ಕೋಚ್‌ನಲ್ಲಿ ಕುಚ್ ಕುಚ್: ರೈಲು ಪ್ರಯಾಣಿಕರ ನಡುವೆ ಮೈಮರೆತ ಜೋಡಿ- ವಿಡಿಯೋ ವೈರಲ್
ದೆಹಲಿ ಮೇ 11: ಮೆಟ್ರೋ ಕೋಚ್‌ನ ನೆಲದ ಮೇಲೆ ಕುಳಿತು ಯುವ ಜೋಡಿಯೊಂದು ಪರಸ್ಪರ ಚುಂಬಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಇಡಯೋ ವೈರಲ್ ಆದ ಬಳಿಕ ದೆಹಲಿ ಮೆಟ್ರೋ ರೈಲು ನಿಗಮ ತನ್ನ ಪ್ರಯಾಣಿಕರಿಗೆ ಇಂತಹ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಮನವಿ ಮಾಡಿದೆ.
ಮೆಟ್ರೋ ಅಧಿಕಾರಿಗಳು ಇಂತಹ ಘಟನೆಗಳನ್ನು "ಸಮೀಪದ ಲಭ್ಯವಿರುವ ಮೆಟ್ರೋ ಸಿಬ್ಬಂದಿ/ಸಿಐಎಸ್‌ಎಫ್‌ಗೆ ತಕ್ಷಣ ತಿಳಿಸಲು ಪ್ರಯಾಣಿಕರಿಗೆ ವಿನಂತಿಸಿದ್ದಾರೆ, ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳಬಹುದು" ಎಂದು ಮನವಿ ಮಾಡಿದ್ದಾರೆ. ವೈರಲ್ ವಿಡಿಯೋಕ್ಕೆ ಇಂಟರ್ನೆಟ್ ಬಳಕೆದಾರರು ಕೋಪ ಮತ್ತು ಹಾಸ್ಯದಿಂದ ಪ್ರತಿಕ್ರಿಯಿಸಿದ್ದಾರೆ.

ವಿಡಿಯೊದಲ್ಲಿ ಹುಡುಗಿ ಮೆಟ್ರೋ ಕೋಚ್‌ನ ನೆಲದ ಮೇಲೆ ಕುಳಿತಿದ್ದ ಹುಡುಗನ ಮಡಿಲಲ್ಲಿ ಮಲಗಿರುವುದು ಕಂಡುಬರುತ್ತದೆ. ಕಳೆದ ಕೆಲವು ತಿಂಗಳುಗಳಿಂದ ದೆಹಲಿ ಮೆಟ್ರೋ ಕೋಚ್‌ಗಳಲ್ಲಿ ಇಂತಹ ಅನೇಕ ವಿಡಿಯೋಗಳು ವೈರಲ್ ಆಗಿವೆ.
ದಿನಾಂಕವಿಲ್ಲದ ಈ ವಿಡಿಯೊ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕೆರಳಿಸಿದೆ. ಜೊತೆಗೆ ಅಶ್ಲೀಲವಾಗಿ ವರ್ತಿಸಿದ ಜೋಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ DMRC ಅನ್ನು ಒತ್ತಾಯಿಸಿದ್ದಾರೆ. ಆದರೆ ಕೆಲವರು ಈ ಕೃತ್ಯವನ್ನು ಚಿತ್ರೀಕರಿಸಿದ್ದನ್ನು ಪ್ರಶ್ನಿಸಿದ್ದಾರೆ.
Shameful #VideoViral from Delhi Metro
— youth challenges (@youthchallenge9) May 10, 2023
Now it has become difficult to travel with family on #DelhiMetro
Why don't you change the name of Delhi Metro to P0rnHub??? " #KeralaStorySuperhit God Bless Him Bangladesh Defamation "The GOAT" #PakistanCivilWar #PakistanUnderSiege pic.twitter.com/GQNkDwTnCB
ಡಿಎಂಆರ್‌ಸಿ ತನ್ನ ಹೇಳಿಕೆಯಲ್ಲಿ, "ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಜವಾಬ್ದಾರಿಯುತವಾಗಿ ವರ್ತಿಸಬೇಕು. ಸಮಾಜದಲ್ಲಿ ಸ್ವೀಕಾರಾರ್ಹವಾಗಿರುವ ಎಲ್ಲಾ ಸಾಮಾಜಿಕ ಶಿಷ್ಟಾಚಾರ ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಎಂದು ಡಿಎಂಆರ್‌ಸಿ ನಿರೀಕ್ಷಿಸುತ್ತದೆ" ಎಂದು ಹೇಳಿದೆ.

"ಪ್ರಯಾಣಿಕರು ಯಾವುದೇ ಅಸಭ್ಯ/ಅಶ್ಲೀಲ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಾರದು. ಅದು ಇತರ ಸಹ ಪ್ರಯಾಣಿಕರ ಸಂವೇದನೆಯನ್ನು ಕೆರಳಿಸಬಹುದು. DMRC ಇಂತಹ ಕಾರ್ಯಗಳನ್ನು ಸೆಕ್ಷನ್ 59 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವೆಂದು ಪಟ್ಟಿಮಾಡುತ್ತದೆ" ಎಂದು ಅದು ಹೇಳಿದೆ.
ದೆಹಲಿ ಮೆಟ್ರೋದಂತಹ ಸಾಮೂಹಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣಿಸುವಾಗ ಇಂತಹ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಮತ್ತು ಸಾಮಾಜಿಕ ಶಿಷ್ಟಾಚಾರವನ್ನು ಕಾಪಾಡಿಕೊಳ್ಳಲು DMRC ಪ್ರಯಾಣಿಕರಿಗೆ ಮನವಿ ಮಾಡಿದೆ.
ಮೆಟ್ರೋ ವೈರಲ್ ವಿಡಿಯೋಗಳ ಸುದ್ದಿ
ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಬಿಕಿನಿ ಮತ್ತು ಮೈಕ್ರೋ ಮಿನಿ ಸ್ಕರ್ಟ್ ಧರಿಸಿದ್ದಕ್ಕಾಗಿ ವೈರಲ್ ಆಗಿರುವ 'ದೆಹಲಿ ಮೆಟ್ರೋ ಗರ್ಲ್' ಕುರಿತು ಇಂಟರ್ನೆಟ್ನಲ್ಲಿ ಚರ್ಚೆ ನಡೆಯುತ್ತಿದೆ. ವರದಿಯ ಪ್ರಕಾರ 19 ವರ್ಷ ವಯಸ್ಸಿನ ಹುಡುಗಿ ತಾನು ಧರಿಸಿದ ಉಡುಪಿನಿಂದಾಗಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಳು. ಸಾರ್ವಜನಿಕರನ್ನು ಕೆರಳಿದ್ದಳು. ಅಂದಿನಿಂದ ಅವಳ ಫ್ಯಾಶನ್ ಸೆನ್ಸ್‌ಗಾಗಿ ವ್ಯಾಪಕ ಖಂಡನೆ ಎದುರಿಸುತ್ತಿದ್ದಾಳೆ.
ಹೀಗೆ ಮೆಟ್ರೋದಲ್ಲಿ ಅರೆ ಬಟ್ಟೆ ತೊಟ್ಟ ಹುಡುಗಿಯ ಹೆಸರು ರಿದಮ್ ಚನಾನಾ. ಈಕೆ ಪಂಜಾಬ್ ನಿವಾಸಿ. ದೆಹಲಿ ಮೆಟ್ರೋ ರೈಡ್ ಮಾಡುವಾಗ ಆಕೆಯ ಹಾಟ್ ಬಟ್ಟೆಗಳನ್ನು ಧರಿಸಿರುವ ಹಲವಾರು ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು. ಇದಾದ ಬಳಿಕ ವಿಭಿನ್ನವಾದ ಮೆಟ್ರೋ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿತ್ತು. ಆದರೆ ಅದು ಭಾರತದಲ್ಲಿ ಸೆರೆಹಿಡಿದ ವಿಡಿಯೋವಲ್ಲ. ವಿಡಿಯೊ ನ್ಯೂಯಾರ್ಕ್ ನಗರದ ಮೆಟ್ರೋದಲ್ಲಿ ಸೆರೆಹಿಡಿಯಲಾಗಿತ್ತು.
ಈ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ @princezee ಎಂಬುವವರು ಹಂಚಿಕೊಂಡಿದ್ದರು. ಇದು 1.4 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿತ್ತು. ಈ ವೈರಲ್ ಆಗಿರುವ ವಿಡಿಯೋದಲ್ಲಿ, ನ್ಯೂಯಾರ್ಕ್ ಸಿಟಿ ಮೆಟ್ರೋ ರೈಲಿನಲ್ಲಿ ವ್ಯಕ್ತಿಯೊಬ್ಬರು ಸ್ನಾನ ಮಾಡುತ್ತಿರುವುದನ್ನು ಕಾಣಬಹುದು. ಮೆಟ್ರೋದಲ್ಲಿ ಸ್ನಾನ ಮಾಡಿರುವುದು ನೋಡುಗರಿಗೆ ಶಾಕ್ ಕೊಟ್ಟಿತ್ತು.












Click it and Unblock the Notifications