Vande Bharat: 240 ವಂದೇಭಾರತ್ ಸ್ಲೀಪರ್ ರೈಲುಗಳ ನಿರ್ಮಾಣಕ್ಕೆ 30,000 ರೂಪಾಯಿ ಕೊಟಿ ಮೌಲ್ಯದ ಟೆಂಡರ್
ಭಾರತೀಯ ರೈಲ್ವೇ ಮುಂದಿನ ನಾಲ್ಕು ವರ್ಷಗಳಲ್ಲಿ ಸ್ಲೀಪರ್ ಸೌಲಭ್ಯಗಳೊಂದಿಗೆ ಸುಮಾರು 400 ವಂದೇ ಭಾರತ್ ರೈಲುಗಳ ಸಂಚಾರ ಆರಂಭಿಸುವ ಗುರಿ ಹೊಂದಿದೆ. ಇದಕ್ಕಾಗಿ ಹೆಚ್ಚು ರೈಲುಗಳ ಉತ್ಪಾದನೆಯ ಗುರಿ ಹೊಂದಲಾಗಿದೆ.
ರೈಲ್ವೇ ಸ್ಲೀಪರ್ ಕೋಚ್‌ಗಳನ್ನು ಹೊಂದಿರು 240 ವಂದೇ ಭಾರತ್ ರೈಲುಗಳನ್ನು ಆರ್ಡರ್ ಮಾಡಲು ನಿರ್ಧರಿಸಿದೆ, ಇದಕ್ಕಾಗಿ 30,000 ಕೋಟಿ ರೂಪಾಯಿ ಮೌಲ್ಯದ ಟೆಂಡರ್ ಅನ್ನು ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಶೀಘ್ರದಲ್ಲೇ ಕರೆಯಲಿದೆ.

ಸ್ಲೀಪರ್ ವಂದೇ ಭಾರತ್ ರೈಲುಗಳು ರಾಜಧಾನಿ ಮತ್ತು ದೂರದ ಮಾರ್ಗಗಳಲ್ಲಿ ಓಡಾಡುವ ನಿರೀಕ್ಷೆಯಿದೆ. ಸ್ಲೀಪರ್ ಆವೃತ್ತಿಯ ವಂದೇ ಭಾರತ್ ವಿನ್ಯಾಸವು ಐಸಿಎಫ್‌ನಲ್ಲಿ ಅಂತಿಮ ಹಂತದಲ್ಲಿದೆ.
ಪ್ರಸ್ತುತ, ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) 86 ವಂದೇ ಭಾರತ್ ರೈಲುಗಳನ್ನು ತಯಾರಿಸಲು ಆದೇಶವನ್ನು ಸ್ವೀಕರಿಸಿದೆ. ಇದರಲ್ಲಿ 75 ವಂದೇ ಭಾರತ್ ರೈಲುಗಳು ಕಾರ್ಯನಿರ್ವಾಹಕ ವರ್ಗ ಮತ್ತು ಚೇರ್ ಕಾರ್ ಸೌಲಭ್ಯ ಹೊಂದಿದ್ದರೆ, ಉಳಿದ ರೈಲುಗಳು ಸ್ಲೀಪರ್ ಕ್ಲಾಸ್ ಸೌಲಭ್ಯ ಹೊಂದಿರಲಿವೆ.
ದಾಖಲೆಗಳನ್ನು ಅಂತಿಮಗೊಳಿಸಿದ ನಂತರ 240 ವಂದೇ ಭಾರತ್ ರೈಲುಗಳ ಟೆಂಡರ್ ಅನ್ನು ಕರೆಯಲಾಗುತ್ತದೆ. ಈ 240 ವಂದೇ ಭಾರತ್ ರೈಲುಗಳು 160 ಕಿಮೀ ವೇಗದಲ್ಲಿ ಚಲಿಸಲಿವೆ. ಸ್ಲೀಪರ್ ವಿಭಾಗದಲ್ಲಿ, ರೈಲ್ವೇಸ್ 200 ವಂದೇ ಭಾರತ್ ರೈಲುಗಳ ತಯಾರಿಸಲು ಉದ್ದೇಶಿಸಿದದೆ. ಆದರೆ ಅಲ್ಯೂಮಿನಿಯಂ ದೇಹವನ್ನು ಹೊಂದಿರುವ 100 ವಂದೇ ಭಾರತ್ ರೈಲುಗಳ ಆದೇಶವನ್ನು ಈಗ ಅಂತಿಮಗೊಳಿಸಲಾಗುತ್ತಿದೆ.
ಬಣ್ಣ ಬದಲಾಯಿಸಿದ ವಂದೇಭಾರತ್
ಆರಂಭದಲ್ಲಿ ನೀಲಿ ಬಣ್ಣದಲ್ಲಿದ್ದ ವಂದೇ ಭಾರತ್ ರೈಲುಗಳ ಈಗ ವಿವಿಧ ಬಣ್ಣಗಳಲ್ಲಿ ಬರಲಿವೆ. ಬೂದು ಮತ್ತು ಕೇಸರಿ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ ತಿಂಗಳು ಮತ್ತಷ್ಟು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸೇವೆ ಆರಂಭಿಸಲಿವೆ.
ವಂದೇ ಮೆಟ್ರೋ, ಮೆಮು ರೈಲುಗಳು ಕೂಡ ಸೇರ್ಪಡೆ
ವಂದೇ ಭಾರತ್ ಸ್ಲೀಪರ್ ರೈಲುಗಳು ಮಾತ್ರವಲ್ಲದೆ, ವಂದೇ ಮೆಟ್ರೋ, ಮೆಮು ಮಾದರಿಯಲ್ಲಿ ಕೂಡ ವಂದೇ ಭಾರತ್ ಸಂಚಾರ ನಿರ್ಮಿಸಲು ಯೋಜನೆ ಮಾಡಲಾಗಿದೆ. 100 ಕಿಮೀಗಿಂತ ಕಡಿಮೆ ಅಂತದರಲ್ಲಿ ರಾಜಧಾನಿ ಸಮೀಪವಿರುವ ನಗರಗಳಿಂದ ಮೆಮು ಮಾದರಿಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸಲಿವೆ.
ಇದರ ಜೊತೆಗೆ ಸಾಮಾನ್ಯ ಮಾದರಿಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ನಿರ್ಮಾಣ ಮಾಡಲು ಕೂಡ ಯೋಜಿಸಲಾಗಿದೆ. ಕಡಿಮೆ ಟಿಕೆಟ್ ದರ ಹೊಂದಿರುವ ರೈಲುಗಳ ಸೇವೆ ಆರಂಭಿಸಲು ರೈಲ್ವೆ ಇಲಾಖೆ ಯೋಜಿಸುತ್ತಿದೆ.












Click it and Unblock the Notifications