ವಿಡಿಯೋ; ಮನುಷ್ಯನ ತಲೆ ಕಚ್ಚಿಕೊಂಡು ರಸ್ತೆಯಲ್ಲಿ ಓಡಿದ ನಾಯಿ

ಬೀದಿ ನಾಯಿಯೊಂದು ಮಾನವನ ತಲೆಯನ್ನು ಕಚ್ಚಿಕೊಂಡು ರಸ್ತೆಯಲ್ಲಿ ಓಡುವ ದೃಶ್ಯವೊಂದು ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಮೆಕ್ಸಿಕೋದಲ್ಲಿ. ಈ ಭಯಾನಕ ದೃಶ್ಯವನ್ನು ಪ್ರಯಾಣಿಕರೊಬ್ಬರು ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ವಿಡಿಯೋ ವೈರಲ್ ಆಗಿದೆ.

ಮೆಕ್ಸಿಕೋ ಪಟ್ಟಣದ ನಿವಾಸಿಗಳು ಝಕಾಟೆಕಾಸ್‌ನ ಬೀದಿಯಲ್ಲಿ ನಾಯಿಯೊಂದು ಮಾನವ ತಲೆಯನ್ನು ಬಾಯಿಯಲ್ಲಿ ಹಿಡಿದುಕೊಂಡು ಓಡುತ್ತಿರುವುದನ್ನು ಕಂಡಿದ್ದಾರೆ. ಫಾಕ್ಸ್ ನ್ಯೂಸ್ ವರದಿ ಪ್ರಕಾರ ಸ್ಥಳೀಯ ಪೊಲೀಸರು ವಿಡಿಯೋ ವೈರಲ್ ಆದ ಬಳಿಕ ನಾಯಿ, ತಲೆಯನ್ನು ಪತ್ತೆ ಹಚ್ಚಿದ್ದಾರೆ.

ಈ ದೃಶ್ಯವನ್ನು ಹಿಂಸಾಚಾರ ಪೀಡಿತ ಉತ್ತರ ರಾಜ್ಯವಾದ ಝಕಾಟೆಕಾಸ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ನಾಯಿ ಅಪರಾಧದ ಸ್ಥಳದಿಂದ ಮಾನವ ತಲೆಯನ್ನು ಬಾಯಿಯಲ್ಲಿ ಹಿಡಿದುಕೊಂಡು ಅದನ್ನು ತಿನ್ನಲು ಎಲ್ಲೋ ತೆಗೆದುಕೊಂಡು ಹೋಗುತ್ತಿತ್ತು ಎಂದು ವರದಿಗಳ ಹೇಳಿವೆ. ಪೊಲೀಸರು ಅಪರಾಧದ ಸ್ಥಳ ತಲುಪುವ ವೇಳೆಗೆ ನಾಯಿ ಮಾನವ ತಲೆಯನ್ನು ಹಿಡಿದು ಓಡಿಹೋಯಿತು ಎಂದು ಮೆಕ್ಸಿಕನ್ ಪತ್ರಿಕೆ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

Viral video Dog runs with human head in its mouth in Mexico

ಬುಧವಾರದಂದು ಮಾಂಟೆ ಎಸ್ಕೊಬೆಡೊ ಪಟ್ಟಣದಲ್ಲಿ ತಲೆ ಮತ್ತು ದೇಹದ ಇತರ ಭಾಗಗಳನ್ನು ತುಂಡಾಗಿಸಿರುವ ಘಟನೆ ನಡೆದಿದೆ. ಬಲಿಪಶುವನ್ನು ಇನ್ನೂ ಗುರುತಿಸಲಾಗಿಲ್ಲ ಮತ್ತು ದೇಹದ ಉಳಿದ ಭಾಗಗಳು ಸಹ ಪತ್ತೆಯಾಗಿಲ್ಲ ಎಂದು ಕಾನೂನು ಜಾರಿ ಅಧಿಕಾರಿಯೊಬ್ಬರು ಫಾಕ್ಸ್‌ಗೆ ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಬಲಿಪಶುವಿನ ಲಿಂಗ ಮತ್ತು ವಯಸ್ಸನ್ನು ನಿರ್ಧರಿಸಲು ತಲೆಯನ್ನು ವಿಧಿವಿಜ್ಞಾನ ತಂಡಕ್ಕೆ ಕಳುಹಿಸಲಾಗಿದೆ. ಅಧಿಕಾರಿಗಳು ಇದೊಂದು ಅಪರಾಧ ಪರಿಣಾಮವಾಗಿರಬಹುದು ಎಂದು ಸೂಚಿಸಿದ್ದಾರೆ.

Viral video Dog runs with human head in its mouth in Mexico

ಗೆರೆರೊದಲ್ಲಿ ಎರಡು ಪ್ರತಿಸ್ಪರ್ಧಿ ಗ್ಯಾಂಗ್‌ಗಳ ನಡುವಿನ ಹೋರಾಟದಲ್ಲಿ ಮಾಜಿ ಮೇಯರ್ ಸೇರಿದಂತೆ 18 ಮಂದಿ ಸಾವನ್ನಪ್ಪಿದ ಸಮಯದಲ್ಲಿ ಈ ಘಟನೆ ನಡೆದಿದೆ. ಇತ್ತೀಚಿನ ವರ್ಷಗಳಲ್ಲಿ ಸಿನಾಲೋವಾ ಮತ್ತು ಜಲಿಸ್ಕೊ ​​ಡ್ರಗ್ ಕಾರ್ಟೆಲ್‌ಗಳ ನಡುವಿನ ಟರ್ಫ್ ಯುದ್ಧದಿಂದ ಝಕಾಟೆಕಾಸ್‌ನಲ್ಲಿ ಹಿಂಸಾಚಾರ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+