ವಿಮಾನ ಹತ್ತುವ ಮುನ್ನ ಡಿಯೋಡರೆಂಟ್ ಬಳಸಿ: ವಿಮಾನಯಾನ ಸಚಿವಾಲಯ ಸಲಹೆ

ನವದೆಹಲಿ, ಫೆಬ್ರವರಿ 25: ವಿಮಾನವೇರುವ ಮುನ್ನ ದುರ್ವಾಸನೆ ದೂರ ಮಾಡುವ ಸುವಾಸನೆಯ ದ್ರವ್ಯಗಳನ್ನು ಬಳಸುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಪ್ರಯಾಣಿಕರಿಗೆ ಸಲಹೆ ನೀಡಿದೆ.

ಇತರೆ ಪ್ರಯಾಣಿಕರಿಗೆ ಅಹಿತಕರ ವಾತಾವರಣ ಉಂಟುಮಾಡದಂತೆ ಪ್ರಯಾಣಿಕರು ವಿಮಾನ ಏರುವ ಮುನ್ನ ಡಿಯೋಡರೆಂಟ್‌ಗಳನ್ನು ಬಳಸುವುದು ಒಳಿತು ಎಂದು ಸಚಿವಾಲಯ ಹೇಳಿದೆ.

'ಸ್ವಲ್ಪ ಉತ್ತಮ ನಡವಳಿಕೆಗಳು ಮತ್ತು ಗೌರವಕ್ಕೆ ಯಾವಾಗಲೂ ಪ್ರಶಂಸೆ ಪಡೆಯಲು ಅರ್ಹವಾಗಿರುತ್ತವೆ. ಪ್ರಾಣಿ ರಾಜ್ಯದಲ್ಲಿ ವಾಸನೆಗಳು ಹೆಚ್ಚಾಗಿ ಇರುತ್ತವೆ. ನಮಗೆ ಯಾವಾಗಲೂ ಒಳ್ಳೆಯ ಸ್ನಾನ ಹಾಗೂ ಡಿಯೋಡರೆಂಟ್ ಬಳಸುವ ಅವಕಾಶವಿರುತ್ತದೆ. ಹೀಗಾಗಿ ಬೇರೆಯವರಿಗೆ ತೊಂದರೆಯುಂಟುಮಾಡಲು ಕಾರಣರಾಗಬೇಡಿ' ಎಂದು ನಾಗರಿಕ ಸಚಿವಾಲಯ ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದೆ.

Use Deodorant Before Boarding Flight Aviation Ministry Advise Passengers

ರೇಖಾಚಿತ್ರದೊಂದಿಗೆ ಸಂದೇಶವನ್ನು ಹಂಚಿಕೊಂಡಿರುವ ಸಚಿವಾಲಯ, 'ನಿರಾಕರಣವಾದವು ವೈಯಕ್ತಿಕ ಆಯ್ಕೆ ಎನ್ನುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ ಯಾವಾಗಲೂ ವಿಮಾನವೇರುವ ಮುನ್ನ ನಿಮ್ಮ ದೇಹದ ದುರ್ಗಂಧವನ್ನು ಪರಿಶೀಲಿಸಿಕೊಳ್ಳಿ. ಇಲ್ಲಿ ಎಲ್ಲರಿಗೂ ಸೀಮಿತ ಸ್ಥಳಾವಕಾಶ ಇರುವುದರಿಂದ ಹಕ್ಕಿಯ ಗೂಡಿನಂತೆ ವಾಸನೆ ಹೊಡೆಯುವವರ ಜತೆಗೆ ಇಡೀ ವಿಮಾನ ಪ್ರಯಾಣದ ಸಮಯವನ್ನು ಕಳೆಯಲು ಯಾರೂ ಇಷ್ಟಪಡುವುದಿಲ್ಲ' ಎಂದು ವಿಡಂಬನಾತ್ಮಕವಾಗಿ ಹೇಳಿದೆ.

'ನಿಮಗೆ ಇರುವ ಸೀಮಿತ ಸ್ಥಳವಕಾಶದಲ್ಲಿ ಓರೆಯಾಗಿ ಕೂರಬೇಕೆಂದರೆ ಎಚ್ಚರಿಕೆಯಿಂದ ಮಾಡಿ. ನಿಮ್ಮ ಸುತ್ತಲೂ ಇರುವ ಜನರ ಬಗ್ಗೆ ಸದಾ ಯೋಚಿಸಿ. ಏಕೆಂದರೆ ಯಾರೂ ನಿಮ್ಮ ತಲೆಯನ್ನು ಅವರ ತೊಡೆಯ ಮೇಲೆ ಇರಿಸಿಕೊಳ್ಳಲು ಬಯಸುವುದಿಲ್ಲ' ಎಂದು ಈ ಹಿಂದೆಯೂ ಸಚಿವಾಲಯ ಸಲಹೆ ನೀಡಿತ್ತು. ಅಮೆರಿಕದ ವಿಮಾನಯಾನ ಸಂಸ್ಥೆಯೊಂದರಲ್ಲಿ ವ್ಯಕ್ತಿಯೊಬ್ಬರು ತಮ್ಮ ಮೇಲೆ ವಾಲಿಕೊಂಡಿದ್ದ ಯುವತಿಗೆ ಗುದ್ದಿದ ವಿಡಿಯೋ ವೈರಲ್ ಆಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+