Vande Bharat Sleeper Train: ಚೆನ್ನೈನಿಂದ ಲೋಡ್ ಟೆಸ್ಟ್‌ಗೆ ಹೊರಟ ವಂದೇ ಭಾರತ್ ಸ್ಲೀಪರ್ ಟ್ರೈನ್
ನವದೆಹಲಿ, ಡಿಸೆಂಬರ್ 18: ಭಾರತೀಯ ರೈಲು ಸಾರಿಗೆಯಲ್ಲಿ ಪ್ರಮುಖ ಬದಲಾವಣೆ ತಂದ ವಂದೇ ಭಾರತ್ ರೈಲಿನ ಮತ್ತೊಂದು ಸ್ಲೀಪರ್ ಮಾದರಿಯ ರೈಲು ಹೊಸ ವರ್ಷಕ್ಕೆ ಪರಿಯಚಗೊಳ್ಳಲಿದೆ. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ತಯಾರಿಸಲ್ಪಟ್ಟ ವಂದೇ ಭಾರತ್ ಸ್ಲೀಪರ್ ರೈಲು ಲೋಡ್ ಮಾಡಲಾಗಿದ್ದು, ಸಿಮ್ಯುಲೇಷನ್ ಪ್ರಯೋಗಕ್ಕೆ ಕಳುಹಿಸಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅಧಿಕೃತ ಮಾಹಿತಿ ನೀಡಿದ್ದಾರೆ.
ಭಾರತದ ರೈಲ್ವೆಯು ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಸಹಕಾರದಲ್ಲಿ ಬೆಂಗಳೂರಿನ ಬಿಇಎಂಎಲ್ ಕಂಪನಿ ತಯಾರಿಸಿದ ವಂದೇ ಭಾರತ್ ಸ್ಲೀಪರ್ ರೈಲು ಇದೇ ಜನವರಿಗೆ ತಿಂಗಳಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸಬೇಕಿತ್ತು. ಆದರೆ ವಿವಿಧ ತಪಾಸಣೆ ನಡೆಸಲಾಗುತ್ತದೆ. ಇದು ಸೇರಿ ಒಂದೆರಡು ಕಾರಣಗಳಿಂದ ತಡವಾಗುತ್ತಿದೆ.

ಈಗಾಗಲೇ ಇಲಾಕೆ ಹಾಗೂ ಐಸಿಎಫ್, ಬಿಇಎಂಎಲ್ ಕಳೆದ ಎರಡು ತಿಂಗಳಿನಿಂದ ಚೆನ್ನೈನಲ್ಲಿ ಗುಣಮಟ್ಟ ಹಾಗೂ ಸುರಕ್ಷತೆ ತಪಾಸಣೆ ನಡೆಯುತ್ತಿದೆ. ಬುಧವಾರ ಮತ್ತೊಂದು ಹಂತದ ಪರೀಕ್ಷೆಗೆ ರೈಲು ಕಳುಹಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.
ವಂದೇ ಭಾರತ್ ಸ್ಲೀಪರ್ ರೈಲು ಪರೀಕ್ಷೆ ಎಲ್ಲಿ ನಡೆಯಲಿದೆ
ರೈಲ್ವೆ ಇಲಾಖೆ ಮೂಲಗಳ ಪ್ರಕಾರ, ಬಹುನಿರೀಕ್ಷೆಯ ವಂದೇ ಭಾರತ್ ಸ್ಲೀಪರ್ ರೈಲು ವಾಣಿಜ್ಯ ಕಾರ್ಯಾಚರಣೆಗಾಗಿ ಟ್ರ್ಯಾಕ್‌ಗೆ ಇಳಿಯುವುದು ಇನ್ನು ಹಲವು ವಾರಗಳು ಹಿಡಿಯಬಹುದು. ಬೇಗ ಶುರು ಮಾಡುವ ಸಂಬಂಧವೇ ವಿವಿಧ ತಪಾಸಣೆ, ಸಿಮ್ಯುಲೇಷನ್ ಪ್ರಯೋಗ ಮಾಡಲಾಗುತತಿದೆ. ಬುಧವಾರ ಸ್ಲೀಪರ್ ರೈಲು ಚೆನ್ನೈ ಫ್ಯಾಕ್ಟರಿಯಿಂದ ಹೊರಟಿದ್ದು, ಮಧ್ಯಪ್ರದೇಶದ ಖಜುರಾಹೊದಲ್ಲಿ ಪ್ರಯೋಗಕ್ಕೆ ಒಳಗಾಗಲಿದೆ.
ಮೂಲಗಳ ಪ್ರಕಾರ, ಈ ವಂದೇ ಭಾರತ್ ರೈಲು ಲಕ್ನೋದಲ್ಲಿನ ಸಂಶೋಧನಾ ವಿನ್ಯಾಸಗಳು ಹಾಗೂ ಗುಣಮಟ್ಟ ಸಂಸ್ಥೆ (RDSO) ಹೊಸ ರೈಲಿಗೆ ಪ್ರಾಯೋಗಿಕ ಸಂಚಾರ ಆರಂಭಿಸುತ್ತದೆ. ಪ್ರಾಯೋಗಿಕ ಸಂಚಾರಕ್ಕು ಮೊದಲು ವಿವಿಧ ಪ್ರಯೋಗ ನಡೆಯಲಿದೆ. ಈ ವೇಳೆ ರೈಲು ಪ್ರತಿ ಗಂಟೆಗೆ 130 ಕಿಲೋ ಮೀಟರ್ ವೇಗದಲ್ಲಿ ಓಡಲಿದೆ. ಮತ್ತೊಂದು ಸುತ್ತಿನಲ್ಲಿ 180 ಕಿಮೀ ವೇಗದಲ್ಲಿ ಪ್ರಾಯೋಗಿಕ ಸಂಚಾರ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏನಿದು ಲೋಡ್ ಸಿಮ್ಯುಲೇಶನ್ ಪರೀಕ್ಷೆ?
ರೈಲ್ವೆ ಇಲಾಖೆಯಲ್ಲಿ ಹೊಸ ರೈಲುಗಳನ್ನು ಹಳಿಗೆ ಇಳಿಸುವಾಗ ಸುರಕ್ಷತೆ, ಸಿಗ್ನಲಿಂಗ್ ಸೇರಿದಂತೆ ವಿವಿಧ ಪರೀಕ್ಷೆ ಮಾಡಲಾಗುತ್ತದೆ. ಅದರೊಂದಿಗೆ ಲೋಡ್ ಮಾಡಲಾದ ಸಿಮ್ಯುಲೇಶನ್ ಪರೀಕ್ಷೆ ನಡೆಸಲಾಗುತ್ತದೆ. ಇದರಿಂದ ಜನರನ್ನು ತುಂಬಿಕೊಂಡು ಲೋಡ್ ಆದ ರೈಲು ವಿವಿಧ ಪರಿಸ್ಥಿತಿಗಳಲ್ಲಿ ಹೇಗೆ ಚಲಿಸುತ್ತದೆ ಎಂಬುದನ್ನು ಈ ಪರೀಕ್ಷೆಯಿಂದ ಕಂಡುಕೊಳ್ಳಲು ಸಾಧ್ಯವಾಗುತ್ತದೆ.
ಇದರಲ್ಲಿ ಬ್ರೀಡ್ಜ್, ಟ್ರ್ಯಾಕ್ ಪ್ರಕಾರಗಳು ಹಾಗೂ ಹವಾಮಾನದಲ್ಲಿ ರೈಲು ಸಂಚಾರದಲ್ಲಿ ಏನಾದರೂ ವ್ಯತ್ಯಾಸ ಇದೆಯಾ ಎಂದು ಪರೀಕ್ಷಿಸಲಾಗುತ್ತದೆ. ಈ ಸಿಮ್ಯುಲೇಶನ್ ರೈಲು ನಿರ್ವಾಹಕರು ರೈಲಿನ ಮಿತಿ ಹಾಗೂ ಸುರಕ್ಷತೆಯನ್ನು, ಕಾರ್ಯನಿರ್ವಹಣೆ ಖಚಿತಪಡಿಸುತ್ತಾರೆ, ಅರ್ಥ ಮಾಡಿಕೊಳ್ಳುತ್ತಾರೆ.
ವಂದೇ ಭಾರತ್ ಸ್ಲೀಪರ್ ಯಾವಾಗ ಕಾರ್ಯಾಚರಣೆ?
ಈ ಹಿಂದೆ ಭಾರತೀಯ ರೈಲ್ವೆ ಇಲಾಖೆಯು ವಂದೇ ಭಾರತ್ ವಂದೇ ಭಾರತ್ ಕೂತು ಹೋಗುವ ಎಕ್ಸ್‌ಪ್ರೆಸ್ ರೈಲನ್ನು ಪರಿಚಯಿಸಿದ ಐದು ವರ್ಷಗಳ ಬಳಿಕ ಅದರ ರೂಪಾಂತರವಾದ ವಂದೇ ಭಾರತ್ ಸ್ಲೀಪರ್ ರೈಲನ್ನು ಪರಿಚಯಿಸುತ್ತಿದೆ. ಈ ರೈಲು ಪ್ರೀಮಿಯಂ ಅನುಭವ ನೀಡಲಿದೆ. ಇದರಲ್ಲಿ ಪ್ರಯಾಣಿಕರು ಸಾಮಾನ್ಯ ಎಕ್ಸ್‌ಪ್ರೆಸ್ ರೈಲುಗಳಂತೆ ಮಲಗಿಕೊಂಡು ಹೋಗಬಹುದಾಗಿದೆ. ಉತ್ತಮ ಪ್ರಯಾಣ, ಐಶಾರಾಮಿ ಅನುಭವ ನೀಡುವಂತಿದೆ. ಇದು ಮುಂದಿನ ಕೆಲವೇ ವಾರಗಳಲ್ಲಿ ಹಳಿಗೆ ಅಧಿಕೃತವಾಗಿ ಇಳಿಯಲಿದೆ.
ಈ ವಿಬಿ ಸ್ಲೀಪರ್ ರೈಲು ಪ್ರತಿ ಗಂಟೆಗೆ 160 ಕಿಲೋ ಮೀಟರ್‌ಗೆ ಸರಾಸರಿ ವೇಗದಲ್ಲಿ ಚಿಸಲಿದೆ. ರಾತ್ರಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಈ ರೈಲು ಮುಂದಿನ ದಿನಗಳಲ್ಲಿ ಗೇಮ್ ಚೇಂಜರ್ ಆಗಲಿದೆ ಎಂದು ರೈಲ್ವೆ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.












Click it and Unblock the Notifications