ವೈರಲ್ ವೀಡಿಯೋ: ಈ ಅಜ್ಜಿ ಸ್ಪೀಡ್ ಗೆ ದೊಡ್ಡ ಸಲಾಂ!
Recommended Video

Viral Video : ಹಣ್ಣು ಹಣ್ಣು ಮುದುಕಿಯ ಟೈಪಿಂಗ್ ಸ್ಪೀಡ್ ನೋಡಿದ್ರೆ ಶಾಕ್ ಆಗ್ತೀರಾ | Oneindia kannada
ಪಟ ಪಟ ಪಟಾಂತ ಅಜ್ಜಿಯೊಬ್ಬರು ಟೈಪ್ ಮಾಡೋ ಸ್ಪೀಡ್ ನೋಡಿದ್ರೆ ಎಂಥವರೂ ಹೌಹಾರಬೇಕು! ಇಳಿ ವಯಸ್ಸಿನ ಈ ಹಣ್ಣು ಹಣ್ಣು ಅಜ್ಜಿ 120 ಕಿ.ಮೀ.ಸ್ಪೀಡ್ ನಲ್ಲಿ ಟೈಪ್ ಮಾಡ್ತಿರೋ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ!
ಟೈಪಿಂಗು, ಫೋನು, ಕಂಪ್ಯೂಟರ್ ಇತ್ಯಾದಿಗಳ ಬಗ್ಗೆ ಹಳೇ ಕಾಲದವರಿಗೆ ಏನು ಗೊತ್ತು ಎಂದು ಮುಗುಮುರಿಯುವವರೊಮ್ಮೆ ಅಜ್ಜಿಯ ಈ ವಿಡಿಯೋ ನೋಡಬೇಕು!

ಈ ಅಜ್ಜಿ ಎಲ್ಲಿಯವರು, ವಯಸ್ಸೆಷ್ಟು ಎಂಬಿತ್ಯಾದಿ ಯಾವ ವೈಯಕ್ತಿಕ ವಿವರವೂ ಗೊತ್ತಿಲ್ಲ. ಆದರೆ ಈ ವಯಸ್ಸಿನಲ್ಲೂ ಯುವಕರೇ ನಾಚುವಂತೆ ಇವರು ಟೈಪ್ ಮಾಡುವ ಸ್ಪೀಡ್ ಮಾತ್ರ ಎಲ್ಲರಿಗೂ ಸ್ಫೂರ್ತಿಯೇ!











Click it and Unblock the Notifications