ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಪಲ್ಟಿ ಹೊಡೆದ ಬಸ್ಸು: 17 ಮಂದಿ ಸಾವು
ಮೈನಿಪುರಿ, ಜೂನ್ 13: ಖಾಸಗಿ ಬಸ್ಸೊಂದು ರೋಡ್ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಪರಿಣಾಮ 17 ಜನ ಮೃತರಾದ ದಾರುಣ ಘಟನೆ ಉತ್ತರ ಪ್ರದೇಶದ ಮೈನಿಪುರಿಯಲ್ಲಿ ನಡೆದಿದೆ.
ರಾಜಸ್ಥಾನದ ಜೈಪುರದಿಂದ ಉತ್ತರ ಪ್ರದೇಶದ ಫರುಕಾಬಾದ್ ಬಸ್ಸು ಪ್ರಯಾಣ ಬೆಳೆಸಿತ್ತು. 60 ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದ ಈ ಬಸ್ಸು, ಇಂದು(ಜೂನ್ 12) ಬೆಳಗ್ಗಿನ ಜಾವ 5 ಗಂಟೆಯ ಸುಮಾರಿಗೆ ಮೈನಿಪುರಿಬಳಿಯ ಕಿರಾತ್ಪುರ ಎಂಬಲ್ಲಿ ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಘಟನೆಯಲ್ಲಿ 17 ಜನ ಮೃತರಾಗಿದ್ದರೆ, 35 ಜನ ಗಂಭೀರವಾಗಿ ಗಾಯಗೊಂಡಿದ್ದು, ಇಟಾವಾಹ್ ಜಿಲ್ಲೆಯ ಸಫೈ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಬದುಕಿಳಿದ ಪ್ರಯಾಣಿಕರು ಹೇಳುವ ಪ್ರಕಾರ ಚಾಲಕ ಬಸ್ಸನ್ನು ಬಹಳ ವೇಗವಾಗಿ ಓಡಿಸುತ್ತಿದ್ದ. ನಿಯಂತ್ರಣ ತಪ್ಪಿದ ಪರಿಣಾಮ ಈ ಘಟನೆ ನಡೆದಿದೆ. ಮಾತ್ರವಲ್ಲ, ಮೃತರಾದ ಬಹುಪಾಲು ಎಲ್ಲ ಪ್ರಯಾಣಿಕರು ಬಸ್ಸಿನ ಟಾಪ್ ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು.












Click it and Unblock the Notifications