15-18 ವಯಸ್ಸಿನವರಿಗೆ ಲಸಿಕೆ: ಕೋವಾಕ್ಸಿನ್ ಸ್ಟಾಕ್ ವಿನಿಮಯ ಪ್ರಕ್ರಿಯೆ ಆರಂಭ

ನವದೆಹಲಿ, ಜನವರಿ 02: ಭಾರತದಲ್ಲಿ ಜನವರಿ 3 ರಿಂದ ಹದಿಹರೆಯದವರಿಗೆ ಅಂದರೆ 15-18 ವರ್ಷದವರಿಗೆ ಕೊರೊನಾ ಲಸಿಕೆ ಅಭಿಯಾನ ಪ್ರಾರಂಭ ಆಗುತ್ತದೆ. ಈ ನಡುವೆ ಕೋವಾಕ್ಸಿನ್ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ಖಾಸಗಿ ಆಸ್ಪತ್ರೆಗಳೊಂದಿಗೆ ಸ್ಟಾಕ್ ಅನ್ನು ಮರು-ಲೇಬಲ್ ಮಾಡಲು ಮತ್ತು ವಿನಿಮಯ ಮಾಡಿಕೊಳ್ಳಲು ಪ್ರಾರಂಭಿಸಿದೆ ಎಂದು ವರದಿಯು ಉಲ್ಲೇಖಿಸಿದೆ.

ಕಂಪನಿಯು, ಈ ಕೋವಿಡ್‌ ಲಸಿಕೆಯ ಕೊನೆಯ ದಿನಾಂಕವನ್ನು ಒಂಬತ್ತರಿಂದ 12 ತಿಂಗಳವರೆಗೆ ವಿಸ್ತರಿಸುವ ಕುರಿತು ದೇಶದ ಅಪೆಕ್ಸ್ ಡ್ರಗ್ ರೆಗ್ಯುಲೇಟರ್‌ನಿಂದ ಅನುಮೋದನೆಯನ್ನು ಪಡೆದ ನಂತರ, ಮರು-ಲೇಬಲ್ ಮಾಡಲು ಅಥವಾ ವಿನಿಮಯಕ್ಕಾಗಿ ತನ್ನ ಸ್ವಂತ ಖರ್ಚಿನಲ್ಲಿ ಸ್ಟಾಕ್ ಅನ್ನು ಪಡೆಯಲು ಪ್ರಾರಂಭ ಮಾಡಿದೆ.

ಭಾರತದಾದ್ಯಂತ 2,500 ಸೂಪರ್ ಸ್ಪೆಷಾಲಿಟಿ ಮತ್ತು 8,000 ಸಣ್ಣ ಆಸ್ಪತ್ರೆಗಳನ್ನು ಪ್ರತಿನಿಧಿಸುವ ಆಸ್ಪತ್ರೆಗಳು, ಅಸೋಸಿಯೇಷನ್ ​​​​ಆಫ್ ಹೆಲ್ತ್‌ಕೇರ್ ಪ್ರೊವೈಡರ್ಸ್ ಇಂಡಿಯಾ (ಎಎಚ್‌ಪಿಐ), ಭಾರತ್ ಬಯೋಟೆಕ್ ಬಳಕೆಯಾಗದ ಸ್ಟಾಕ್ ಅನ್ನು ಹಿಂದಕ್ಕೆ ಪಡೆದು ಮರು ಲೇಬಲ್‌ ಮಾಡುವ ಪ್ರಕ್ರಿಯೆ ಆರಂಭ ಮಾಡಿದೆ ಎಂಬುವುದನ್ನು ದೃಢಪಡಿಸಿದೆ.

Vaccine for Teens Aged 15-18: Bharat Biotech Starts Exchanging of Unused Covaxin Stock

"50,000 ಕ್ಕೂ ಹೆಚ್ಚು ಲಸಿಕೆಗಳ ಒಟ್ಟು ಸ್ಟಾಕ್‌ನಲ್ಲಿ, ಅವುಗಳಲ್ಲಿ ಸುಮಾರು ಶೇಕಡ 70 ಅಂದರೆ ಸುಮಾರು 35,000 ಮಾರ್ಚ್‌ನಲ್ಲಿ ಮುಕ್ತಾಯಗೊಳ್ಳುತ್ತಿವೆ," ಎಂದು ಎಎಚ್‌ಪಿಐ ಡೈರೆಕ್ಟರ್ ಜನರಲ್ ಗಿರ್ಧರ್ ಜೆ ಗಯಾನಿ ನ್ಯೂಸ್ 18 ಗೆ ತಿಳಿಸಿದರು. "ಕಂಪನಿಯು ಮರು-ಲೇಬಲ್ ಮಾಡಲು ಆಸ್ಪತ್ರೆಗಳಿಂದ ಸ್ಟಾಕ್ ಅನ್ನು ತೆಗೆದುಕೊಳ್ಳಲು ಪ್ರಾರಂಭ ಮಾಡಿದೆ," ಎಂದು ತಿಳಿಸಿದರು.

ಇದು ನವೆಂಬರ್‌ನಲ್ಲಿ ಕೋವಾಕ್ಸಿನ್‌ನ ಅವಧಿಯನ್ನು ಒಂಬತ್ತು ತಿಂಗಳ ಹಿಂದಿನ ಅನುಮೋದನೆಯಿಂದ 12 ತಿಂಗಳವರೆಗೆ ವಿಸ್ತರಿಸುವುದಾಗಿ ಘೋಷಣೆ ಮಾಡಿತ್ತು. "ದೇಶಾದ್ಯಂತ ಒಟ್ಟಾರೆಯಾಗಿ ಮರು-ಲೇಬಲ್ ಮಾಡುವ ಅಗತ್ಯವಿರುವ ಒಂದರಿಂದ ಎರಡು ಲಕ್ಷಕ್ಕಿಂತ ಹೆಚ್ಚು ಸ್ಟಾಕ್‌ಗಳು ಇಲ್ಲ," ಎಂದು ತಿಳಿಸಿದ್ದಾರೆ. ಭಾರತ್ ಬಯೋಟೆಕ್ ಲಸಿಕೆಗಳ ಪಿಕ್-ಅಪ್ ಸೌಲಭ್ಯವನ್ನು ಒದಗಿಸುತ್ತಿದೆ ಮತ್ತು ಪ್ರಕ್ರಿಯೆಯಲ್ಲಿನ ಎಲ್ಲಾ ವೆಚ್ಚಗಳನ್ನು ಭರಿಸುತ್ತಿದೆ.

"ಕಂಪನಿಯು ಆಸ್ಪತ್ರೆಯಿಂದ ಸಂಪೂರ್ಣ ಸ್ಟಾಕ್ ಅನ್ನು ತೆಗೆದುಕೊಳ್ಳುತ್ತಿದೆ, ಕೋಲ್ಡ್ ಚೈನ್ ಸ್ಟೋರೇಜ್ ಮತ್ತು ವಿತರಣೆಯ ವೆಚ್ಚಗಳೊಂದಿಗೆ ಅದನ್ನು ಹಿಂತಿರುಗಿಸುತ್ತಿದೆ. ಮರು-ಲೇಬಲ್ ಮಾಡುವ ಮೊದಲು ಕಂಪನಿಯು ಪ್ರತಿ ಬಾಟಲಿಯನ್ನು ಮತ್ತೊಮ್ಮೆ ಪರೀಕ್ಷಿಸುತ್ತಿರುವುದರಿಂದ ಹಲವಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ," ಎಂದು ಮೂಲಗಳು ತಿಳಿಸಿದೆ.

ಹದಿಹರೆಯದವರಿಗೆ ಲಭ್ಯವಿರುವ ಏಕೈಕ ಲಸಿಕೆ

Recommended Video

      ಮಾತಾ ವೈಷ್ಣೋದೇವಿ ಮಂದಿರದಲ್ಲಿ ಕಾಲ್ತುಳಿತದಿಂದ 12 ಭಕ್ತರ ಸಾವು | Oneindia Kannada

      ಭಾರತ್ ಬಯೋಟೆಕ್‌ನ ಕೋವಾಕ್ಸಿನ್ 15-18 ವಯಸ್ಸಿನ ಹದಿಹರೆಯದವರಿಗೆ ಲಭ್ಯವಿರುವ ಏಕೈಕ ಲಸಿಕೆಯಾಗಿದೆ. ಆದರೆ ಹಿರಿಯ ನಾಗರಿಕರು ಮತ್ತು ಮುಂಚೂಣಿಯ ಕಾರ್ಯಕರ್ತರು ಜನವರಿ 10 ರಿಂದ ಮುನ್ನೆಚ್ಚರಿಕೆಯ ಕೋವಿಡ್‌ ಲಸಿಕೆಯನ್ನು ಸ್ವೀಕರಿಸಲು ಪ್ರಾರಂಭ ಮಾಡುತ್ತಾರೆ. ಕೆಲವು ಆಸ್ಪತ್ರೆಗಳ ಬ್ಯಾಚ್‌ಗಳು ಮರು-ಲೇಬಲಿಂಗ್‌ ಮಾಡಿಕೊಳ್ಳುತ್ತಿದೆ. ಇತರ ಆಸ್ಪತ್ರೆಗಳು ಕೋವಾಕ್ಸಿನ್‌ನ ಸಂಪೂರ್ಣ ಹೊಸ ಸ್ಟಾಕ್ ಅನ್ನು ಪಡೆದುಕೊಳ್ಳುತ್ತಿದೆ. (ಒನ್‌ಇಂಡಿಯಾ ಸುದ್ದಿ)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+