4 ವರ್ಷಗಳಲ್ಲಿ ಯುಪಿ 1 ಟ್ರಿಲಿಯನ್ ಡಾಲರ್ ಆರ್ಥಿಕತೆ: ಯೋಗಿ
ಉತ್ತರ ಪ್ರದೇಶದ ವ್ಯಕ್ತಿಯ ತಲಾ ಆದಾಯ ಶೀಘ್ರದಲ್ಲೇ ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಲಿದ್ದು, ರಾಜ್ಯದಲ್ಲಿ 94 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಯೋಗಿ ತಿಳಿಸಿದ್ದಾರೆ.
ಲಕ್ನೋ, ಫೆಬ್ರವರಿ 22: ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಹಾದಿಯಲ್ಲಿದೆ. ಹಾಗೆಯೇ ಮುಂದಿನ 4 ವರ್ಷಗಳಲ್ಲಿ 1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಮೂಲಕ ಯುಪಿ ಇದಕ್ಕೆ ಕೊಡುಗೆ ನೀಡಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಉತ್ತರ ಪ್ರದೇಶದ ವ್ಯಕ್ತಿಯ ತಲಾ ಆದಾಯ ಶೀಘ್ರದಲ್ಲೇ ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಲಿದ್ದು, ರಾಜ್ಯದಲ್ಲಿ 94 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಭಾಗವಾಗಿ ಮಂಗಳವಾರ, ಸರ್ಕಾರವು 7,000 ಕ್ಕೂ ಹೆಚ್ಚು ಎಎನ್‌ಎಂಗಳು ಮತ್ತು ಗೃಹ ಇಲಾಖೆಗೆ ಸಂಬಂಧಿಸಿದ 9,000 ಜನರಿಗೆ ನೇಮಕಾತಿ ಪತ್ರಗಳನ್ನು ನೀಡಿದೆ. ಕಳೆದ ಆರು ವರ್ಷಗಳಲ್ಲಿ ಎಂಎಸ್‌ಎಂಇ ವಲಯದಲ್ಲಿ ಸುಮಾರು 1.61 ಕೋಟಿ ಉದ್ಯೋಗಾವಕಾಶಗಳು ಲಭ್ಯವಾಗಿವೆ ಎಂದು ಅವರು ಹೇಳಿದರು.

2016-17ರಲ್ಲಿ ನಿರುದ್ಯೋಗ ದರ 19% ರಿಂದ ಸುಮಾರು 3% ಕ್ಕೆ ಕುಸಿದಿದೆ. ಹಿಂದಿನ ಅಭಿವೃದ್ಧಿಯು ನೋಯ್ಡಾ ಅಥವಾ ಗಾಜಿಯಾಬಾದ್‌ಗೆ ಸೀಮಿತವಾಗಿತ್ತು, ಆದರೆ ಈಗ 10 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯ ಪ್ರಸ್ತಾಪಗಳು ಪೂರ್ವ ಯುಪಿಗೆ ಬಂದಿವೆ ಮತ್ತು ಬುಂದೇಲ್‌ಖಂಡಕ್ಕೆ 4.27 ಲಕ್ಷ ಕೋಟಿ ರೂಪಾಯಿಗಳು ಬಂದಿವೆ ಎಂದು ಹೇಳಿದ್ದಾರೆ.
ಬುಲ್ಡೋಜರ್‌ನ ಶಕ್ತಿಯಿಂದಾಗಿ ಯುಪಿಗೆ ಹೂಡಿಕೆ ಬರುತ್ತಿದೆ. ಒಂದೆಡೆ ಇದು ಮೂಲಸೌಕರ್ಯವನ್ನು ಬಲಪಡಿಸುತ್ತದೆ. ಮತ್ತೊಂದೆಡೆ ಅಪರಾಧಿಗಳನ್ನು ದುರ್ಬಲಗೊಳಿಸುತ್ತದೆ. ಅಜೆಂಡಾ ಇಲ್ಲದವರು ಅಭಿವೃದ್ಧಿಗೆ ಅಡೆತಡೆಗಳನ್ನು ಹಾಕಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾವು ಆತ್ಮವಿಶ್ವಾಸದಿಂದ ಕೆಲಸ ಮಾಡಿದ್ದೇವೆ ಅವರು ಹೇಳಿದರು.
ವೃದ್ಧಾಪ್ಯ, ರೈತ ಪಿಂಚಣಿ ಯೋಜನೆಗಾಗಿ 7,248 ಕೋಟಿ ರೂ. ಒದಗಿಸಲಾಗಿದೆ. ದಿವ್ಯಾಂಗ್ ಪಿಂಚಣಿ ಯೋಜನೆಗೆ 1,120 ಕೋಟಿ ರೂಪಾಯಿಗಳನ್ನು ಯುಪಿ ಹಣಕಾಸು ಸಚಿವರು ಪ್ರಸಕ್ತ ಬಜೆಟ್‌ನಲ್ಲಿ ಮೀಸಲಿರಿಸಿದ್ದಾರೆ. ಇದಲ್ಲದೆ ಯುಪಿ ಪ್ರವಾಸೋದ್ಯಮ ನೀತಿ 2022 ರ ಅಡಿಯಲ್ಲಿ ಮುಂದಿನ 5 ವರ್ಷಗಳಲ್ಲಿ 20 ಸಾವಿರ ಉದ್ಯೋಗಗಳ ಸೃಷ್ಟಿ, 10 ಲಕ್ಷ ಕೋಟಿ ಹೂಡಿಕೆ ಗುರಿಯನ್ನು ಉತ್ತರ ಪ್ರದೇಶ ಬಜೆಟ್ ನಿಗದಿಪಡಿಸಿದೆ.

ಲಕ್ನೋದ ವಿಧಾನ ಭವನದಲ್ಲಿ ಯುಪಿ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಮತ್ತು ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಅವರು ಬುಧವಾರ ಉಪಸ್ಥಿತರಿದ್ದರು.












Click it and Unblock the Notifications