Vande Metro Update: ಏಪ್ರಿಲ್‌ನಲ್ಲಿ ಮೊದಲ 'ಮೆಟ್ರೋ ಕೋಚ್' ಮಾದರಿ ಪರಿಚಯ: ವಿಶೇಷತೆಗಳೇನು?
ಬೆಂಗಳೂರು, ಫೆಬ್ರವರಿ 12: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ರೀತಿಯಲ್ಲಿ (Vande bharat express) ವಿನ್ಯಾಸಗೊಳಿಸಿರುವ ಮತ್ತು ಸ್ಥಳೀಯ ಸೆಮೀ ಹೈ ಸ್ಪೀಡ್ ರೈಲು ಆಗಿರುವ 'ವಂದೇ ಮೆಟ್ರೋ' (Vande Metro) ನ ಮೊದಲ ಮೆಟ್ರೋ ಕೋಚ್ ಮಾದರಿ ಮುಂದಿನ ಏಪ್ರೀಲ್ ನಲ್ಲಿ ಉತ್ಪಾದನೆಗೊಳ್ಳಲಿವೆ.
ಹೌದು, ಪಂಜಾಬ್‌ನ ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿ (RCF) ಈ ವರ್ಷದ ಏಪ್ರಿಲ್‌ನಲ್ಲಿ ಇಂಟರ್‌ಸಿಟಿ ಪ್ರಯಾಣಕ್ಕಾಗಿ 'ವಂದೇ ಮೆಟ್ರೋ ಕೋಚ್'ನ ಮೊದಲ ಮಾದರಿಯನ್ನು ಹೊರತರುವ ಗುರಿ ಹೊಂದಿದೆ ಎಂದು ಕಂಪನಿಯ ಎಂದು ಕಂಪನಿಯ ಜನರಲ್ ಮ್ಯಾನೇಜರ್ ಎಸ್.ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ಇಂಟರ್‌ಸಿಟಿ ಪ್ರಯಾಣಿಕರಿಗಾಗಿ ವಂದೇ ಮೆಟ್ರೋ
ಈ ವಂದೇ ಮೆಟ್ರೋವು ಭಾರತದ ಮೊದಲ ಸ್ಥಳೀಯ ಸೆಮಿ-ಹೈ-ಸ್ಪೀಡ್ ರೈಲು ಆಗಿದೆ. ಇದನ್ನು ವಂದೇ ಭಾರತ್‌ನ ಪರಿಕಲ್ಪನೆಯ ಮೇಲೆ ವಿನ್ಯಾಸಗೊಳಿಸಲಾಗಿದೆ. ಇದು 250 ಕಿ.ಮೀ. ದೂರದ ಮತ್ತೊಂದು ನಗರವನ್ನು ಸಂಪರ್ಕಿಸುತ್ತದೆ. ಇದು ಇಂಟರ್‌ಸಿಟಿ ಪ್ರಯಾಣಿಕರಿಗೆ ಪೂರಕ ಮೆಟ್ರೋ ಸೇವೆ ಆಗಿದೆ ಎಂದು ಪಿಟಿಐ ವರದಿ ಮಾಡಿದೆ.
ಈ ಹೊಸ ಮಾದರಿಯ ಒಟ್ಟು 16 'ವಂದೇ ಮೆಟ್ರೋ' ಕೋಚ್ ಗಳು ಪ್ರಸಕ್ತ 2024-25ರ ಆರ್ಥಿಕ ವರ್ಷದ ನಂತರ ಸಿದ್ಧವಾಗುವ ಸಾಧ್ಯತೆ ಇದೆ. ಈ ಇಷ್ಟು ವಂದೇ ಮೆಟ್ರೋ ಕೋಚ್‌ಗಳು ಹವಾನಿಯಂತ್ರಿತ ವ್ಯವಸ್ಥೆ ಹೊಂದಿರುತ್ತವೆ. ಪ್ರತಿ ಗಂಟೆಗೆ ಗರಿಷ್ಠ 130 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿವೆ ಎಂದು ಅವರು ತಿಳಿಸಿದರು.

ನಗರಗಳ ಮಧ್ಯೆ ಸಂಚಾರಕ್ಕೆ ಟ್ರಾಫಿಕ್ ಅನುಕೂಲಕ್ಕೆ ನಿರ್ಮಿಸಿರುವ ಈ ವಂದೇ ಮೆಟ್ರೋ ರೈಲು ಮುಂದಿ ಏಪ್ರಿಲ್ ವೇಳೆಗೆ ಮೊದಲ ಮಾದರಿಯನ್ನು ಸಿದ್ಧಪಡಿಸುವ ಗುರಿ ಇಟ್ಟುಕೊಂಡಿದೆ. ಕೆಲವು ಪ್ರಯೋಗಗಳ ಬಳಿಕ ಉತ್ಪಾದನೆ ಆರಂಭವಾಗಲಿದೆ.
ವಂದೇ ಮೆಟ್ರೋ ಕೋಚ್‌ಗಳ ಸಾಮರ್ಥ್ಯ, ವಿಶೇಷತೆ?
ಪ್ರಯಾಣಿಕರಿಗೆ ಉತ್ತಮ ಅನುಭವ ನೀಡಲು ವಂದೇ ಮೆಟ್ರೋ ರೈಲುಗಳು ಸಿದ್ಧಗೊಳ್ಳಲಿವೆ. ಪ್ರತಿ ಕೋಚ್ 280 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿರಲಿದೆ. ಇಂದು ಬೋಗಿಯಲ್ಲಿ ಒಟ್ಟು 100 ಆಸನ ಸಾಮರ್ಥ್ಯ ಹೊಂದಿದೆ. ಆಸನ ಭರ್ತಿಯಾದರೂ ಸಹಿತ 180 ಮಂದಿ ನಿಂತು ಪ್ರಯಾಣಿಸಬಹುದಾಗಿದೆ.
3x3 ಬೆಂಚ್ ಮಾದರಿಯ ಆಸನ ವ್ಯವಸ್ಥೆಯು ಪ್ರಯಾಣಿಕರಿಗೆ ಆರಾಮದಾಯಕ ಮಧ್ಯಮ ದೂರದ ಪ್ರಯಾಣವನ್ನು ಒದಗಿಸಲಿದೆ. ತುರ್ತು ಸಂದರ್ಭದಲ್ಲಿ ರೈಲು ಚಾಲಕನೊಂದಿಗೆ ಸಂವಹನ ನಡೆಸಲು ವಂದೇ ಮೆಟ್ರೋ ಕೋಚ್‌ಗಳಲ್ಲಿ ಪ್ರಯಾಣಿಕರ ಟಾಕ್‌ಬ್ಯಾಕ್ ವ್ಯವಸ್ಥೆ ಅಳವಡಿಸಲಾಗಿದೆ. ಪ್ರತಿ ಕೋಚ್‌ನಲ್ಲಿ ಬೆಂಕಿ ಮತ್ತು ಹೊಗೆ ಪತ್ತೆಗಾಗಿ 14 ಸೆನ್ಸಾರ್‌ಗಳನ್ನು ಅಳವಡಿಸಲಾಗಿದೆ ಎಂದು ಕೋಚ್ ಕುರಿತು ಶ್ರಿನಿವಾಸ್ ವಿವರಿಸಿದರು.
ಶೌಚಾಲಯದಲ್ಲಿ ವ್ಹೀಲ್ ಚೇರ್ ಪ್ರವೇಶಿಸಬಹುದು
ವಿಶೇಷವೆದರೆ ಈ ವಂದೇ ಮೆಟ್ರೋ ಕೋಚ್ ಗಳಲ್ಲಿ ವ್ಹೀಲ್ ಚೇರ್ ಪ್ರವೇಶಿಸಲು ಸಾಧ್ಯವಾಗುವಂತಹ ಶೌಚಾಲಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೆಟ್ರೋದಲ್ಲಿ ಕವಚ ವ್ಯವಸ್ಥೆ ಅಳವಡಿಸಲಾಗಿದೆ. ಘರ್ಷಣೆಯನ್ನು ತಡೆಯಲು ಇದು ಪ್ರಮುಖ ಕ್ರಮವಾಗಿದೆ ಎಂದರು.
ವಿಶಾಲವಾಗಿ ತೆರೆದುಕೊಳ್ಳುವ ಹಾಪರ್-ಮಾದರಿಯ ಕಿಟಕಿಗಳು ಮತ್ತು ವಿಶಾಲವಾದ ಬಾಗಿಲುಗಳನ್ನು ಒಳಗೊಂಡಿರುವ ವಿಶಾಲವಾದ ಪ್ರವೇಶದ್ವಾರಗಳು ಕೋಚ್‌ನಲ್ಲಿವೆ. ಪ್ರಯಾಣಿಕರ ಸೌಕರ್ಯಕ್ಕಾಗಿ, ಪ್ರವೇಶದ್ವಾರದಲ್ಲಿ ಸ್ವಯಂಚಾಲಿತ ಪ್ಲಗ್ ಬಾಗಿಲುಗಳು ಮತ್ತು ಕಂಪಾರ್ಟ್ಮೆಂಟ್ ಪ್ರದೇಶದಲ್ಲಿ ಟಚ್-ಫ್ರೀ ಬಾಗಿಲುಗಳನ್ನು ಅಳವಡಿಸಲಿದ್ದೇವೆ.
24 ವಿಶೇಷ ರಾಜಧಾನಿ ಸ್ಲೀಪರ್ ಕೋಚ್
ಉಧಂಪುರ-ಶ್ರೀನಗರ-? ಬಾರಾಮುಲ್ಲಾ ವಿಭಾಗದಲ್ಲಿ ದೂರದ ರೈಲು ಓಡಿಸಲು ಆರ್‌ಸಿಎಫ್ ಕಳೆದ ವರ್ಷ ಡಿಸೆಂಬರ್‌ನಲ್ಲಿ 24 ವಿಶೇಷ ರಾಜಧಾನಿ ಸ್ಲೀಪರ್ ಕೋಚ್‌ಗಳನ್ನು ಹೊರತಂದಿದೆ ಎಂದು ಹೇಳಿದರು.
24 ಕೋಚ್‌ಗಳ ರೇಕ್ ಅನ್ನು ಮುಂದಿನ ವರ್ಷದ ಮಾರ್ಚ್‌ನಲ್ಲಿ ಹೊರತರಲಾಗುವುದು. ತದನಂತರ ಎರಡು ರೇಕ್‌ಗಳು ಸಿದ್ಧವಾಗಲಿವೆ. ಪಾರಂಪರಿಕ ಕಲ್ಕಾ-ಶಿಮ್ಲಾ ಮಾರ್ಗದ ವಿಸ್ಟಾಡೋಮ್ ಕೋಚ್‌ಗಳಲ್ಲಿ, ಪ್ರಯೋಗಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ ಮತ್ತು ರೈಲ್ವೆ ಸುರಕ್ಷತಾ ಆಯುಕ್ತರಿಂದ ಅನುಮತಿ ಪಡೆದ ನಂತರ ಈ ಬೋಗಿಗಳು ಈ ನ್ಯಾರೋ ಗೇಜ್ ವಿಭಾಗದಲ್ಲಿ ಶೀಘ್ರದಲ್ಲೇ ಚಲಿಸಲಿವೆ ಎಂದು ಜನರಲ್ ಮ್ಯಾನೇಜರ್ ಹೇಳಿದ್ದಾರೆ.
ಸುರಕ್ಷತೆಯ ಕ್ಲಿಯರೆನ್ಸ್ ನಂತರ ಮುಂದಿನ ಹಣಕಾಸು ವರ್ಷದಲ್ಲಿ ಪಂಜಾಬ್‌ನಲ್ಲಿ 30 ವಿಸ್ಟಾಡೋಮ್ ಕೋಚ್‌ಗಳನ್ನು ಇದೇ ಆರ್‌ಸಿಎಫ್ ಕಂಪನಿ ತಯಾರಿಸಲಿದೆ.ಆರ್‌ಸಿಎಫ್ ಭಾರತೀಯ ರೈಲ್ವೆಯ ಕೋಚ್ ಉತ್ಪಾದನಾ ಘಟಕವಾಗಿದೆ. ಇದು 1988 ರಲ್ಲಿ ಪ್ರಾರಂಭವಾದಾದ್ದು, ಈವರೆಗೆ 43,000 ಕೋಚ್‌ಗಳನ್ನು ತಯಾರಿಸಿ ರೈಲ್ವೆ ಇಲಾಖೆಗೆ ಹಸ್ತಾಂತರಿಸಿದೆ.
ಈ ವಂದೇ ಮೆಟ್ರೋ ರೈಲುಗಳಿಗೂ ಸಹ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ರೀತಿಯಲ್ಲಿ ಜನರಿಂದ ಭರ್ಜರಿ ಸ್ಪಂದನೆ ವ್ಯಕ್ತವಾಗುವ ನಿರೀಕ್ಷೆಗಳು ಇವೆ












Click it and Unblock the Notifications