ಉತ್ತರಾಖಂಡ್ ಹೆಲಿಕಾಪ್ಟರ್ ಪತನ ದರಂತ; ಸಿಸಿಬಿ ಇನ್ಸ್‌ಪೆಕ್ಟರ್ ಸೇರಿ ಬೆಂಗಳೂರಿನ ಐವರು ದಾರುಣ ಸಾವು
Uttarakhand Horrific Helicopter Crash: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪ ಶುಕ್ರವಾರ (ಅಕ್ಟೋಬರ್ 30) ಮಧ್ಯಾಹ್ನ ಭೀಕರ ಹೆಲಿಕಾಪ್ಟರ್ ದುರಂತವೊಂದು ಸಂಭವಿಸಿದೆ. ಬದರಿನಾಥದಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ 'ಟ್ರಾನ್ಸ್ ಭಾರತ್ ಏವಿಯೇಷನ್' ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಜೋಶಿಮಠದ ಚಾಯ್ ಗ್ರಾಮದ ಬೆಟ್ಟಕ್ಕೆ ಅಪ್ಪಳಿಸಿ ಪತನಗೊಂಡಿದ್ದು, ಪೈಲಟ್ ಹಾಗೂ ಬೆಂಗಳೂರು ಮೂಲದ ಐವರು ಪ್ರವಾಸಿಗರು ಸೇರಿದಂತೆ ಒಟ್ಟು ಆರು ಮಂದಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ದುರಂತದಲ್ಲಿ ಮೃತಪಟ್ಟವರನ್ನು ಬೆಂಗಳೂರಿನ ಸಿಸಿಬಿ ಇನ್‌ಸ್ಪೆಕ್ಟರ್ ಅರುಣ್ ಸಾಲಂಕೆ, ವಕೀಲರಾದ ಶಂಕರೇಗೌಡ, ಸುಧೀರ್, ನಾಗರಾಜ್ ಪ್ರತಾಪ್ ಹಾಗೂ ಹೆಲಿಕಾಪ್ಟರ್ ಪೈಲಟ್ ಕ್ಯಾಪ್ಟನ್ ಹಿಮಾಂಶು ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಕೇದಾರನಾಥ ಮತ್ತು ಬದರಿನಾಥ್ ದೇವಸ್ಥಾನ ದರ್ಶನಕ್ಕಾಗಿ ತೆರಳಿದ್ದ ಈ ಸ್ನೇಹಿತರು ದರ್ಶನ ಮುಗಿಸಿ ಹಿಂತಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಉತ್ತರಾಖಂಡ ಪೊಲೀಸರು ಮೃತರ ಕುಟುಂಬಸ್ಥರಿಗೆ ಮಾಹಿತಿ ತಲುಪಿಸಿದ್ದು, ಸ್ಥಳೀಯ ಆಡಳಿತವು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದೆ ಎನ್ನಲಾಗಿದೆ.

ಜೋಶಿಮಠ ಕಣಿವೆಯಲ್ಲಿ ಕಡಿತಗೊಂಡಿದ್ದ ಸಂಪರ್ಕ
ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಬದರಿನಾಥದಿಂದ ಡೆಹ್ರಾಡೂನ್‌ನ ಸಹಸ್ರಧಾರಕ್ಕೆ ಹೊರಟಿದ್ದ ಈ ಹೆಲಿಕಾಪ್ಟರ್ ಮಧ್ಯಾಹ್ನ 1:14ಕ್ಕೆ ಬದರಿನಾಥದಿಂದ ಟೇಕಾಫ್ ಆಗಿತ್ತು. ಆದರೆ ಜೋಶಿಮಠ ಕಣಿವೆಯ ಮೇಲೆ ಹಾರಾಟ ನಡೆಸುತ್ತಿದ್ದ ವೇಳೆ ಹೆಲಿಕಾಪ್ಟರ್ ಸಂಪರ್ಕ ಇದ್ದಕ್ಕಿದ್ದಂತೆ ಕಡಿತಗೊಂಡಿತು. ತಕ್ಷಣವೇ ಅದರ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಯೂ ಸ್ಥಗಿತಗೊಂಡಿದ್ದು, ತನಿಖೆಯ ನಂತರ ದುರಂತದ ಭೀಕರತೆ ಬೆಳಕಿಗೆ ಬಂದಿದೆ.
ಹೆಲಿಕಾಪ್ಟರ್‌ಗಳ ಹಾರಾಟ ಸ್ಥಗಿತ
ದುರಂತದ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ 'ಟ್ರಾನ್ಸ್ ಭಾರತ್ ಏವಿಯೇಷನ್' ಸಂಸ್ಥೆಗೆ ಸೇರಿದ ಎಲ್ಲಾ ಹೆಲಿಕಾಪ್ಟರ್‌ಗಳ ಹಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ ಎಂದು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (UCADA) ಅಧಿಕೃತವಾಗಿ ತಿಳಿಸಿದೆ. ಇನ್ನೂ ಈ ಘಟನೆಗೆ ನಿಖರವಾದ ಕಾರಣ ಏನೆಂಬುದು ತಿಳಿದುಬರಬೇಕಿದೆ.
ಘಟನೆಯಲ್ಲಿ ಮೃತಪಟ್ಟವರ ವಿವರ
* ಪೈಲಟ್: ಕ್ಯಾಪ್ಟನ್ ಹಿಮಾಂಶು
* ಬೆಂಗಳೂರು ಮೂಲದ ಪ್ರಯಾಣಿಕರು: ಬೆಂಗಳೂರಿನ ಸಿಸಿಬಿ ಇನ್‌ಸ್ಪೆಕ್ಟರ್ ಅರುಣ್, ಹೆಚ್.ಎಸ್. ನಾಗರಾಜ್ ಪ್ರತಾಪ್, ಶಂಕರ್ ಗೌಡ, ಸುಧೀರ್ ಕೆ. ಮತ್ತು ಹೆಚ್.ಎಸ್. ನಟರಾಜ್.
ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಎಸ್‌ಡಿಆರ್‌ಎಫ್ (SDRF), ಭಾರತೀಯ ಸೇನೆ, ಸ್ಥಳೀಯ ಪೋಲಿಸ್ ಹಾಗೂ ಐಟಿಬಿಪಿ (ITBP) ಸಿಬ್ಬಂದಿಗಳು ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಈ ಭೀಕರ ಅಪಘಾತದ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ 'ಟ್ರಾನ್ಸ್ ಭಾರತ್ ಏವಿಯೇಷನ್' ಸಂಸ್ಥೆಗೆ ಸೇರಿದ ಎಲ್ಲಾ ಹೆಲಿಕಾಪ್ಟರ್‌ಗಳ ಹಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ ಎಂದು ಉತ್ತರಾಖಂಡ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ಮತ್ತೊಂದೆಡೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪರಿಸ್ಥಿತಿಯನ್ನು ಹತ್ತಿರದಿಂದ ಮೇಲ್ವಿಚಾರಣೆ ಮಾಡುತ್ತಿದ್ದು, ಸಂತ್ರಸ್ತರಿಗೆ ತಕ್ಷಣದ ವೈದ್ಯಕೀಯ ಮತ್ತು ರಕ್ಷಣಾ ನೆರವು ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.


Click it and Unblock the Notifications
