Vande Bharat Express: ವಂದೇ ಭಾರತ್ ರೈಲು ಟಿಕೆಟ್‌ ರದ್ದು, ಮರು ಪಾವತಿ ವಿವರಗಳು

ಬೆಂಗಳೂರು, ನವೆಂಬರ್ 18: ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು. ದೇಶದಲ್ಲಿ 66 ಈ ಮಾದರಿ ರೈಲುಗಳು ಸಂಚಾರವನ್ನು ನಡೆಸುತ್ತಿವೆ. 2025ರಲ್ಲಿ ವಂದೇ ಭಾರತ್ ಸ್ಲೀಪರ್ ಮಾದರಿ ರೈಲುಗಳ ಸಂಚಾರಕ್ಕೆ ಸಹ ತಯಾರಿ ನಡೆಸಲಾಗಿದೆ. ವಂದೇ ಭಾರತ್ ರೈಲುಗಳ ಸೀಟುಗಳಿಗೆ ಬೇಡಿಕೆ ಇದೆ. ಈ ರೈಲಿನ ಟಿಕೆಟ್ ಬುಕ್ಕಿಂಗ್ ರದ್ದುಗೊಳಿಸಿದರೆ ಎಷ್ಟು ಹಣ ಮರುಪಾವತಿ ಆಗಲಿದೆ?.

ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಕಡಿಮೆ ಮಾಡುವಲ್ಲಿ ವಂದೇ ಭಾರತ್ ರೈಲು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಈ ಐಷಾರಾಮಿ ರೈಲಿನ ಪ್ರಯಾಣ ದರ ಹೆಚ್ಚಾಗಿಯೇ ಇದೆ, ಪ್ರಯಾಣ ದರವನ್ನು ಇಲಾಖೆ ಸಮರ್ಥಿಸಿಕೊಂಡಿದ್ದು, ಅದನ್ನು ಕಡಿಮೆ ಮಾಡುವ ಕುರಿತು ಯಾವುದೇ ಚಿಂತನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

Vande Bharat Express Train ticket Cancellation Charges

ಮರು ಪಾವತಿ ಎಷ್ಟು?; ವಂದೇ ಭಾರತ್ ರೈಲಿನ ಟಿಕೆಟ್ ರದ್ದುಗೊಳಿಸಿದರೆ ಸಿಗುವ ಮರು ಪಾವತಿ ಹಣ ರದ್ದುಗೊಳಿಸುವ ಸಮಯ, ಬುಕ್ ಮಾಡಿದ ಮಾದರಿಯ ಟಿಕೆಟ್‌ಗಳ ಮೇಲೆ ಅವಲಂಬಿತವಾಗುತ್ತದೆ. ಟಿಕೆಟ್ ಬುಕ್ಕಿಂಗ್ ರದ್ದು ಮಾಡಿದರೆ ಸಿಗುವ ಹಣದ ವಿವರಗಳು ಇಲ್ಲಿವೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹೊರಡಲು ನಿಗದಿಯಾದ 48 ಗಂಟೆಗಳ ಮೊದಲು ಟಿಕೆಟ್ ರದ್ದುಗೊಳಿಸಿದರೆ ರದ್ದುಗೊಳ್ಳುವ ಶುಲ್ಕ ಅನ್ವಯವಾಗುತ್ತದೆ, ಮರು ಪಾವತಿ ಆಗುತ್ತದೆ. ಇದು ದ್ವಿತೀಯ ದರ್ಜೆಗೆ 60 ರೂ. ಇಂದ ಆರಂಭವಾಗಿ ಎಸಿ ಫಸ್ಟ್ ಕ್ಲಾಸ್/ ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿ 240 ರೂ. ತನಕ ಇರುತ್ತದೆ.

ರೈಲು ಹೊರಡುವ ವೇಳಾಪಟ್ಟಿಯ 48 ರಿಂದ 12 ಗಂಟೆಯ ಅವಧಿಯಲ್ಲಿ ಟಿಕೆಟ್ ರದ್ದು ಮಾಡಿದರೆ ಒಟ್ಟು ಟಿಕೆಟ್‌ ಶುಲ್ಕದ ಶೇ 25ರಷ್ಟು ಕಡಿತಗೊಳ್ಳುತ್ತದೆ. ಇದರ ಜೊತೆಗೆ ಟಿಕೆಟ್ ರದ್ಧತಿ ಶುಲ್ಕ ಸಹ ಅನ್ವಯವಾಗುತ್ತದೆ. ಪ್ರಯಾಣಿಕರು ರೈಲು ಹೊರಡುವ 12 ರಿಂದ 4 ಗಂಟೆಗಳ ಮೊದಲು ಟಿಕೆಟ್ ರದ್ದುಗೊಳಿಸಿದರೆ ಶೇ 50ರಷ್ಟು ಹಣ ಕಡಿತವಾಗುತ್ತದೆ, ಕನಿಷ್ಠ ರದ್ದತಿ ಶುಲ್ಕ ಸಹ ಕಡಿತವಾಗುತ್ತದೆ.

ಒಂದು ವೇಳೆ ಪ್ರಯಾಣಿಕರು ಆರ್‌ಎಸಿ (ರದ್ದಾಗುವ ಆಸನಗಳ ಕಾಯ್ದಿರಿಸುವಿಕೆ) ಅಥವ ವೈಟಿಂಗ್‌ ಲಿಸ್ಟ್‌ನಲ್ಲಿದ್ದರೆ 30 ನಿಮಿಷದ ತನಕ ಟಿಕೆಟ್ ರದ್ದುಗೊಳಿಸುವ ಅವಕಾಶವಿದೆ. ಆಗ ಪೂರ್ಣ ಹಣ ಮರು ಪಾವತಿಗೆ ಅವಕಾಶವಿದೆ.

ಇ-ಟಿಕೆಟ್ ಬುಕ್ ಮಾಡಿದ್ದರೆ ರದ್ದುಗೊಳಿಸಲು ಟಿಕೆಟ್ ಠೇವಣಿ ರಸೀದಿಯನ್ನು (ಟಿಡಿಆರ್) ಆನ್‌ಲೈನ್‌ನಲ್ಲಿ ಕಡ್ಡಾಯವಾಗಿ ಭರ್ತಿ ಮಾಡಬೇಕು. ನೇರವಾಗಿ ಟಿಕೆಟ್‌ ಅನ್ನು ರದ್ದುಗೊಳಿಸಲು ಅವಕಾಶವಿಲ್ಲ.

2018ರಲ್ಲಿ ಭಾರತೀಯ ರೈಲ್ವೆ ವಂದೇ ಭಾರತ್ ಮಾದರಿ ರೈಲುಗಳ ಸಂಚಾರವನ್ನು ಆರಂಭಿಸಿದೆ. ಬಿಳಿ ಮತ್ತು ಕೇಸರಿ ಬಣ್ಣದ 8 ಮತ್ತು 16 ಬೋಗಿಗಳ ರೈಲುಗಳು ದೇಶದ ವಿವಿಧ ಮಾರ್ಗದಲ್ಲಿ ಸಂಚಾರ ನಡೆಸುತ್ತಿವೆ. ಪ್ರಮುಖವಾಗಿ ಎರಡು ನಗರದ ನಡುವಿನ ಪ್ರಯಾಣದ ಅವಧಿ ಕಡಿಮೆ ಮಾಡಲು ಈ ಮಾದರಿ ರೈಲುಗಳನ್ನು ಓಡಿಸಲಾಗುತ್ತಿದೆ.

ಭಾರತೀಯ ರೈಲ್ವೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅತಿ ದೂರದ ವಂದೇ ಭಾರತ್ ರೈಲು ಸೇವೆಗೆ ಚಾಲನೆ ನೀಡಿದೆ. ಈ ರೈಲು ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಬಿಹಾರದ ರಾಜಧಾನಿ ಪಾಟ್ನಾ ನಡುವೆ ಸಂಪರ್ಕ ಕಲ್ಪಿಸುತ್ತದೆ. ಈ ರೈಲು ಒಟ್ಟು 994 ಕಿ. ಮೀ. ಮಾರ್ಗವನ್ನು 11 ಗಂಟೆ 35 ನಿಮಿಷಗಳಲ್ಲಿ ತಲುಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+