ಕಪಿಲ್ ಶರ್ಮಾ ಬಿಟ್ಟ ತಕ್ಷಣ ಸುನಿಲ್ ಗ್ರೋವರ್ ಸ್ಥಿತಿ ಇದು..!
ಖ್ಯಾತ ಹಾಸ್ಯನಟ ಮತ್ತು ನಟ ಸುನಿಲ್ ಗ್ರೋವರ್ ಇತ್ತೀಚೆಗೆ ಅವರ ವಿಡಿಯೋವೊಂದರಿಂದ ಜನರಲ್ಲಿ ಚರ್ಚೆಯ ವಿಷಯವಾಗಿದ್ದಾರೆ. ವಿಡಿಯೋ ನೋಡಿದ ಜನರು ಅವರ ಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಸುನಿಲ್ ಗ್ರೋವರ್ ಅವರ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ಸುನಿಲ್ ಗ್ರೋವರ್ ತಮ್ಮ ಹಾಸ್ಯ ಮತ್ತು ನಟನೆಯ ಮೂಲಕ ಅನೇಕ ವಿಷಯಗಳಲ್ಲಿ ಪ್ರತಿಭೆಯನ್ನು ಹೊಂದಿದ್ದಾರೆ. ತಮ್ಮ ವಿಚಿತ್ರ ಪಾತ್ರಗಳಿಂದ ಸುಲಭವಾಗಿ ಜನರ ಮನ ಗೆಲ್ಲುತ್ತಾರೆ. ಆದರೆ ಈ ಬಾರಿ ಅವರ ವಿಡಿಯೋ ನೋಡಿದ ಜನ ಸಾಕಷ್ಟು ಅಚ್ಚರಿಗೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಸುನಿಲ್ ಗ್ರೋವರ್ ರಸ್ತೆಬದಿಯಲ್ಲಿ ಶೇಂಗಾ ಮಾರುತ್ತಿದ್ದ ದೃಶ್ಯ ಕಂಡುಬಂದಿದೆ. 'ದಿ ಕಪಿಲ್ ಶರ್ಮಾ ಶೋ' ನಿಂದ ಜನಪ್ರಿಯತೆ ಗಳಿಸಿದ ಸುನಿಲ್ ಗ್ರೋವರ್ ಅನೇಕ ಕಾರ್ಯಕ್ರಮಗಳನ್ನು ಏಕಾಂಗಿಯಾಗಿ ಮಾಡಿದ್ದಾರೆ. ಆದರೆ ಅವರಿಗೆ ವೈಯಕ್ತಿಕ ಕಾರ್ಯಕ್ರಮಗಳಿಂದ ಹೆಚ್ಚಿನ ಯಶಸ್ಸು ಸಿಗಲಿಲ್ಲ.

ಆದರೆ ಕಪಿಲ್ ಶರ್ಮಾ ಅವರ ಕಾಮಿಡಿ ಶೋನಿಂದ ಅವರು ಬಹಳ ಪ್ರಸಿದ್ಧರಾದರು. ಜನರು ಅವರ ಹಾಸ್ಯಪ್ರಜ್ಞೆಯನ್ನು ಮೆಚ್ಚಿದರು. ಅಂದಹಾಗೆ ಸುನಿಲ್ ಗ್ರೋವರ್ ಅವರು ರಸ್ತೆಬದಿಯಲ್ಲಿ ಕಡಲೆಕಾಯಿಯನ್ನು ಮಾರಾಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅವರ ಈ ವಿಡಿಯೋ ನೋಡಿ ಅಭಿಮಾನಿಗಳು ಸಾಕಷ್ಟು ಅಚ್ಚರಿಗೊಂಡಿದ್ದಾರೆ.
ಸುನಿಲ್ ಗ್ರೋವರ್ ಅವರ ವಿಡಿಯೋ ವೈರಲ್
ಸುನಿಲ್ ಗ್ರೋವರ್ ಅವರು ಕಾಮಿಡಿಯಲ್ಲಿ ಮಾತ್ರವಲ್ಲದೆ ಚಲನಚಿತ್ರಗಳಲ್ಲಿಯೂ ಬಹಳ ಪ್ರಸಿದ್ಧವಾಗಿದ್ದಾರೆ. ಅವರು ತಮ್ಮ ಪ್ರತಿಭೆಯ ಆಧಾರದ ಮೇಲೆ ಬಾಲಿವುಡ್‌ನಲ್ಲಿ ವಿಭಿನ್ನ ಸ್ಥಾನವನ್ನು ಗಳಿಸಿದ್ದಾರೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಅವರ ಚಿತ್ರಗಳು ಮತ್ತು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.
ಇತ್ತೀಚೆಗೆ ಸುನಿಲ್ ಗ್ರೋವರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ರಸ್ತೆಬದಿಯಲ್ಲಿ ಕಡಲೆಕಾಯಿ ಮಾರಾಟ ಮಾಡುತ್ತಿರುವುದನ್ನು ಕಂಡು ಬಂದಿದೆ. ಇದನ್ನು ಕಂಡು ಅಭಿಮಾನಿಗಳು ಸುನಿಲ್‌ಗೆ ಯಾಕಿಂತ ಪರಿಸ್ಥಿತಿ ಬಂತು ಅಂತ ಮನದಲ್ಲಿ ಪ್ರಶ್ನೆ ಮಾಡಿದ್ದಾರೆ.

ಹಾಸ್ಯ ಕಲಾವಿದರು ಕಡಲೆಕಾಯಿ ಹುರಿಯುತ್ತಿರುವ ದೃಶ್ಯ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸುನಿಲ್ ಗ್ರೋವರ್ ರಸ್ತೆ ಬದಿಯ ಕಡಲೆ ಅಂಗಡಿಗೆ ಬರುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಲ್ಲಿಗೆ ತಲುಪಿದ ನಂತರ ಅಂಗಡಿಯಲ್ಲಿ ಇಟ್ಟಿದ್ದ ಸಾಮಾನುಗಳನ್ನೆಲ್ಲ ನೋಡಿ ಕುಳಿತು ಕಡಲೆಕಾಯಿ ಹುರಿಯತೊಡಗುತ್ತಾರೆ. ವಿಡಿಯೋ ನೋಡಿದ್ರೆ ಸುನಿಲ್ ಗ್ರೋವರ್ ರಸ್ತೆಬದಿ ಕುಳಿತು ಕಡಲೆಕಾಯಿ ಮಾರುತ್ತಿದ್ದಾರಂತೆ ಕಾಣುತ್ತದೆ. ಅವರು ಪದೇ ಪದೇ ಬಾಣಲೆಯಿಂದ ಕಡಲೆಕಾಯಿಯನ್ನು ಹೊರತೆಗೆಯುತ್ತಾ ಹುರಿಯುತ್ತಾರೆ.
ಜನರ ಕಾಮೆಂಟ್ ನೋಡಿ
ಈ ವಿಡಿಯೊವನ್ನು ಹಂಚಿಕೊಳ್ಳುವಾಗ ಹಾಸ್ಯನಟ ಸುನಿಲ್ ಗ್ರೋವರ್ 'ಖಾವೋ ಖಾವೋ ಖಾವೋ' ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ವಿಡಿಯೊಗೆ ಜನರು ಹೆಚ್ಚು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೊದ ಕುರಿತು ಕಾಮೆಂಟ್ ಮಾಡಿದ ವ್ಯಕ್ತಿಯೊಬ್ಬ 'ಸಹೋದರ ಕಪಿಲ್ ಶರ್ಮಾ ಅವರ ಶೋನಿಂದ ಹೊರಬಂದ ನಂತರ ನಿಮ್ಮ ಸ್ಥಿತಿ ಹೀಗಾಯಿತಾ?' ಎಂದು ಬರೆದಿದ್ದಾರೆ. ಕೆಲವು ದಿನಗಳ ಹಿಂದೆ, ಸುನಿಲ್ ಗ್ರೋವರ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ತಮಾಷೆಯ ವಿಡಿಯೊವನ್ನು ಹಂಚಿಕೊಂಡಿದ್ದರು. ಆದರೆ ಇದು ಹಾಸ್ಯವಾಗಿ ಹಂಚಿಕೊಮಡ ವಿಡಿಯೋವಾಗಿದೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications