Viral Video: ಆಟೋದಲ್ಲಿ ಬಾಲಕನ ಮೇಲೆ ಪಿಟ್‌ಬುಲ್ ದಾಳಿ: ಸಾಕುನಾಯಿ ಮಾಲೀಕನ ಕ್ರೂರ ನಗು ವೈರಲ್...!

ಸಾಕು ನಾಯಿ ಆಗಿರಲಿ, ಬೀದಿ ನಾಯಿ ಆಗಿರಲಿ ಎಲ್ಲರಿಗೂ ನಾಯಿ ಅಚ್ಚು ಮೆಚ್ಚು. ಜಾತಿ ನಾಯಿಗಳನ್ನು ಮಕ್ಕಳು ಮುದ್ದಿಸುವುದು, ಆಟವಾಡುವುದು ಹೆಚ್ಚು. ಇಂಥಹ ಘಟನೆಯೊಂದರಲ್ಲಿ ಸಾಕುನಾಯಿ 'ಪಿಟ್‌ಬುಲ್' 11 ವರ್ಷ ಬಾಲಕನ ಮೇಲೆ ದಾಳಿ ಮಾಡಿ ಕಚ್ಚಿದೆ. ನಾಯಿ ಹಿಡಿದುಕೊಂಡಿದ್ದ ಮಾಲೀಕರ ತಡೆಯದೇ ನಗುತ್ತ ಕೂತ ಅಮಾನವೀಯ ಘಟನೆ ನಡೆದಿದೆ. ಬಾಲಕನ ತೊಡೆ, ಕೈಗೆ, ಕೆನ್ನೆಗೆ ಕಚ್ಚಿದ ವಿಡಿಯೋ ವೈರಲ್ ಆಗಿದ್ದು, ಜನಾಕ್ರೋಶ ವ್ಯಕ್ತವಾಗಿದೆ.

ಆಟೋದೊಳಗೆ ನಾಯಿ ಬಾಲಕನನ್ನು ಕಚ್ಚುತ್ತಿದ್ದರೂ ಸಹಿತ ಬಿಡಿಸಿಕೊಳ್ಳದೇ, ನಾಯಿಯನ್ನು ಎಳೆದುಕೊಳ್ಳದೇ ನಗುತ್ತಾ ಕೂತ ಮಾಲೀಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜುಲೈ 17 ರಂದು ರಾತ್ರಿ 10:00 ಗಂಟೆಗೆ ಮುಂಬೈನಲ್ಲಿ ನಡೆದಿದೆ. ಈ ಅಪ್ರಾಪ್ತ ಬಾಲಕ ಹಾಗೂ ಆತನ ಸ್ನೇಹಿತರು ರಸ್ತೆ ಪಕ್ಕದ ಆಟೋದಲ್ಲಿ ಕೂತು ಆಟವಾಡುವಾಗ ಪಕ್ಕದಲ್ಲಿ ಪಿಟ್ ಬುಲ್ ನಾಯಿ ಜೊತೆ ತೆರಳುತ್ತಿದ್ದ ಮಾಲೀಕನನ್ನು ಮಾತನಾಡಿಸಿದ್ದಾರೆ. ನಾಯಿ ಜೊತೆಗೆ ಎತ್ತ ಹೋಗುತ್ತಿದ್ದೀರಿ ಎಂದು ಕೇಳಿದ್ದಾರೆ.

Video Viral of Dog Owner Laughing After Pitbull Pet Bites A Boy in Auto Goes viral

ಬಾಲಕ ಚೀರಾಡಿದರೂ ನಗುತ್ತಲೇ ಇದ್ದ ಆರೋಪಿ

ಕೂಡಲೇ ನಾಯಿಯನ್ನು ಚೂ ಬಿಟ್ಟ ಮಾಲೀಕ ಸನ್ನೆಗೆ ಬಾಲಕರತ್ತ ಬೃಹತ್ ನಾಯಿ ಬರುತ್ತಿದ್ದಂತೆ ಆಟೋದಲ್ಲಿದ್ದ ಬಾಲಕರು ಓಡಿ ಹೋಗಿದ್ದಾರೆ. ಆದರೆ ಈ 11 ವರ್ಷದ ಸಂತ್ರಸ್ತ ಬಾಲಕನಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಆಟೋದಲ್ಲೇ ಉಳಿದಿಕೊಂಡಿದ್ದಾನೆ. ಆಗ ನಾಯಿ ಮಾಲೀಕ ಸೋಹೈಲ್ ಖಾನ್ ನುಗತ್ತಲೇ ನಾಯಿಯನ್ನು ಬಾಲಕನ ಮೇಲೆ ಎರಗುವಂತೆ ಮಾಡಿದ್ದಾನೆ. ಬಾಲಕ ಭಯದಿಂದ ಚೀರಾಡಿದರೂ ನಾಯಿ ಹಿಡಿದಕೊಳ್ಳದೇ ವಿಕೃತಿ ಮೆರೆದಿದ್ದಾನೆ. ಇದನ್ನು ನೀವು ವಿಡಿಯೋದಲ್ಲಿ ನೋಡಬಹುದು.

ಈ ವೇಳೆ ಬಾಲಕ ಪ್ರತಿರೋಧ ಒಡ್ಡಲು, ಅಲ್ಲಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಅದಾಗಲೇ ಬಾಲಕನ ತೊಡೆಗೆ, ಕೆನ್ನೆಗೆ ನಾಯಿ ಕಚ್ಚಿದೆ. ಈ ಘಟನೆಯಿಂದ ತಾನು ತುಂಬಾ ಭಯಭೀತನಾಗಿದ್ದೆ. ಬಟ್ಟೆಯನ್ನೆಲ್ಲ ನಾಯಿ ಕಚ್ಚಿ ಹರಿದಿದೆ. ಮಾಲೀಕರು ನಾಯಿ ಹಿಡಿದುಕೊಳ್ಳಲಿಲ್ಲ. ಕೂಗಿದರು ಯಾರು ನನ್ನ ಸಹಾಯಕ್ಕೆ ಬರಲಿಲ್ಲ. ಆಟೋ ಇಳಿದು ಓಡಿದರೂ ಹಿಂದೆಯಿಂದ ಓಡಿಬಂದು ಕಚ್ಚಿತು ಎಂದು ನಾಯಿ ದಾಳಿ ಬಳಿಕ ಬಾಲಕ ಪೋಷಕರಲ್ಲಿ ಅಳಲು ತೋಡಿಕೊಂಡಿದ್ದಾನೆ.

ಬಾಲಕನ ತಂದೆಯಿಂದ ದೂರು: ಪೊಲೀಸರು ಹೇಳೋದೇನು

ಮುಂಬೈ ಪೊಲೀಸರ ಪ್ರಕಾರ, ಪಿಟ್‌ಬುಲ್ ನಾಯಿಯ ಮಾಲೀಕ ಸೊಹೈಲ್ ಖಾನ್ ವಸತಿ ಪ್ರದೇಶದಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾದಲ್ಲಿ ದುರದ್ದೇಶದಿಂದಲೇ ಆಟವಾಡುತ್ತಿದ್ದ ಅಪ್ರಾಪ್ತ ಬಾಲಕನ ಮೇಲೆ ನಾಯಿ ಬಿಟ್ಟಿದ್ದಾನೆ. ಇದಕ್ಕೆ ಯಾವುದೇ ಪ್ರಚೋಚನೆ ಇಲ್ಲ. ಇದು ಮಾಲೀಕನ ಮನಸ್ಥಿತಿ ತೋರಿಸುತ್ತದೆ. ನಾಯಿ ದಾಳಿಗೆ ಸಂತ್ರಸ್ತ ಬಾಲಕ ಕೆನ್ನೆ (ಗಲ್ಲ), ಕೈಗಳ ಮೇಲೆ ಕಚ್ಚಿ ಗಂಭೀರ ಗಾಯ ಮಾಡಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಈ ವೀಡಿಯೊ ನೋಡಿ ನಾಯಿ ದಾಳಿಯನ್ನು ಬಳಕೆದಾರರು ಖಂಡಿಸಿದ್ದಾರೆ. ಬಾಲಕನ ತಂದೆ ಮನ್ಖುರ್ಡ್ ಪೊಲೀಸ್ ಠಾಣೆಯಲ್ಲಿ ಐಪಿಸಿ (ಬಿಎನ್ಎಸ್) ಸೆಕ್ಷನ್ 291, 125, 125(ಎ) ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಬಿಎನ್ಎಸ್ ಸೆಕ್ಷನ್ 35(3) ಅಡಿಯಲ್ಲಿ ಆರೋಪಿಗಳಿಗೆ ನೋಟಿಸ್ ಕೊಡಲಾಗಿದೆ ಎಂದು ಪೊಲೀಸರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+