ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ಬೆಂಗಳೂರು–ಮುಂಬೈ ವಂದೇ ಭಾರತ್‌ ಸ್ಲೀಪರ್‌ ರೈಲಿಗೆ ಆಂಧ್ರದಲ್ಲಿ 2 ಸ್ಟಾಪ್‌

ಬೆಂಗಳೂರು: ಬೆಂಗಳೂರು-ಮುಂಬೈ ನಡುವೆ ಶೀಘ್ರದಲ್ಲೇ ಸಂಚಾರ ಆರಂಭಿಸಲಿರುವ ವಂದೇ ಭಾರತ್ ಸ್ಲೀಪರ್‌ ಎಕ್ಸ್‌ಪ್ರೆಸ್‌ ರೈಲಿಗೆ ಆಂಧ್ರಪ್ರದೇಶದ ಎರಡು ನಿಲ್ದಾಣಗಳಲ್ಲಿ ನಿಲುಗಡೆ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದರಿಂದ ರಾಯಲಸೀಮೆ ಭಾಗದ ಪ್ರಯಾಣಿಕರಿಗೆ ಬೆಂಗಳೂರು, ಮುಂಬೈ ಸೇರಿದಂತೆ ಪ್ರಮುಖ ನಗರಗಳಿಗೆ ವೇಗದ ಹಾಗೂ ಆರಾಮದಾಯಕ ರೈಲು ಸಂಪರ್ಕ ದೊರೆಯಲಿದೆ.

ಬೆಂಗಳೂರು ಕೆಎಸ್‌ಆರ್‌ ರೈಲು ನಿಲ್ದಾಣದಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ (CSMT) ನಡುವೆ ವಂದೇ ಭಾರತ್‌ ಸ್ಲೀಪರ್‌ ರೈಲು ಸೇವೆ ಆರಂಭಿಸಲು ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಈ ರೈಲು ಇದೇ ತಿಂಗಳಲ್ಲಿ ಸಂಚಾರ ಆರಂಭಿಸುವ ಸಾಧ್ಯತೆ ಇದ್ದು, ವಾರದಲ್ಲಿ ಆರು ದಿನ ಸಂಚರಿಸುವ ನಿರೀಕ್ಷೆಯಿದೆ.

Vande Bharat Express Bengaluru-Mumbai Express train to Halt at Anantapur and Guntakal in Andhra Pradesh

ಪ್ರಸ್ತಾವಿತ ವೇಳಾಪಟ್ಟಿಯ ಪ್ರಕಾರ, ರೈಲು ಮುಂಬೈನಿಂದ ರಾತ್ರಿ 10.30ಕ್ಕೆ ಹೊರಟು ಮರುದಿನ ಮಧ್ಯಾಹ್ನ 2.50ಕ್ಕೆ ಬೆಂಗಳೂರಿಗೆ ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 10 ಗಂಟೆಗೆ ಹೊರಡುವ ರೈಲು ಮರುದಿನ ಮಧ್ಯಾಹ್ನ 1.50ಕ್ಕೆ ಮುಂಬೈ ತಲುಪುವ ಸಾಧ್ಯತೆಯಿದೆ. ಒಟ್ಟು ಪ್ರಯಾಣದ ಅವಧಿ ಸುಮಾರು 16 ಗಂಟೆಗಳಾಗಿರಲಿದೆ.

ಈ ರೈಲಿಗೆ ಮಹಾರಾಷ್ಟ್ರದಲ್ಲಿ ಸೊಲ್ಲಾಪುರ, ಪುಣೆ ಮತ್ತು ಕಲ್ಯಾಣ, ಕರ್ನಾಟಕದಲ್ಲಿ ರಾಯಚೂರು ಮತ್ತು ಕಲಬುರಗಿ, ಆಂಧ್ರಪ್ರದೇಶದಲ್ಲಿ ಅನಂತಪುರ ಮತ್ತು ಗುಂತಕಲ್ ನಿಲುಗಡೆ ಇರಲಿದೆ. ಹಿಂದಿರುಗುವ ಮಾರ್ಗದಲ್ಲೂ ಇದೇ ನಿಲ್ದಾಣಗಳಲ್ಲಿ ರೈಲು ನಿಲ್ಲಲಿದೆ.

Vande Bharat Express: ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ

ಆಂಧ್ರಪ್ರದೇಶದ ಅನಂತಪುರ ಮತ್ತು ಗುಂತಕಲ್‌ ನಿಲ್ದಾಣಗಳಿಗೆ ನಿಲುಗಡೆ ನೀಡಿರುವುದರಿಂದ ಈ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಿಂದೆ ಧರ್ಮಾವರಂ, ಪುಟ್ಟಪರ್ತಿ ಮತ್ತು ಹಿಂದೂಪುರ ನಿಲ್ದಾಣಗಳಲ್ಲೂ ನಿಲುಗಡೆ ನೀಡಬೇಕೆಂಬ ಬೇಡಿಕೆ ಇತ್ತು. ಆದರೆ ಸದ್ಯದ ಪ್ರಸ್ತಾವಿತ ವೇಳಾಪಟ್ಟಿಯಲ್ಲಿ ಈ ನಿಲ್ದಾಣಗಳು ಸ್ಥಾನ ಪಡೆದಿಲ್ಲ.

ಆಂಧ್ರಪ್ರದೇಶದ ಅನಂತಪುರ ಸಂಸದ ಅಂಬಿಕಾ ಲಕ್ಷ್ಮೀನಾರಾಯಣ ಅವರು ಆಂಧ್ರದಲ್ಲಿ ಎರಡು ನಿಲುಗಡೆಗಳನ್ನು ನೀಡಿರುವುದಕ್ಕೆ ರೈಲ್ವೆ ಸಚಿವ ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ರಾಯಲಸೀಮೆ ಭಾಗದ ಜನರು ಬೆಂಗಳೂರು, ಮುಂಬೈ ಹಾಗೂ ಮಾರ್ಗದಲ್ಲಿರುವ ಇತರ ಪ್ರಮುಖ ನಗರಗಳಿಗೆ ಪ್ರಯಾಣಿಸಲು ಈ ರೈಲು ಸಾಕಷ್ಟು ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

Vande Bharat Express: 823 ಪ್ರಯಾಣಿಕರು ಪ್ರಯಾಣಿಸುವ ಸಾಮರ್ಥ್ಯ

16 ಬೋಗಿಗಳ ವಂದೇ ಭಾರತ್‌ ಸ್ಲೀಪರ್‌ ರೈಲಿನಲ್ಲಿ ತ್ರಿ-ಟೈರ್ ಎಸಿ, ಟು-ಟೈರ್ ಎಸಿ ಹಾಗೂ ಫಸ್ಟ್‌ ಎಸಿ ವಿಭಾಗಗಳು ಇರಲಿವೆ. ಒಟ್ಟು 823 ಪ್ರಯಾಣಿಕರು ಪ್ರಯಾಣಿಸುವ ಸಾಮರ್ಥ್ಯವನ್ನು ರೈಲು ಹೊಂದಿರಲಿದೆ.

ಇದರ ಜೊತೆಗೆ ಗುಂತಕಲ್-ಬೆಂಗಳೂರು ನಡುವೆ ಶೀಘ್ರದಲ್ಲೇ ಮತ್ತೊಂದು ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭವಾಗಲಿದೆ ಎಂದು ಸಂಸದ ಅಂಬಿಕಾ ಲಕ್ಷ್ಮೀನಾರಾಯಣ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಬೆಂಗಳೂರು-ಮುಂಬೈ ವಂದೇ ಭಾರತ್‌ ಸ್ಲೀಪರ್‌ ರೈಲಿನ ಸೇವೆ ಆರಂಭವಾದರೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಪ್ರಯಾಣಿಕರಿಗೆ ವೇಗದ ರೈಲು ಸಂಪರ್ಕ ಮತ್ತಷ್ಟು ಸುಧಾರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+