BREAKING: ವಂದೇ ಮೆಟ್ರೋಗೆ ನಮೋ ಭಾರತ್ ರ‍್ಯಾಪಿಡ್ ರೈಲ್ ಎಂದು ಮರುನಾಮಕರಣ, ಕಾರಣ ಏನು?
Namo Metro: ವಂದೇ ಮೆಟ್ರೋಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೆಪ್ಟೆಂಬರ್ 16) ಗುಜರಾತ್‌ನಲ್ಲಿ ಚಾಲನೆ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಇದರ ಬೆನ್ನಲ್ಲೆ ಇದೀಗ ವಂದೇ ಮೆಟ್ರೋಗೆ ನಮೋ ಭಾರತ್ ರಾಪಿಡ್ ರೈಲ್ ಎಂದು ಮರುನಾಮಕರಣ ಮಾಡಲಾಗಿದೆ ಎಂದು ತಿಳಿದುವಂದಿದೆ. ಕಾರಣ ಏನೆಂದು ಇಲ್ಲಿ ತಿಳಿಯಿರಿ.
ಬಹುನಿರೀಕ್ಷಿತ ವಂದೇ ಮೆಟ್ರೋವನ್ನು ಭಾರತೀಯ ರೈಲ್ವೆ ಅಧಿಕೃತವಾಗಿ "ನಮೋ ಭಾರತ್ ರಾಪಿಡ್ ರೈಲ್ ಎಂದು ಮರುನಾಮಕರಣ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದ ಮುನ್ನಾ ದಿನವಾದ ಇಂದು (ಸೆಪ್ಟೆಂಬರ್ 16) ಗುಜರಾತ್‌ನಲ್ಲಿ ದೇಶದ ಮೊಟ್ಟ ಮೊದಲ ನಮೋ ಭಾರತ್ ರ‍್ಯಾಪಿಡ್ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ.

ನಮೋ ಭಾರತ್ ರ‍್ಯಾಪಿಡ್ ರೈಲು ಗುಜರಾತ್‌ನ ಕಚ್ ಜಿಲ್ಲೆಯಲ್ಲಿರುವ ಭುಜ್ ಅನ್ನು ರಾಜ್ಯದ ಅತಿದೊಡ್ಡ ನಗರಗಳಲ್ಲಿ ಒಂದಾದ ಅಹಮದಾಬಾದ್‌ನೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ಕೇವಲ 6 ಗಂಟೆಗಳಲ್ಲಿ 360 ಕಿಲೋ ಮೀಟರ್ ದೂರವನ್ನು ಕ್ರಮಿಸುತ್ತದೆ.
ಇದು ಗಂಟೆಗೆ ಗರಿಷ್ಠ 110 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಪ್ರಮುಖ ನಿಲ್ದಾಣಗಳಾದ ಅಂಜಾರ್, ಗಾಂಧಿಧಾಮ್, ಭಚೌ, ಸಮಖಿಯಾಲಿ, ಹಲ್ವಾಡ್, ಧ್ರಂಗಾಧ್ರ, ವಿರಾಮಗಮ್, ಚಂದ್ಲೋಡಿಯಾ, ಸಬರಮತಿ ಮತ್ತು ಅಂತಿಮವಾಗಿ ಅಹಮದಾಬಾದ್‌ನ ಕಲುಪುರ್ ಸೇರಿದಂತೆ ಅನೇಕ ನಿಲುಗಡೆಯಾಗಲಿದೆ ಎಂದು ತಿಳಿದುಬಂದಿದೆ.












Click it and Unblock the Notifications