಹುಡಗಿ ಅಂದುಕೊಂಡು ಕೆಲವರು ಇವರನ್ನು ಫಾಲೋ ಮಾಡಿಕೊಂಡು ಬಂದಿರುವುದಾಗಿ ಹೇಳಿದ್ಧಾರೆ. ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡ ಈ ವೀಡಿಯೊ ಮತ್ತೊಮ್ಮೆ ಮಹಿಳೆಯರ ಸುರಕ್ಷತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

Viral Video: ದಿಟ್ಟಿಸಿ ನೋಡಿದವರೆಷ್ಟೋ ಫಾಲೋ ಮಾಡಿದವರೆಷ್ಟೋ

ಇವರ ಪ್ರಕಾರ ಮನೆಯಿಂದ ಹೊರಬಂದ ಸ್ವಲ್ಪ ಸಮಯದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಪೆಟ್ರೋಲ್ ಪಂಪ್‌ನಲ್ಲಿ ಪೆಟ್ರೋಲ್‌ ಹಾಕಿಸಿಕೊಳ್ಳುತ್ತಿದ್ಧಾಗ ಗಂಡಸರು ತನ್ನನ್ನು ದಿಟ್ಟಿಸಿ ನೋಡ್ತಾ ಇದ್ದರು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಇಬ್ಬರು ಸ್ವಲ್ಪ ಹೊತ್ತು ಇವರನ್ನೇ ನೋಡುತ್ತಿದ್ದು ನಂತರ ಸ್ಕೂಟರ್‌ನಲ್ಲಿ ಫಾಲೋ ಮಾಡಿಕೊಂಡು ಬಂದಿರುವ ಬಗ್ಗೆಯೂ ವಿವರಿಸಿದ್ದಾರೆ. ರಸ್ತೆಯಲ್ಲಿ ಇನ್ನೊಬ್ಬ ವ್ಯಕ್ತಿ ತನ್ನ ಬಳಿಗೆ ಬಂದು ಮಾತನಾಡಲು ಪ್ರಯತ್ನಿಸಿರುವ ಬಗ್ಗೆಯೂ ಹೇಳಿಕೊಂಡಿದ್ದಾರೆ. ಈ ಘಟನೆಗಳು ನಿಜಕ್ಕೂ ಕಿರಿ ಕಿರಿ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ಆಟೋ ಚಾಲಕರಿಂದಲೂ ಕಿರಿಕಿರಿ

ಇನ್ನು ಇವರು ಆಟೋರಿಕ್ಷಾ ಚಾಲಕರೊಂದಿಗಿನ ಅನುಭವಗಳನ್ನು ಕೂಡಾ ಶೇರ್‌ ಮಾಡಿದ್ದಾರೆ. ರಸ್ತೆಯಲ್ಲಿ ಎರಡು ಆಟೋರಿಕ್ಷಾಗಳು ತಮ್ಮ ಸ್ಕೂಟರ್ ಅನ್ನು ಹಿಂದಿಕ್ಕಲು ಪ್ರಯತ್ನಿಸಿದವು. ತನ್ನ ಸ್ನೇಹಿತರು ರೆಕಾರ್ಡ್ ಮಾಡುವುದನ್ನು ನೋಡಿದ ಒಬ್ಬ ಚಾಲಕ ನಂತರ ಸುಮ್ಮನಾದ. ಆದರೆ ಇನ್ನೊಬ್ಬ ಮಾತ್ರ ಮತ್ತೆ ಮತ್ತೆ ತನ್ನ ಸ್ಕೂಟಿಯ ಕಡೆಗೆ ಆಟೋ ತರುತ್ತಿದ್ದ ಎಂದು ಹೇಳಿದ್ಧಾರೆ.

ಹುಡುಗಿಯರ ಜೀವನ ಕಷ್ಟ

ಪದೇ ಪದೇ ಇಂಥ ಕೆಟ್ಟ ಅನುಭವಗಳೇ ಎದುರಾದ ನಂತರ ಈ ಪ್ರಯೋಗವನ್ನು ಇಲ್ಲಿಗೇ ನಿಲ್ಲಿಸುವುದು ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹುಡುಗಿಯಾಗಿ ತಾನು ಅನುಭವಿಸಿದ ಅನುಭವವನ್ನು ಅತ್ಯಂತ ಭಯಾನಕ ಎಂದು ಅವರು ವಿವರಿಸಿದ್ದಾರೆ. ಎರಡು ಗಂಟೆಗಳ ಅನುಭವವು ರಾತ್ರಿಯಲ್ಲಿ ಒಂಟಿಯಾಗಿ ಹೊರಗೆ ಹೋಗುವ ಮಹಿಳೆಯರು ಎದುರಿಸುವ ತೊಂದರೆಗಳ ಬಗ್ಗೆ ಯೋಚಿಸುವಂತೆ ಮಾಡಿದೆ ಎಂದಿದ್ದಾರೆ. ಅಲ್ಲದೆ ಹುಡುಗಿಯರ ಜೀವನ ನಿಜಕ್ಕೂ ಕಷ್ಟ ಎಂದಿದ್ದಾರೆ.‌

ವಿಡಿಯೋ ಬಗ್ಗೆ ಸಾಕಷ್ಟು ಚರ್ಚೆ

ಬಿಜೈಂಟಲ್ ಅವರ ಇನ್‌ಸ್ಟಾಗ್ರಾಮ್ ವೀಡಿಯೊವನ್ನು 17 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋಗೆ ಬೇರೆ ಬೇರೆ ರೀತಿಯಲ್ಲಿ ಕಾಮೆಂಟ್‌ ಕೂಡಾ ಬಂದಿದೆ. ಅನೇಕರು ಇದನ್ನು ಕಠಿಣ ವಾಸ್ತವ ಎಂದು ಕರೆದಿದ್ದಾರೆ. ಕೆಲವರು ಇದನ್ನು ಮಹಿಳೆಯರ ದೈನಂದಿನ ಅನುಭವಗಳಿಗೆ ಲಿಂಕ್ ಮಾಡಿದರೆ, ಇನ್ನು ಕೆಲವರು ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+