Vande Bharat Express:ದೆಹಲಿಯಿಂದ ಇಲ್ಲಿಗೆ ಬರೀ 5.30 ಗಂಟೆಯಲ್ಲಿ ಪ್ರಯಾಣ, ಟಿಕೆಟ್ ಬೆಲೆ, ನಿಲುಗಡೆ, ಸಮಯ, ವೇಳಾಪಟ್ಟಿ ವಿವರ

ಬೆಂಗಳೂರು, ಜನವರಿ 03: ಪ್ರಧಾನಿ ನರೇಂದ್ರ ಮೋದಿಯವರು ಒಂದೆರಡು ದಿನಗಳ ಹಿಂದಷ್ಟೇ ಹೊಸ ಮಾರ್ಗಗಳಲ್ಲಿ ವಂದೇ ಭಾರತ್ ಮತ್ತು ಅಮೃತ್ ಭಾರತ್ ರೈಲುಗಳ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿಸಿದ್ದರು. ಇದರಲ್ಲಿ ದೆಹಲಿಯಿಂದ ಅಮೃತ್‌ಸರವರೆಗೆ ಸಂಚರಿಸಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ (Vande Bharat Express Train) ರೈಲಿನ ಅಪ್ಡೇಟ್ ಮಾಹಿತಿ ಲಭಿಸಿದೆ. ಈ 'ವಿಬಿ' ರೈಲಿನ ವೇಳಾಪಟ್ಟಿ, ಸಮಯ, ವೇಗ, ಟಿಕೆಟ್ ದರ ಮತ್ತು ನಿಲುಗಡೆಯ ಮಾಹಿತಿ ಇಲ್ಲಿ ತಿಳಿಯಿರಿ.

ವಂದೇ ಭಾರತ್ ಎಕ್ಸ್‌ಪ್ರೆಸ್ ಸೆಮೀ ಹೈ ಸ್ಪೀಡ್ ರೈಲು ಇದಾಗಿದೆ. ಕಳೆದ ಡಿಸೆಂಬರ್ 30ರಿಂದ ಈ ರೈಲು ಅಮತ್‌ಸರದಿಂದ ದೆಹಲಿಗೆ ವಿಶೇಷ ಸೇವೆ ಕಲ್ಪಿಸುತ್ತಿದೆ. ಈ ರೈಲು ಗಂಟೆಗೆ ಗಂಟೆಗೆ 160 ಕಿಮೀ ವೇಗದಲ್ಲಿ ಪ್ರಯಾಣ ಸೇವೆ ನೀಡಿದೆ. ಈ ಮೂಲಕ ಇದು ಶತಾಬ್ದಿ ರೈಲಿಗಿಂತಲೂ ನೂತನ 'ವಿಬಿ' ರೈಲು ಕಡಿಮೆ ಸಮಯದಲ್ಲಿ ನಿಗದಿತ ಸ್ಥಳ ತಲುಪುವಲ್ಲಿ ಯಶಸ್ವಿಯಾಗಿದೆ..

Vande Bharat Express Train Inbetween Delhi-Amritsar Ticket fare, Timings, Stop: Check Schedule

ಶತಾಬ್ದಿಗಿಂತ ಅಧಿಕ ವೇಗದ ಸಂಚಾರ

ಹವಾ ನಿಯಂತ್ರಿತ (ಎಸಿ) ಬೋಗಿ ಹೊಂದಿರುವ ಈ ರೈಲು ಎಕ್ಸಿಕ್ಯೂಟಿವ್ ಚೇರ್ ಕಾರ್ ಸೇವೆಯನ್ನು ನೀಡುತ್ತದೆ. ಹೊಸ ಸ್ವಯಂ ಚಾಲಿತ ರೈಲು ದೆಹಲಿ ಮತ್ತು ಅಮೃತಸರ ನಡುವಿನ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗಿಂತ ವೇಗವಾಗಿ ಸಂಚರಿಸುತ್ತದೆ. ಇದೇ ಮಾರ್ಗದ ದೂರವನ್ನು ಕ್ರಮಿಸಲು ಶತಾಬ್ದಿ 6 ಗಂಟೆಗಳ ಕಾಲ ತೆಗೆದುಕೊಂಡರೆ ವಂದೇ ಭಾರತ್ ಎಕ್ಸ್‌ಪ್ರೆಸ್ ಅದಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.

ರೈಲು ಸಂಖ್ಯೆ, ನಿಲುಗಡೆ ನಿಲ್ದಾಣಗಳು

22487/22488 ಸಂಖ್ಯೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ದೆಹಲಿ-ಅಮೃತಸರ ವರೆಗೆ ಸಾವಿರಾರು ಪ್ರಯಾಣಿಕರಿಗೆ ಸೇವೆ ನೀಡುತ್ತದೆ. ಇದರ ವೇಳಾಪಟ್ಟಿ, ನಿಲುಗಡೆ ಮಾಹಿತಿ ಮುಂದೆ ತಿಳಿಯಿರಿ.

ಅಮೃತಸರದಿಂದ ದೆಹಲಿ ಜಂಕ್ಷನ್ ತೆರಳುವ (ರೈಲು ಸಂಖ್ಯೆ 20488) ವಂದೇ ಭಾರತ್ ಎಕ್ಸ್‌ಪ್ರೆಸ್ ಅಮೃತಸರ ನಿಲ್ದಾಣದಿಂದ ಬೆಳಗ್ಗೆ 8:20 ಗಂಟೆಗೆ ಹೊರಡುತ್ತದೆ. ಮಧ್ಯಾಹ್ನ 1.50 ಗಂಟೆಗೆ ದೆಹಲಿ ಜಂಕ್ಷನ್‌ಗೆ ತೆರಳುತ್ತದೆ. ಈ ಮೂಲಕ ಇವೆರಡು ಸ್ಥಳದ ಮಧ್ಯದ ಮಾರ್ಗವನ್ನು ಕೇವಲ 5 ಗಂಟೆ 30 ನಿಮಿಷಗಳಲ್ಲಿ ತೆಗೆದುಕೊಳ್ಳುತ್ತದೆ.

ಮಾರ್ಗದಲ್ಲಿ, ರೈಲು ಬಿಯಾಸ್, ಜಲಂಧರ್ ಕ್ಯಾಂಟ್, ಫಗ್ವಾರಾ, ಲುಧಿಯಾನ ಮತ್ತು ಅಂಬಾಲಾ ಕ್ಯಾಂಟ್ ನಿಲ್ದಾಣಗಳಲ್ಲಿ ವಿಬಿ ರೈಲು ನಿಲಗಡೆಯನ್ನು ಹೊಂದಿದೆ. ಇದರಿಂದ ಈ ಪ್ರದೇಶಗಳ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.

Vande Bharat Express Train Inbetween Delhi-Amritsar Ticket fare, Timings, Stop: Check Schedule

ರೈಲು ನಿರ್ಗಮನ, ಆಗಮನ ಸಮಯ ಹೀಗಿದೆ

ಮರಳಿ ಅಲ್ಲಿಂದ ಬರುವ ವಿಬಿ ರೈಲು (ಸಂಖ್ಯೆ 20487) ದೆಹಲಿ-ಅಮೃತಸರ ವಂದೇ ಭಾರತ್ ಎಕ್ಸ್‌ಪ್ರೆಸ್ ದೆಹಲಿ ಜಂಕ್ಷನ್‌ನಿಂದ ಮಧ್ಯಾಹ್ನ 3:15 ಕ್ಕೆ ಹೊರಟು ರಾತ್ರಿ 8:45 ಗಂಟೆಗೆ ಅಮೃತಸರವನ್ನು ತಲುಪುತ್ತದೆ. ಆಗ ಸಹಿತ ಕೇವಲ 5 ಗಂಟೆ 30 ನಿಮಿಷಗಳಲ್ಲಿಯೇ ನಿಗದಿತ ದೂರವನ್ನು ಕ್ರಮಿಸುತ್ತದೆ.

ಈ ವಿಬಿ ರೈಲು ವಾರದಲ್ಲಿ ಶುಕ್ರವಾರ ಒಂದು ದಿನ ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲಿ ಸಂಚಾರ ಮಾಡಲಿದೆ. (ರೈಲು ಸಂಖ್ಯೆ 22487/22488) ಅಮೃತಸರ-ದೆಹಲಿ-ಅಮೃತಸರ ವಂದೇ ಭಾರತ್ ಎಕ್ಸ್‌ಪ್ರೆಸ್ ಇದೇ ಜನವರಿ 6, 2024 ರಂದು ನಿಯಮಿತ ಸೇವೆಯನ್ನು ಆರಂಭಿಸಲಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಅಮೃತಸರ-ದೆಹಲಿ-ಅಮೃತಸರ ಟಿಕೆಟ್ ಬೆಲೆ

ಅಮೃತಸರ-ದೆಹಲಿ-ಅಮೃತಸರ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎಸಿ ಸಹಿತ ಟಿಕೆಟ್ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ಎರಡಕ್ಕೂ ಕ್ರಮವಾಗಿ 1340/- ರೂಪಾಯಿ ಹಾಗೂ 2375/ ರೂಪಾಯಿ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತರ 5 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಮತ್ತು ಎರಡು ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಕಾರ್ಯಾಚರಣೆಗೆ ಡಿಸೆಂಬರ್ 30 ರಂದು ಚಾಲನೆ ನೀಡಿದ್ದರು.

ಈ ವೇಳೆ ದೆಹಲಿ-ಅಮೃತ್‌ಸರ ರೈಲಿಗೆ ಚಾಲನೆ ನೀಡಲಾಗಿತ್ತು. ಈ ರೈಲು ಈಗಾಗಲೇ ಸಂಚಾರ ನಡೆಸಿದೆ. ಅಧಿಕೃತವಾಗಿ ವಾರದ ಆರು ದಿನವು ಪ್ರಯಾಣವನ್ನು ಜ.6ರಿಂದ ಆರಂಭಿಸಲಿದೆ ಎಂದು ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+