ಆಶಾ ಕಾರ್ಯಕರ್ತೆ ಜೊತೆ ಗಲಾಟೆ: FIR ಹಾಕಿದ ಪೊಲೀಸರು
ಡೆಹ್ರಾಡೂನ್, ಏಪ್ರಿಲ್ 29: ಕರ್ನಾಟಕದಲ್ಲಿಯೂ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಆಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೊರೊನಾ ವಿರುದ್ಧ ಹೋರಾಟ ನಡೆಯುತ್ತಿರುವ ಅವರ ಜೊತೆ ಗಲಾಟೆ ಮಾಡುತ್ತಿರುವ ಘಟನೆ ನಡೆಯುತ್ತಿದೆ. ಈಗ ಉತ್ತರಖಂಡದಲ್ಲಿಯು ಇಂತಹ ಒಂದು ಘಟನೆ ನಡೆದಿದೆ.
ಉತ್ತರಖಂಡದ ಮಖಾನ್ಪುರ್ ಎಂಬ ಹಳ್ಳಿಗೆ ಅನಿತಾ ಎಂಬ ಆಶಾ ಕಾರ್ಯಕರ್ತೆಯೊಬ್ಬರು ಕೊರೊನಾ ಬಗ್ಗೆ ಡೇಟಾ ಸಂಗ್ರಹ ಮಾಡಲು ಹೋಗಿದ್ದರು. ಸರ್ವೆ ಮಾಡುತ್ತಿದ್ದ ವೇಳೆ ಆ ಹಳ್ಳಿಯ ಕೊನೆಯ ಮನೆಗೆ ತಲುಪಿದರು. ಅಲ್ಲಿ ಮಹಿಳೆಯೊಬ್ಬಳು ಅವರ ಕೆಲಸಕ್ಕೆ ಅಡ್ಡಿಪಡಿಸಲಾಗಿದೆ.
ಉತ್ತರಾಖಂಡದಲ್ಲಿ 6 ತಿಂಗಳ ಮಗು ವಿರುದ್ಧ ಪ್ರಕರಣ ದಾಖಲು!
ಮಹಿಳೆಯೊಬ್ಬಳು ಆಶಾ ಕಾರ್ಯಕರ್ತೆ ಡೇಟಾ ಸಂಗ್ರಹ ಮಾಡಿದ್ದ ರಿಜಿಸ್ಟರ್ ಹರಿದು ಹಾಕಿದ್ದಾಳೆ. ಗಲಾಟೆ ಮಾಡಿ, ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಪ್ರಯತ್ನ ಮಾಡಲಾಗಿದೆ. ಈ ವಿಷಯವನ್ನು ಪೊಲೀಸರ ಗಮನಕ್ಕೆ ಆಶಾ ಕಾರ್ಯಕರ್ತೆಯರು ತಂದಿದ್ದಾರೆ. ಘಟನೆಯ ಬಗ್ಗೆ ಆಶಾ ಕಾರ್ಯಕರ್ತೆ ಅನಿತಾ ವಿವರಿಸಿದ್ದಾರೆ.
We had gone for #COVID19 survey. We had collected the data of all families. When we went to the last house, they told us to strike off all names. One woman took our register and started doing that. She also tore pages off the register. We received some injuries: Anita,ASHA worker https://t.co/1OKmUbNXiI pic.twitter.com/t0HcDpRTLH
— ANI (@ANI) April 29, 2020
ಹಲ್ಲೆ ಪ್ರಯತ್ನ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಆರೋಪಿಗಳ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ. ಒಬ್ಬ ಆರೋಪಿಯನ್ನು ಬಂಧಿಸಿದ್ದು, ಉಳಿದವರ ಹುಡುಕಾಟ ನಡೆಯುತ್ತಿದೆ.