Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು
ಬೆಂಗಳೂರು: ಸಾಮಾನ್ಯವಾಗಿ ಯಾವುದೇ ಒಂದು ಸಿನಿಮಾ ಬಿಡುಗಡೆಯಾದರೆ, ಅದರ ಬಗ್ಗೆ ಚಿತ್ರಮಂದಿರಗಳಲ್ಲಿ, ಅಭಿಮಾನಿಗಳ ಪೇಜ್ಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುವುದು ಸಹಜ. ಆದರೆ, ಇದೀಗ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿರುವ 'ಧುರಂಧರ್: ದಿ ರಿವೆಂಜ್' ಸಿನಿಮಾ ಮಾತ್ರ ಈ ಎಲ್ಲದರ ಗಡಿ ದಾಟಿ, ನೇರವಾಗಿ ವಿದ್ಯಾರ್ಥಿಗಳ ಪರೀಕ್ಷಾ ಕೊಠಡಿಗೆ ಎಂಟ್ರಿಕೊಟ್ಟಿದೆ. ಹೌದು, ಕಾಮರ್ಸ್ ವಿದ್ಯಾರ್ಥಿಗಳ 'ಅಕೌಂಟ್ಸ್' ಪ್ರಶ್ನೆಪತ್ರಿಕೆಯಲ್ಲಿ ಈ ಸಿನಿಮಾದ ಪಾತ್ರಗಳ ಹೆಸರುಗಳು ರಾರಾಜಿಸುತ್ತಿದ್ದು, ಈ ಕುರಿತ ಪೋಸ್ಟ್ ಒಂದು ಅಂತರ್ಜಾಲದಲ್ಲಿ ಭಾರೀ ವೈರಲ್ ಆಗುತ್ತಿದೆ.
ವೈರಲ್ ಆದ ಪ್ರಶ್ನೆಪತ್ರಿಕೆಯಲ್ಲಿ ಏನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಶ್ನೆಪತ್ರಿಕೆಯ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಈ ಪ್ರಶ್ನೆಪತ್ರಿಕೆಯು ಕಾಮರ್ಸ್ ವಿದ್ಯಾರ್ಥಿಗಳ ಲೆಕ್ಕಶಾಸ್ತ್ರ ಅಥವಾ ಅಕೌಂಟ್ಸ್ ಪರೀಕ್ಷೆಯದ್ದಾಗಿದೆ. ಇದರಲ್ಲಿ ಲೆಕ್ಕ ಬಿಡಿಸಲು ನೀಡಲಾದ ಪ್ರಶ್ನೆಗಳಲ್ಲಿ 'ಧುರಂಧರ್' ಸಿನಿಮಾದ ಜನಪ್ರಿಯ ಪಾತ್ರಗಳ ಹೆಸರುಗಳನ್ನು ಬಳಸಲಾಗಿದೆ. ಈ ಫೋಟೋವನ್ನು ಹಂಚಿಕೊಂಡಿರುವ ಬಳಕೆದಾರರು, "ಧುರಂಧರ್ ಸಿನಿಮಾ ಎಷ್ಟರಮಟ್ಟಿಗೆ ವೈರಲ್ ಆಗಿದೆ ಎಂದರೆ, ಅಕೌಂಟ್ಸ್ ಪಾಠ ಮಾಡುವ ಮೇಷ್ಟ್ರು ಕೂಡ ಈ ಚಿತ್ರದ ಅಪ್ಪಟ ಅಭಿಮಾನಿಯಾಗಿ ಬದಲಾಗಿದ್ದಾರೆ" ಎಂದು ತಮಾಷೆಯಾಗಿ ಶೀರ್ಷಿಕೆ (Caption) ನೀಡಿದ್ದಾರೆ. ಈ ಪ್ರಶ್ನೆಪತ್ರಿಕೆ ನಿಖರವಾಗಿ ಯಾವ ಕಾಲೇಜು ಅಥವಾ ಯಾವ ಬೋರ್ಡ್ಗೆ ಸೇರಿದ್ದು ಎಂಬುದು ಇನ್ನೂ ಖಚಿತವಾಗಿಲ್ಲವಾದರೂ, ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಆಸಕ್ತಿದಾಯಕವಾಗಿಸಲು ಶಿಕ್ಷಕರು ಮಾಡಿರುವ ಈ ಪ್ರಯೋಗ ಎಲ್ಲರ ಗಮನ ಸೆಳೆದಿದೆ.

ಎ, ಬಿ, ಸಿ ಬದಲು ಜಮೀಲ್, ಅಸ್ಲಂ ಹೆಸರು
ಅಕೌಂಟ್ಸ್ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಪಾಲುದಾರಿಕೆ (Partnership) ಲೆಕ್ಕಾಚಾರದ ಪ್ರಶ್ನೆಗಳು ಬರುವುದು ಮಾಮೂಲಿ. ಇಂತಹ ಪ್ರಶ್ನೆಗಳಲ್ಲಿ ಪಾಲುದಾರರ ಹೆಸರುಗಳನ್ನು ಉಲ್ಲೇಖಿಸಲು ಎ, ಬಿ ಮತ್ತು ಸಿ (A, B, C) ಅಥವಾ ಯಾವುದಾದರೂ ಕಾಲ್ಪನಿಕ ಹೆಸರುಗಳನ್ನು ಬಳಸಲಾಗುತ್ತದೆ. ಆದರೆ, ಈ ವೈರಲ್ ಪ್ರಶ್ನೆಪತ್ರಿಕೆಯಲ್ಲಿ ಪಾಲುದಾರರ ಹೆಸರುಗಳ ಜಾಗದಲ್ಲಿ ಧುರಂಧರ್ ಸಿನಿಮಾದ 'ಜಮೀಲ್ ಜಮಾಲಿ', 'ಎಸ್ಪಿ ವೌಧರ್ ಅಸ್ಲಂ' ಮತ್ತು 'ಯಲಿನಾ ಜಮಾಲಿ' ಎಂಬ ಹೆಸರುಗಳನ್ನು ನೀಡಲಾಗಿದೆ.
ವ್ಯವಹಾರದಿಂದ ಒಬ್ಬ ಪಾಲುದಾರ ನಿವೃತ್ತನಾದ ನಂತರ, ಉಳಿದ ಪಾಲುದಾರರ ಹೊಸ ಲಾಭ-ಹಂಚಿಕೆ ಅನುಪಾತವನ್ನು (Profit-sharing ratio) ಲೆಕ್ಕಹಾಕುವಂತೆ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಲಾಗಿದೆ. ಇಷ್ಟೇ ಅಲ್ಲದೆ, ಪ್ರಶ್ನೆಪತ್ರಿಕೆಯ ಮತ್ತೊಂದು ಭಾಗದಲ್ಲಿ ಬ್ಯಾಲೆನ್ಸ್ ಶೀಟ್ (Balance Sheet) ತಯಾರಿಸುವಾಗ 'ರೆಹಮಾನ್' ಎಂಬ ಪಾತ್ರದ ಹೆಸರನ್ನು ಹಾಗೂ ಆ ಪಾತ್ರಕ್ಕೆ ಸಂಬಂಧಿಸಿದ ದಿನಾಂಕವನ್ನು ಉಲ್ಲೇಖಿಸಲಾಗಿದೆ. ಒಟ್ಟಿನಲ್ಲಿ ಶುಷ್ಕವಾಗಿರುವ ಅಕೌಂಟ್ಸ್ ಪರೀಕ್ಷೆಯಲ್ಲಿ ಸಿನಿಮಾದ ಕಥೆಯನ್ನೇ ತಂದು ನಿಲ್ಲಿಸಲಾಗಿದೆ.
ಇದೇ ಮಾದರಿಯ ಪರೀಕ್ಷೆಗೆ ನೆಟ್ಟಿಗರ ಡಿಮ್ಯಾಂಡ್
ಈ ಪೋಸ್ಟ್ ಆನ್ಲೈನ್ನಲ್ಲಿ ಹರಿದಾಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳ ಬಳಕೆದಾರರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಬಹುತೇಕರು ಅಚ್ಚರಿಯ ಜೊತೆಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. "ನಮ್ಮ ಕಾಲದಲ್ಲೂ ಕಾಮರ್ಸ್ ಪರೀಕ್ಷೆಗಳಲ್ಲಿ ಇಷ್ಟೊಂದು ಮನರಂಜನೆ ಇದ್ದಿದ್ದರೆ, ನಾವು ಖಂಡಿತವಾಗಿಯೂ ಖುಷಿಯಿಂದ ಪರೀಕ್ಷೆ ಬರೆಯುತ್ತಿದ್ದೆವು" ಎಂದು ಹಲವರು ತಮಾಷೆ ಮಾಡಿದ್ದಾರೆ. "ವಿದ್ಯಾರ್ಥಿಗಳಿಗಿಂತ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಶಿಕ್ಷಕರೇ ಈ ಸಿನಿಮಾದ ದೊಡ್ಡ ಅಭಿಮಾನಿ ಇದ್ದಂತಿದೆ" ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಅಕೌಂಟ್ಸ್ ನಂತಹ ವಿಷಯಗಳು ವಿದ್ಯಾರ್ಥಿಗಳಿಗೆ ನೀರಸ ಎನಿಸುವುದುಂಟು. ಪಠ್ಯಪುಸ್ತಕಗಳೂ ಕೂಡ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಹೆಣಗಾಡುತ್ತವೆ. ಆದರೆ, ಶಿಕ್ಷಕರ ಈ ಒಂದು ಸಣ್ಣ ಪ್ರಯತ್ನ ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿಸಿರುವುದಂತೂ ಸುಳ್ಳಲ್ಲ. ಇನ್ನು, 'ಧುರಂಧರ್: ದಿ ರಿವೆಂಜ್' ಚಿತ್ರತಂಡಕ್ಕೆ ಇದು ಉಚಿತ ಪ್ರಚಾರವನ್ನೇ ತಂದುಕೊಟ್ಟಿದೆ. ಮೊದಲು ಬಾಕ್ಸ್ ಆಫೀಸ್, ಇದೀಗ ಪುಸ್ತಕಗಳಲ್ಲೂ ಧುರಂಧರ್ ಹವಾ ಮಾತ್ರ ಎಲ್ಲೆಡೆ ಜೋರಾಗಿಯೇ ಸಾಗಿದೆ.
-
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Viral Post: ವಿಮಾನದ ಸೀಟುಗಳ ತುಂಬಾ ಕಸದ ರಾಶಿ: ಪ್ರಯಾಣಿಕರ 'ಸಿವಿಕ್ ಸೆನ್ಸ್' ಪ್ರಶ್ನಿಸಿದ ಮಹಿಳೆ -
Kannada Vs Hindi: ಭಾಷಾ ಶಿಕ್ಷಣ–ಸಮಸ್ಯೆ ಇರುವುದು ಫೈನ್ ಟ್ಯೂನಿಂಗ್ನಲ್ಲಿ: ರಾಜಾರಾಂ ತಲ್ಲೂರು ಬರಹ -
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
SSLC ಪರೀಕ್ಷೆ ನಡೆಯುತ್ತಿರುವಾಗಲೇ ಅಂಕ 525ಕ್ಕೆ ಇಳಿಕೆ: ಸರ್ಕಾರದ ವಿರುದ್ಧ ಸುರೇಶ್ ಕುಮಾರ್ ವಾಗ್ದಾಳಿ -
KEA Recruitment: ವಾಯುವ್ಯ ಸಾರಿಗೆ ಸಂಸ್ಥೆ ನೇಮಕಾತಿ ಪರೀಕ್ಷೆಗಳ ದಿನಾಂಕ ಬದಲಾವಣೆ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು













Click it and Unblock the Notifications