ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಿಲ್ ನಿಷೇಧಿಸಲು ಅರ್ಜಿ: ಬಾಬಾ ರಾಮದೇವ್‌ಗೆ ಕೋರ್ಟ್ ನೋಟಿಸ್

|
Google Oneindia Kannada News

ಡೆಹ್ರಾಡೂನ್, ಜುಲೈ 1: ಕೊರೊನಾ ವೈರಸ್ ಔಷಧಿ ಎಂದು ಹೇಳಲಾಗುತ್ತಿರುವ ಪತಂಜಲಿ ಕೊರೊನಿಲ್ ಔಷಧಿಯನ್ನು ನಿಷೇಧಿಸುವಂತೆ ಉತ್ತರಾಖಂಡ್ ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

Recommended Video

Corona updates,Mysore : ಹೆಚ್ಚಾದ ಸೋಂಕು, ಮೈಸೂರಿನಲ್ಲಿ ಬದಲಾದ ಕರ್ಫ್ಯೂ ಸಮಯ | Oneindia Kannada

ಅರ್ಜಿ ಸ್ವೀಕರಿಸಿರುವ ಉತ್ತರಾಖಂಡ್ ನ್ಯಾಯಾಲಯ ಪತಂಜಲಿ ಸಂಸ್ಥೆ ಮಾಲೀಕ ಯೋಗಗುರು ಬಾಬಾ ರಾಮದೇವ್, ದಿವ್ಯ ಫಾರ್ಮಸಿ, ನಿಮ್ಸ್ ವಿಶ್ವವಿದ್ಯಾಲಯ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.

ಕೊರೊನಿಲ್'ನಿಂದ 3 ದಿನದಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ: ಪತಂಜಲಿಕೊರೊನಿಲ್'ನಿಂದ 3 ದಿನದಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ: ಪತಂಜಲಿ

ಪತಂಜಲಿಯ ದಿವ್ಯಾ ಫಾರ್ಮಸಿ ರೋಗನಿರೋಧಕ ವರ್ಧಕಗಳಿಗಾಗಿ ರಾಜ್ಯ ಸರ್ಕಾರದಿಂದ ಅನುಮತಿ ಕೋರಿದೆ. ಆದರೆ, ಬಾಬಾ ರಾಮದೇವ್ ಕೊರೊನಿಲ್ ಆಯುರ್ವೇದ ಔಷಧಿಯನ್ನು ಕೋವಿಡ್ -19ಗೆ ಔಷಧಿ ಎಂದು ಹೇಳುವ ಮೂಲಕ ಜನರ ದಾರಿ ತಪ್ಪಿಸಿದ್ದಾರೆ ಎಂದು ವಕೀಲ ಮಣಿ ಕುಮಾರ್ ಆರೋಪಿಸಿದ್ದಾರೆ.

ಈ ಸಂಬಂಧ ''ಆಯುಷ್ ಸಚಿವಾಲಯ ಅಥವಾ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್), ರಾಜ್ಯ ಮಟ್ಟದಲ್ಲಿ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯವಾದ ಅನುಮತಿ ಸಹ ಪಡೆದಿಲ್ಲ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Uttarakhand High Court Issues Notice To Yoga Guru Ramdev

ಮತ್ತೊಂದೆಡೆ ಕೊರೊನಿಲ್ ಔಷಧಿ ಕುರಿತು ಸ್ಪಷ್ಟನೆ ನೀಡಿರುವ ಬಾಬಾ ರಾಮದೇವ್ ''ಕೊರೊನಿಲ್ ಕುರಿತು ಯಾವುದೇ ವಿವಾದಗಳಿಲ್ಲ, ಇದು ನನ್ನ ವಿರುದ್ಧದ ಪ್ರಚಾರವಷ್ಟೇ. ಕೊರೊನಿಲ್ ಕೆಲಸಗಳನ್ನು ಕಾನೂನಿನ ಪ್ರಕಾರ ಮಾಡಲಾಗಿದೆ. ಆಯುಷ್ ಸಚಿವಾಲಯವೂ ನಮ್ಮ ಪ್ರಯತ್ನವನ್ನು ಶ್ಲಾಘಿಸಿದೆ'' ಎಂದಿದ್ದಾರೆ.

English summary
Uttarakhand High Court issues notice to Yoga guru Ramdev, Divya Pharmacy, NIMS University, the Centre and the state government on a plea which sought a ban on Ayurvedic medicine Coronil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X