ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಮರ; ಭಾರತದ ಅರಣ್ಯಗಳಲ್ಲಿರುವ ವಿಶೇಷ ಮರದ ವಿಡಿಯೋ ವೈರಲ್
ಇದೊಂದು ವಿಶೇಷವಾದ ಮರ, ಇದು ನೀರನ್ನು ತನ್ನ ಕಾಂಡದಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತದೆ. ತೊಗಟೆಯನ್ನು ಕತ್ತರಿಸಿದರೆ ನೀರು ರಭಸವಾಗಿ ಚಿಮ್ಮುತ್ತದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಈ ಮರ ಕಂಡುಬರುತ್ತದೆ. ಸದ್ಯ ಆಂಧ್ರಪದೇಶದ ಕಾಡಿನಲ್ಲಿ ಅರಣ್ಯಾಧಿಕಾರಿಗಳು ಮರವನ್ನು ಕತ್ತರಿಸಿದಾಗ ನೀರು ಚಿಮ್ಮುವ ವಿಡಿಯೋ ಹಂಚಿಕೊಂಡಿದ್ದು ವಿಡಿಯೋ ಸಖತ್ ವೈರಲ್ ಆಗಿದೆ.
ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಭಾರತೀಯ ಲಾರೆಲ್ ಜಾತಿಯ ಮರದ ತೊಗಟೆಯನ್ನು ಕತ್ತರಿಸಿದಾಗ ನೀರು ಚಿಮ್ಮುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಪಾಪಿಕೊಂಡ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಳೆದಿರುವ ಈ ಭಾರೀತಯ ಲಾರೆಲ್ ಮರದಲ್ಲಿ ಬೇಸಿಗೆಯಲ್ಲಿ ನೀರು ಸಂಗ್ರಹವಾಗುತ್ತದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಲು ಮರದ ತೊಗಟೆಯನ್ನು ಕತ್ತರಿಸಿದ್ದಾರೆ.
ಬುಡಕಟ್ಟು ಜನಾಂಗದವರಿಂದ ಮಾಹಿತಿ
ಈ ಗಿಡ ಬೇಸಿಗೆಯಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಂಡಿರುತ್ತದೆ ಎನ್ನುವ ವಿಚಾರವನ್ನು ಕೊಂಡ ರೆಡ್ಡಿ ಬುಡಕಟ್ಟು ಜನಾಂಗದವರು ಅರಣ್ಯ ಇಲಾಖೆಯೊಂದಿಗೆ ಹಂಚಿಕೊಂಡಿದ್ದಾರೆ, ವಿಶೇಷವಾಗಿ ಗೋದಾವರಿ ಪ್ರದೇಶದ ಪಾಪಿಕೊಂಡ ಬೆಟ್ಟದ ಶ್ರೇಣಿಯಲ್ಲಿ ವಾಸಿಸುವ ದುರ್ಬಲ ಬುಡಕಟ್ಟು ಗುಂಪು ಇದಾಗಿದೆ. ಈ ಜನರಿಗೆ ಸ್ಥಳೀಯ ಮರಗಳ ಬಗ್ಗೆ ಅಪಾರ ಅನುಭವ ಇದೆ.
During parched summers the Indian Laurel tree Terminalia tomentosa stores water. The water has strong smell and tastes sour.
— IFS Narentheran (@NarentheranGG) March 30, 2024
Amazing Adaptation in Indian Forests.
Knowledge courtesy : Konda Reddy Tribes of AP. pic.twitter.com/szLY75UTjK
ಭಾರತೀಯ ಲಾರೆಲ್ ಮರವನ್ನು ವೈಜ್ಞಾನಿಕವಾಗಿ ಫಿಕಸ್ ಮೈಕ್ರೋಕಾರ್ಪಾ ಎಂದು ಕರೆಯಲಾಗುತ್ತದೆ, ಇದು ಉಷ್ಣವಲಯದ ಅಥವಾ ಉಪೋಷ್ಣವಲಯದದಲ್ಲಿ ಬೆಳೆಯುವ ಮರವಾಗಿದೆ. ಮುಖ್ಯವಾಗಿ ಏಷ್ಯಾ, ಪಶ್ಚಿಮ ಪೆಸಿಫಿಕ್ ದ್ವೀಪಗಳು ಮತ್ತು ಆಸ್ಟ್ರೇಲಿಯಾದ ಹಲವಾರು ಭಾಗಗಳಲ್ಲಿ ಈ ಮರಗಳನ್ನು ಹೆಚ್ಚಾಗಿ ನೋಡಬಹುದಾಗಿದೆ.
ಹಲವು ಪ್ರಯೋಜನ ಹೊಂದಿರುವ ಮರ
ಭಾರತೀಯ ಲಾರೆಲ್ ಮರವನ್ನು ಹಲವು ಕಡೆ ಅಲಂಕಾರಿಕ ಮರವಾಗಿ ಕೂಡ ಬೆಳೆಸಲಾಗುತ್ತದೆ. ದಟ್ಟವಾಗಿ ಬೆಳೆಯುವ ಈ ಮರ, ನಯವಾದ ತಿಳಿ ಬೂದು ತೊಗಟೆ ಮತ್ತು ಹೊಳೆಯುವ ಹಚ್ಚ ಹಸಿರು ಎಲೆಗಳನ್ನು ಹೊಂದಿರುತ್ತದೆ. ದಪ್ಪ ಎಲೆಗಳನ್ನು ಹೊಂದಿರುವ ಕಾರಣ ಹಲವು ಪಕ್ಷಿಗಳಿಗೆ ಈ ಮರ ನೆಲೆ ಕೊಡುತ್ತದೆ. ಮರದಲ್ಲಿ ಹಣ್ಣುಗಳು ಕೂಡ ಪಕ್ಷಿಗಳಿಗೆ ಅಚ್ಚುಮೆಚ್ಚು.
ಕನ್ನಡದಲ್ಲಿ ಇದನ್ನು ಮತ್ತಿ ಮರ ಎಂದು ಗುರುತಿಸಲಾಗುತ್ತದೆ. ಇಂಡಿಯನ್ ಸಿಲ್ವರ್ ಓಕ್ ಎಂದು ಕರೆಯಲ್ಪಡುವ ಮರಕ್ಕೆ ಉತ್ತಮ ವಾಣಿಜ್ಯ ಮೌಲ್ಯ ಇದೆ. ಈ ಮರಗಳನ್ನು ಸಂರಕ್ಷಿಸುವ ಉದ್ದೇಶದಿಂದ ಅರಣ್ಯ ಅಧಿಕಾರಿಗಳು ಮರದ ನಿಖರವಾದ ಸ್ಥಳವನ್ನು ಬಹಿರಂಗಪಡಿಸಿಲ್ಲ.
-
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Water Tank Vastu: ಮನೆಯಲ್ಲಿ ನೀರಿನ ಟ್ಯಾಂಕ್ ಇದೆಯೇ? ವಾಸ್ತು ನಿಯಮಗಳು ತಿಳಿದುಕೊಳ್ಳಿ -
ಗುಡ್ನ್ಯೂಸ್: ಬನ್ನೇರುಘಟ್ಟದಲ್ಲಿ 25 ಮೀಟರ್ ಎತ್ತರದ ವೀಕ್ಷಣಾ ಟವರ್ ನಿರ್ಮಾಣಕ್ಕೆ ಒಪ್ಪಂದ -
Bengaluru Water: ಬೆಂಗಳೂರು ಕೆಸಿ, ಎಚ್ ಎನ್ ವ್ಯಾಲಿ ನೀರಿನಿಂದ ಅಪಾಯವಿಲ್ಲ: ಸಚಿವ ಭೋಸರಾಜು -
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications