Viral Video : ಇಟಲಿಯಲ್ಲಿ ಕುಳಿತು ಇಂಡಿಯನ್ ರೈಲ್ವೆಯ ಹೀಯಾಳಿಕೆ:ಅಕ್ಕನಿಗೆ ನೆಟ್ಟಿಗರ ಫುಲ್ ಕ್ಲಾಸ್
ಭಾರತದ ಜೀವನಾಡಿ ರೈಲ್ವೆ. ದಿನಕ್ಕೆ ಲಕ್ಷಾಂತರ ಮಂದಿ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ರೈಲು ಪ್ರಯಾಣ ಆರಾಮ ಮತ್ತು ಅಗ್ಗ ಎನ್ನುವುದೇ ಇದಕ್ಕೆ ಕಾರಣ. ಆದರೆ ರೈಲು ಟಿಕೆಟ್ ಬುಕ್ ಮಾಡುವುದು ಮಾತ್ರ ಸ್ವಲ್ಪ ಕಷ್ಟ. ನಮಗೆ ಬೇಕಾದಾಗ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ಹೇಳುವುದಕ್ಕೆ ಆಗಲ್ಲ. ಇನ್ನು ಸಮಯಕ್ಕೆ ಸರಿಯಾಗಿ ಸ್ಟೇಷನ್ ತಲುಪದೆ ರೈಲು ಮಿಸ್ ಆದರೆ ನಿಮ್ಮ ಟಿಕೆಟ್ ಹಣ ಲಾಸ್.
ಹೋಲಿಕೆ ತಪ್ಪಲ್ಲ, ಹೀಯಾಳಿಕೆ ?:
ಭಾರತದಿಂದ ಹೋಗಿ ಇಟಲಿಯಲ್ಲಿ ನೆಲೆಸಿರುವ ಮಹಿಳೆ ಇದೀಗ ಅಲ್ಲಿನ ರೈಲ್ವೆ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಅಲ್ಲಿನ ರೈಲ್ವೆ ವ್ಯವಸ್ಥೆಯನ್ನು ಹಾಡಿ ಹೊಗಳಿದ್ದಾರೆ. ಇದು ಕೆಲವರಿಗೆ ಇರುಸು ಮುರುಸು ಉಂಟು ಮಾಡಿದೆ. ಚೆನ್ನಾಗಿರುವುದನ್ನು ಚೆನ್ನಾಗಿದೆ ಎನ್ನುವುದರಲ್ಲಿ ತಪ್ಪೇನು ಎಂದು ಕೇಳಬಹುದು. ತಪ್ಪಿರುವುದು ಹೊಗಳಿಕೆಯಲ್ಲಿ ಅಲ್ಲ ಹೋಲಿಸಿ ನೋಡಿ ಮಾತನಾಡಿರುವುದರಲ್ಲಿ.

ಹೋಲಿಸಿದರೂ ತಪ್ಪಿಲ್ಲ, ಆದರೆ ಹೀಯಾಳಿಸಿ ಮಾತನಾಡುವುದು ಸರಿಯಲ್ಲ.
ಇಟಲಿಯ ರೈಲ್ವೆ ವ್ಯವಸ್ಥೆ ಬಗ್ಗೆ ಪೋಸ್ಟ್ :
ಈ ಮಹಿಳೆಯ ಪ್ರಕಾರ ಇಟಲಿಯಲ್ಲಿ ರೈಲಿನ ಸಮಯ ಬದಲಾದ್ದರಿಂದ ಅವರ ಟ್ರೈನ್ ಮಿಸ್ ಆಗಿತ್ತು. ಇದಕ್ಕೆ ಬದಲಾಗಿ ಬೇರೆ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿದಾಗ ಹೆಚ್ಚು ಹಣ ತೆಗೆದುಕೊಳ್ಳದೇ ಅದೇ ಹಳೆ ಟಿಕೆಟ್ ಹಣವನ್ನು ಅಡ್ಜೆಸ್ಟ್ ಮಾಡಿ ಮತ್ತೊಂದು ರೈಲಿನಲ್ಲಿ ಅವರ ಟಿಕೆಟ್ ಮಾಡಲಾಗಿದೆ.ತಮಗಾದ ಈ ಅನುಭವವನ್ನು ಭಾರತದ ರೈಲು ಪ್ರಯಾಣದ ಜೊತೆ ಹೋಲಿಸಿ ಮಾತನಾಡಿದ್ದಾರೆ. ಇವರ ಈ ವಿಡಿಯೋ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ.
ಒಂದು ನಿಮಿಷದ ಅಂತರದಲ್ಲಿ ರೈಲು ಮಿಸ್ :
ಈ ವಿಡಿಯೋವನ್ನು ಗರಿಮಾ ಚೌಹಾಣ್ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಅವರಿರುವುದು ನೇಪಲ್ಸ್ ನಲ್ಲಿ. ಅಲ್ಲಿಂದ ಫ್ಲಾರೆನ್ಸ್ ಗೆ ಹೈ-ಸ್ಪೀಡ್ ರೈಲನ್ನು ಬುಕ್ ಮಾಡಿದ್ದಾರೆ. ಅವರು ಬುಕ್ ಮಾಡಿರುವ ರೈಲು ಬೆಳಿಗ್ಗೆ 8.30ಕ್ಕೆ ಹೊರಡಬೇಕಿತ್ತು. ಆದರೆ ಆ ಟ್ರೈನ್ ಸಮಯವನ್ನು ಬೆಳಿಗ್ಗೆ 8.20ಕ್ಕೇ ಚೇಂಜ್ ಮಾಡಲಾಗಿತ್ತು. ರೈಲು ಟೈಂನಲ್ಲಾದ ಬದಲಾವಣೆ ಬಗ್ಗೆ ಅಲ್ಲಿನ ರೈಲ್ವೆ ಇಮೇಲ್ ಕೂಡಾ ಕಳುಹಿಸಿದೆ. ಆದರೆ ರೈಲ್ವೆ ಅಪ್ಲಿಕೇಶನ್ ನಲ್ಲಿ ಇದು ಅಪ್‌ಡೇಟ್ ಆಗಿರಲಿಲ್ಲ.ಹಾಗಾಗಿ ಈ ಬದಲಾವಣೆ ಗರಿಮಾ ಗಮನಕ್ಕೂ ಬರಲಿಲ್ಲ. ಅವರು ಟಿಕೆಟ್‌ನಲ್ಲಿ ಪ್ರಿಂಟ್ ಆದ ಟೈಂ ಪ್ರಕಾರವೇ ಸ್ಟೇಷನ್‌ಗೆ ಬಂದಿದ್ದಾರೆ. ಕೇವಲ ಒಂದು ನಿಮಿಷದ ಅಂತರದಲ್ಲಿ ರೈಲು ಮಿಸ್ ಆಗಿದೆ.
ಹಳೆಯ ಹಣವೇ ಅಡ್ಜೆಸ್ಟ್ :
ರೈಲು ಮಿಸ್ ಆದ ಮೇಲೆ ಇನ್ನೇನು ಮಾಡುವುದು. ಬೇರೆ ರೈಲಿನ ಟಿಕೆಟ್ ತಗೋಬೇಕು. ಹಾಗಾಗಿ ಅವರು ಟಿಕೆಟ್ ಕೌಂಟರ್‌ಗೆ ಹೋಗುತ್ತಾರೆ. ಹೊಸ ಬುಕಿಂಗ್‌ಗೆ ದುಡ್ಡು ಕೊಡಲು ಹೋದಾಗ ಅಲ್ಲಿನ ಸಿಬ್ಬಂದಿ ಹಳೆಯ ಟಿಕೆಟ್ ಹಣವನ್ನೇ ಅಡ್ಜೆಸ್ಟ್ ಮಾಡುವುದಾಗಿ ಹೇಳಿ ಬೆಳಿಗ್ಗೆ 11 ಗಂಟೆಯ ರೈಲಿನಲ್ಲಿ ಟಿಕೆಟ್ ಬುಕ್ ಮಾಡುತ್ತಾರೆ. ಅಂದರೆ ಗರಿಮಾ ಹೆಚ್ಚು ಹಣ ಕೊಡದೇ ಹೊಸ ಟಿಕೆಟ್ ಖರೀದಿ ಮಾಡಿದ ಹಾಗೆ ಆಯಿತು.
ಇಂಡಿಯನ್ ರೈಲ್ವೆ ಬಗ್ಗೆ ಹೇಳಿದ್ದೇನು ?:
ಇಷ್ಟಾದ ಮೇಲೆ ತಮ್ಮ ಅನುಭವವನ್ನು ಅವರು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ತಮ್ಮ ಅನುಭವ ಶೇರ್ ಮಾಡುವ ಜೊತೆಗೆ ಇಂಡಿಯನ್ ರೈಲ್ವೆಯನ್ನು ಇಟಲಿಯ ರೈಲು ವ್ಯವಸ್ಥೆ ಜೊತೆ ಹೋಲಿಸಿ ಮಾತನಾಡಿದ್ದಾರೆ. ಇಂಡಿಯಾದಲ್ಲಿ ಟ್ರೈನ್ ಮಿಸ್ ಆದರೆ ಇನ್ನೊಂದು ರೈಲಿನಲ್ಲಿ ಟಿಕೆಟ್ ಮಾಡಿ ಕೊಡುತ್ತಾರೆಯಾ ಹೇಳಿ. ಭಾರತದಲ್ಲಿ ಬೇರೆ ರೈಲಿನಲ್ಲಿ ಟಿಕೆಟ್ ಮಾಡಿ ಕೊಡುವಂತೆ ಕೇಳಿದರೆ ಜಾಗದಿಂದ ಓಡಿಸಿ ಬಿಡುತ್ತಾರೆ. ಅಲ್ಲಿ ರೈಲು ಬೇಗ ಬರೋದೇ ಇಲ್ಲ, ಯಾವಾಗಲೂ ಲೇಟ್, ಕ್ಯಾನ್ಸಲ್ ಆದರೂ ಆಶ್ಚರ್ಯ ಇಲ್ಲ ಎಂದು ವ್ಯಂಗ್ಯವಾಗಿ ಬರೆದಿದ್ದಾರೆ.
ಮಿಶ್ರ ಪ್ರತಿಕ್ರಿಯೆ :
ಅವರ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ಬಂದಿವೆ. 10-15 ದಿನ ದೇಶ ಬಿಟ್ಟು ಹೊರಗೆ ಹೋದ ಭಾರತವನ್ನು ಟೀಕಿಸೋಕೆ ಶುರು ಮಾಡೋಣ ಎಂದು ಒಬ್ಬರು ರಿಯಾಕ್ಟ್ ಮಾಡಿದ್ದಾರೆ. ಮತ್ತೊಬ್ಬರು ಅಕ್ಕಾ ಇಟಲಿಯಲ್ಲಿ ರೈಲು ಎಷ್ಟು ಲೇಟ್ ಆಗುತ್ತದೆ ಅನ್ನೋ ಅನುಭವ ನಿಮಗಿನ್ನೂ ಆಗಿಲ್ಲ. ಆಗಲಿ ಈಗ ಹೇಳಿದ್ದನ್ನೆಲ್ಲಾ ಮರೆತು ಬಿಡುತ್ತೀರಿ ಅಂತ ಕಾಮೆಂಟ್ ಮಾಡಿದ್ದಾರೆ.
ಭಾರತದಲ್ಲಿ ಟಿಕೆಟ್ ಎಕ್ಸ್ಚೇಂಜ್ ಕೂಡಾ ಕಷ್ಟ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಇನ್ನೊಬ್ಬರು ಫ್ರೀ ಇರಲಿ, ದುಡ್ಡು ಕೊಡುತ್ತೇವೆ ಎಂದರೂ ಎಕ್ಸ್‌ಚೇಂಜ್ ಆಗಲ್ಲ,ಅಕ್ಷರಶಃ ಭಿಕ್ಷೆ ಬೇಡಬೇಕಾಗುತ್ತದೆ ಎಂದು ಬರೆದಿದ್ದಾರೆ. ಇನ್ನೊಬ್ಬರು ಭಾರತದಲ್ಲಿ ನೀವು ಟ್ರೈನ್ ಮಿಸ್ ಮಾಡಬಾರದು ಎನ್ನುವ ಕಾರಣಕ್ಕೆ ನಾಲ್ಕು ನಾಲ್ಕು ಬಾರಿ ಬೊಬ್ಬೆ ಹೊಡೆದು ಕೂಗಿ ಕರೀತಾರೆ ಅಂತ ತಮಾಷೆಯಾಗಿ ಬರೆದಿದ್ದಾರೆ.


Click it and Unblock the Notifications
