ವೈರಲ್ ವಿಡಿಯೋ: ಬೆಟ್ಟದ ಮೇಲೆ ಮ್ಯಾಗಿ ಮಾರಾಟ ಮಾಡಿ ಒಂದೇ ದಿನದಲ್ಲಿ ₹24,000 ಸಾವಿರ ಗಳಿಸಿದ ಯುವಕ
ದೆಹಲಿ ಮೂಲದ ಕಂಟೆಂಟ್ ಕ್ರಿಯೇಟರ್ ಒಬ್ಬರು ಪರ್ವತ ಪ್ರದೇಶದಲ್ಲಿ ಮ್ಯಾಗಿ ಮಾರಾಟ ಮಾಡಿ ಒಂದೇ ದಿನದಲ್ಲಿ ₹24 ಸಾವಿರ ಗಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ಆಶ್ಚರ್ಯಚಕಿತರಾದ ನೆಟ್ಟಿಗರು, "ನಮಗೂ ಒಂದು ಹೊಸ ಬಿಸಿನೆಸ್ ಐಡಿಯಾ ಸಿಕ್ಕಿತು" ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಭಾರತೀಯರಿಗೆ ಪರ್ವತ ಪ್ರದೇಶಗಳಿಗೆ ಪ್ರವಾಸ ಹೋದಾಗ ಬಿಸಿ ಬಿಸಿ ಮ್ಯಾಗಿ ತಿನ್ನುವುದು ಒಂದು ವಿಶೇಷ ಅನುಭವವಾಗಿರುತ್ತದೆ. ತಣ್ಣನೆಯ ವಾತಾವರಣದಲ್ಲಿ ಸುಂದರ ದೃಶ್ಯಾವಳಿಗಳ ನಡುವೆ ಮ್ಯಾಗಿ ಸವಿಯುವುದು ಅನೇಕ ಪ್ರವಾಸಿಗರ ಮೆಚ್ಚಿನ ಆಹಾರವಾಗಿದೆ. ಇದೇ ಕುತೂಹಲದ ಹಿನ್ನೆಲೆಯಲ್ಲಿ, ದೆಹಲಿ ಮೂಲದ ಕಂಟೆಂಟ್ ಕ್ರಿಯೇಟರ್ ದೇವಾಂಶ್ ತ್ಯಾಗಿ ಅವರು ಪರ್ವತ ಪ್ರದೇಶದಲ್ಲಿ ಒಂದು ದಿನ ಮ್ಯಾಗಿ ಅಂಗಡಿ ನಡೆಸಿದರೆ ಎಷ್ಟು ಆದಾಯ ಬರಬಹುದು ಎಂಬುದನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿದ್ದಾರೆ.

ವೈರಲ್ ಆಗಿರುವ ಈ ವಿಡಿಯೋದಲ್ಲಿ, ದೇವಾಂಶ್ ತ್ಯಾಗಿ ಪರ್ವತ ಪ್ರದೇಶದ ಸುಂದರ ಸ್ಥಳವೊಂದರಲ್ಲಿ ತಾತ್ಕಾಲಿಕ ಮ್ಯಾಗಿ ಸ್ಟಾಲ್ ನಿರ್ಮಿಸಿ ವ್ಯಾಪಾರ ಆರಂಭಿಸಿರುವುದು ಕಂಡುಬರುತ್ತದೆ. ಪ್ರವಾಸಿಗರು ಮತ್ತು ಟ್ರೆಕ್ಕಿಂಗ್‌ಗೆ ಬಂದವರು ಸುಲಭವಾಗಿ ತಂಗಬಹುದಾದ ಸ್ಥಳವನ್ನು ಆಯ್ಕೆ ಮಾಡಿಕೊಂಡಿರುವ ಅವರು, ಅಲ್ಲಿ ಕುರ್ಚಿ, ಟೇಬಲ್ ಹಾಗೂ ಅಡುಗೆ ಮಾಡಲು ಅಗತ್ಯವಿರುವ ಸಣ್ಣ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.
ಅವರು ತಮ್ಮ ಸ್ಟಾಲ್‌ನಲ್ಲಿ ಸಾಮಾನ್ಯ ಮ್ಯಾಗಿಗೆ ₹100 ಹಾಗೂ ಬಟರ್ ಮ್ಯಾಗಿಗೆ ₹120 ದರ ನಿಗದಿಪಡಿಸಿದ್ದರು. ದಿನವಿಡೀ ಪ್ರವಾಸಿಗರು ಮತ್ತು ಹೈಕರ್ಸ್‌ಗಳು (Foot travelers) ಸ್ಟಾಲ್‌ಗೆ ಭೇಟಿ ನೀಡಿ ಮ್ಯಾಗಿ ಸವಿದಿದ್ದಾರೆ. ದೇವಾಂಶ್ ಅವರೇ ಸ್ವತಃ ಮ್ಯಾಗಿ ತಯಾರಿಸಿ ಗ್ರಾಹಕರಿಗೆ ಉಣಬಡಿಸುತ್ತಿರುವುದು (Serve) ವಿಡಿಯೊದಲ್ಲಿ ಕಂಡುಬಂದಿದೆ.
ದಿನಾಂತ್ಯದಲ್ಲಿ ಒಟ್ಟು 225 ಪ್ಲೇಟ್ ಮ್ಯಾಗಿ ಮಾರಾಟವಾಗಿದ್ದು, ಸುಮಾರು ₹24 ಸಾವಿರ ಆದಾಯ ಬಂದಿರುವುದಾಗಿ ದೇವಾಂಶ್ ತಿಳಿಸಿದ್ದಾರೆ. ಈ ಅಂಕಿ ಅಂಶಗಳು ನೆಟ್ಟಿಗರನ್ನು ಅಚ್ಚರಿಗೊಳಿಸಿವೆ.
ವಿಡಿಯೋ ವೈರಲ್ ಆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. "ಇದು ನನ್ನ ಒಂದು ತಿಂಗಳ ಸಂಬಳ" ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು "ಹೊಸ ವ್ಯವಹಾರದ ಐಡಿಯಾ ಸಿಕ್ಕಿತು" ಎಂದು ಬರೆದಿದ್ದಾರೆ.
ಸೂಚನೆ: ಈ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ಬಳಕೆದಾರರ ವಿಷಯದ ಆಧಾರಿತವಾಗಿದೆ. ಹೇಳಿಕೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ.














Click it and Unblock the Notifications