6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ಸ್ಥಳೀಯರಿಂದ ಆರೋಪಿಯ ಹತ್ಯೆ!

ಅಲಿಘಡ್(ಉತ್ತರ ಪ್ರದೇಶ), ಜೂನ್ 22: ಆರು ವರ್ಷ ವಯಸ್ಸಿನ ಮಗುವಿನ ಮೇಲೆ ಕಾಮಾಂಧನೊಬ್ಬ ಅತ್ಯಾಚಾರ ನಡೆಸಿ, ಕೊಲೆಗೈದಿದ್ದಕ್ಕಾಗಿ, ಊರಿನ ಜನರೆಲ್ಲ ಸೇರಿ ಆತನನ್ನು ಕೊಂದ ಘಟನೆ ಉತ್ತರ ಪ್ರದೇಶದ ಅಲಿಘಡ್ ಜಿಲ್ಲೆಯ ಭೀಕಂಪುರ್ ಎಂಬ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಬದೌನ್ ನಲ್ಲಿ ವಾಸವಿದ್ದ ಯುವಕನೊಬ್ಬ ಸ್ನ್ಯಾಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಸ್ನ್ಯಾಕ್ಸ್ ಅಂಗಡಿಯ ಮಾಲೀಕನಿಗೆ ಯುವಕ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲದ ಕಾರಣ ಆತನನ್ನು ಕಳೆದ ತಿಂಗಳು ಕೆಲಸದಿಂದ ತೆಗೆದುಹಾಕಲಾಗಿತ್ತು. ಈ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳಳುವುದಕ್ಕಾಗಿ ಯುವಕ, ಮಾಲೀಕನ ಆರು ವರ್ಷದ ಮಗಳ ಮೇಲೆ ಕಣ್ಣು ಹಾಕಿದ್ದ!

uttar Pradesh: Man who allegedly raped and murdered a minor girl was beaten by the locals to death

ಆ ಪುಟ್ಟ ಮಗುವನ್ನೂ ಕಾಮದ ಕಣ್ಣಿನಿಂದ ನೋಡುವ ಮನಸ್ಸು ಅದ್ಹೇಗೆ ಬಂತೋ ಗೊತ್ತಿಲ್ಲ. ಆಟವಾಡುತ್ತಿದ್ದ ಆಕೆಯನ್ನು ಅಪಹರಿಸಿ, ತೋಟವೊಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ.
ಅತ್ಯಾಚಾರ ಮಾಡಿದ ನಂತರ ಆ ಮಗುವನ್ನು ಸಾಯಿಸಿದ್ದಾನೆ.

ಮಗು ಕಾಣೆಯಾಗಿರುವುದು ಅರಿವಿಗೆ ಬರುತ್ತಲೇ ಮಗುವಿನ ಪಾಲಕರು, ಊರಿನ ಮಂದಿ ಎಲ್ಲರೂ ಸೇರಿ ಮಗುವನ್ನು ಹುಡುಕುತ್ತ ಹೊಲಕ್ಕೆ ಬಂದಾಗ, ಮಗುವಿನ ದೇಹದ ಪಕ್ಕ ಅಪರಾಧಿ ಕುಳಿತಿರುವುದು ಕಂಡಿದೆ. ಮಗು ತೀರಿಹೋಗಿದ್ದು ತಿಳಿಯುತ್ತಿದ್ದಂತೆಯೇ ಉದ್ರಿಕ್ತರಾದ ಜನ ಅಪರಾಧಿಯನ್ನು ಮನಸೋ ಇಚ್ಛೆ ಥಳಿಸಿದ್ದಾರೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮಾರಣಾಂತಿಕ ಹಲ್ಲೆಗೊಳಗಾದ ಅಪರಾಧಿಯನ್ನು ಆಸ್ಪತ್ರೆಗೆ ಸೇರಿಸುವ ಹೊತ್ತಿಗೆ, ಆತ ಸಾವನ್ನಪ್ಪಿದ್ದಾನೆ. ಒಟ್ಟಿನಲ್ಲಿ ಆ ಊರಿನ ಜನರು ಅತ್ಯಾಚಾರಿಗೆ, ಅಂತ ಹೀನ ಕೃತ್ಯವೆಸಗಿದ ದಿನವೇ ಅತ್ಯುಗ್ರ ಶಿಕ್ಷೆ ನೀಡಿದ್ದಾರೆ!

ಈ ಕುರಿತು ಅಲಿಘಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+