Vande Bharat Sleeper Train: ಬೆಂಗಳೂರಿನ ಸಂಸ್ಥೆ ಉತ್ಪಾದಿತ 'ವಿಬಿ' ಸ್ಲೀಪರ್ ಟ್ರೈನ್ ಸಂಚಾರ ಯಾವಾಗ? ಇಲ್ಲಿದೆ ಮಾಹಿತಿ
ಬೆಂಗಳೂರು, ಡಿಸೆಂಬರ್ 20: ಬೆಂಗಳೂರು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಟ್ರೈನ್‌ಸೆಟ್ ಪ್ರೊಟೊಟೈಪ್ ಉತ್ಪಾದನೆಯನ್ನು ಆರಂಭಿಸಿದೆ. ಇದರ ಕಾರ್ಯಾಚರಣೆಗೆ ದಿನಗಣನೇ ಆರಂಭವಾಗಿದೆ. ಈ ಮೂಲಕ ಭಾರತ ಭವಿಷ್ಯದಲ್ಲಿ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ.
ದೇಶಾದಲ್ಲಿ ವಂದೇ ಭಾರತ್ ಸ್ಲೀಪರ್ ಟ್ರೈನ್‌ಸೆಟ್ ಮತ್ತು ತುಕ್ಕು ಹಿಡಿಯದಂತಹ ( ತುಕ್ಕು ನಿರೋಧಕ) ಜಿಎಫ್‌ಆರ್‌ಪಿ ಪ್ಯಾನೆಲ್‌ಗಳು, ಏರೋಡೈನಾಮಿಕ್ ಬಾಹ್ಯ ವಿನ್ಯಾಸ ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳು, ಮಾಡ್ಯುಲರ್ ಪ್ಯಾಂಟ್ರಿ ಮತ್ತು ಆಧುನಿಕ ಸೌಕರ್ಯಗಳನ್ನು ಒಳಗೊಂಡಂತೆ ಉನ್ನತ ದರ್ಜೆಯ ಸೇವೆ ನೀಡಲು ಸಜ್ಜಾಗಿದೆ. ವಂದೇ ಭಾರತ್‌ನ ಈ ವಿಶೇಷ ರೈಲ್ವೆ ಕೋಚ್‌ಗಳು ಬೆಂಗಳೂರಿನ ಸಂಸ್ಥೆ ಉತ್ಪಾದಿಸುತ್ತಿದೆ ಎಂಬುದೇ ಹೆಮ್ಮೆ ಸಂಗತಿ.

ಭಾರತೀಯ ರೈಲ್ವೆ ಇಲಾಖೆಯಿಂದ 2024ರಲ್ಲಿ ನಿಯೋಜನೆಗೊಳ್ಳಲಿರುವ ಈ ಸ್ಲೀಪರ್ ವಂದೇ ಭಾರತ್ ರೈಲು, ಮೊದಲ ದರ್ಜೆಯ AC ಯಿಂದ 3 ಹಂತದ AC ವರೆಗಿನ ಸಂರಚನೆಗಳಲ್ಲಿ ಸಿದ್ಧವಾಗಿದ್ದು, ಒಂದು ರೈಲಿನಲ್ಲಿ ಒಟ್ಟು 823 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ. ಈ ರೈಲಿನ ಕುರಿತು ಕೇಂದ್ರ ರೈಲ್ವೆ ಖಾತೆ ಸಚಿವರು ಸಹ ಈ ಹಿಂದೆ ಅಪ್ಡೇಟ್ ಕೊಟ್ಟಿದ್ದರು. 2024ರಲ್ಲಿ ಈ ಸ್ಲೀಪರ್ ಕೋಚ್ ವಿಬಿ ರೈಲುಗಳು ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ಹಂಚಿಕೊಂಡಿದ್ದರು.
BEML ಮತ್ತು ಭಾರತೀಯ ರೈಲ್ವೇಗಳ ನಡುವಿನ ಸಹಯೋಗದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅಧಿಕಾರಿ ನವೀನ್ ಗುಲಾಟಿ ಸದಸ್ಯ (ಟ್ರಾಕ್ಷನ್ ಮತ್ತು ರೋಲಿಂಗ್ ಸ್ಟಾಕ್) ಅವರು ಸ್ಲೀಪರ್ ರೈಲುಗಳು 'ಮೇಕ್ ಇನ್ ಇಂಡಿಯಾ" ಗೆ ಪೂರಕವಾಗಲಿದೆ ಎಂದರು.
Concept train - Vande Bharat (sleeper version)
— Ashwini Vaishnaw (@AshwiniVaishnaw) October 3, 2023
Coming soon… early 2024 pic.twitter.com/OPuGzB4pAk
ಸುರಕ್ಷತೆ ಮತ್ತು ನಾವೀನ್ಯತೆ
ಈ ಎಸಿ ಸ್ಲೀಪರ್ ವಂದೇ ಭಾರತ್ ಟ್ರೈನ್ ಸೆಟ್‌ಗಳು ಯುರೋಪಿಯನ್ ರೋಲಿಂಗ್ ಸ್ಟಾಕ್ ಮಾನದಂಡಗಳನ್ನು (HL3) ಪೂರೈಸುವುದರೊಂದಿಗೆ ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಬೆಂಕಿ ಅವಘಡದಂತಹ ಸನ್ನಿವೇಶದಲ್ಲಿಯೂ ಪ್ರಯಾಣಿಕರು ಸುರಕ್ಷಿತವಾಗಿರುವುದನ್ನು ಅಗ್ನಿ ತಡೆಗೆ ಸಂಯೋಜಕಗಳು ಖಚಿತಪಡಿಸುತ್ತವೆ ಎಂದು BEML ನ ಶಂತನು ರಾಯ್ ತಿಳಿಸಿದರು.

ಬಿಇಎಂಎಲ್ ತಂಡವು ವಂದೇ ಭಾರತ್ ರೈಲಿನ ಒಳಾಂಗಣದಲ್ಲಿ ಮಾತ್ರವಲ್ಲದೆ ಪ್ರೊಪಲ್ಷನ್ ಸಿಸ್ಟಮ್, ಬೋಗಿ ಸಿಸ್ಟಮ್, ಬ್ರೇಕ್ ಸಿಸ್ಟಮ್ಸ್ ಸೇರಿದಂತೆ ಹಲವು ವಿನ್ಯಾಸಗಳ ತಯಾರಿಗೆ ಹೆಚ್ಚಿನ ಆದ್ಯತೆ ವಹಿಸಿದೆ. ಇದುಗಳು ಪ್ರಯಾಣಿಕರನ್ನು ಆಕರ್ಷಿಸುತ್ತವೆ. ಪ್ರಮುಖ ವೈಶಿಷ್ಟ್ಯಗಳ ಪೈಕಿ ಅಗ್ನಿ ಸುರಕ್ಷತೆ, ವಿಕಲಚೇತನ ಪ್ರಯಾಣಿಕರಿಗೆ ವಿಶೇಷ ನಿಬಂಧನೆ, ಸ್ವಯಂಚಾಲಿತ ಬಾಗಿಲುಗಳು ಮತ್ತು ಸಂವೇದಕ ಆಧಾರಿತ ಅಂತರಸಂಪರ್ಕ ವ್ಯವಸ್ಥೆ ಇದರಲ್ಲಿವೆ.
ವಂದೇ ಭಾರತ್ ಸ್ಲೀಪರ್ ಟ್ರೈನ್ ಲಕ್ಷಣಗಳು
ರೈಲಿನಲ್ಲಿ GFRP ಪ್ಯಾನೆಲ್‌ಗಳೊಂದಿಗೆ ಅತ್ಯುತ್ತಮ ದರ್ಜೆಯ ಒಳಾಂಗಣ ವ್ಯವಸ್ಥೆ ಇದೆ. ಇದು ಪ್ರಯಾಣಿಕರಿಗೆ ಐಶಾರಾಮಿ ಅನುಭವ ನೀಡುತ್ತದೆ. ಮಾಡ್ಯುಲರ್ ಪ್ಯಾಂಟ್ರಿ, ಬಿಸಿನೀರಿನ ಶವರ್ ಹೊಂದಿದ ಪ್ರಥಮ ದರ್ಜೆಯ AC ಕೋಚ್, ಸಾರ್ವಜನಿಕ ಪ್ರಕಟಣೆ/ಮಾಹಿತಿಯ ವಿಡಿಯೋ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಆಧುನಿಕ ಪ್ರಯಾಣಿಕರ ಸೌಕರ್ಯಗಳು, ವಿಶಾಲವಾದ ಲಗೇಜ್ ಕೊಠಡಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಈ ರೈಲು ಹೊಂದಿವೆ.
-
ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ -
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು? -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ












Click it and Unblock the Notifications