ಅಮೆರಿಕ ಅಧ್ಯಕ್ಷ ಬೈಡನ್ ಭಾರತಕ್ಕೆ: ಭದ್ರತೆ ನೋಡಿದರೆ ಬೆಚ್ಚಿಬೀಳ್ತೀರಿ
ಭಾರತಕ್ಕೆ ಮತ್ತೊಬ್ಬ ಅಮೆರಿಕ ಅಧ್ಯಕ್ಷರು ಭೇಟಿ ನೀಡಿದ್ದಾರೆ. ಜೋ ಬೈಡನ್ ಅಧ್ಯಕ್ಷರಾದ ನಂತರ ಇದೇ ಮೊದಲ ಬಾರಿ ಭಾರತಕ್ಕೆ ಬಂದಿದ್ದಾರೆ. ಹೀಗೆ ವಿಶ್ವದ ನಂಬರ್ 1 ದೇಶದ, ಮೊದಲ ಪ್ರಜೆಗೆ ಭಾರಿ ಭದ್ರತೆ ನೀಡಲಾಗಿದೆ. ಅದರಲ್ಲೂ ಅಮೆರಿಕದ ಅಧ್ಯಕ್ಷ ಬೈಡನ್‌ಗೆ ಸಿದ್ಧವಾಗಿರುವ 'ದಿ ಬೀಸ್ಟ್' ಕಾರಿನ ವಿಶೇಷತೆ ಕೇಳಿದರೆ ಬೆಚ್ಚಿಬೀಳ್ತೀರಿ. ಈ ಕಾರು ಒಂದು ಜೀವ ಕಾಪಾಡಲು ನೂರಾರು ಶತ್ರುಗಳ ಜೀವ ತೆಗೆಯೋದಕ್ಕೂ ಸಿದ್ಧವಾಗಿರುತ್ತದೆ.
ಹೌದು ಅಮೆರಿಕ ನಂಬರ್ ದೇಶ & ಶ್ರೀಮಂತ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಂಥ ದೇಶದ ಅಧ್ಯಕ್ಷರ ರಕ್ಷಣೆಗೆ ಅತ್ಯಂತ ದೊಡ್ಡ ಮಟ್ಟದ ಭದ್ರತೆ ಒದಗಿಸುತ್ತದೆ ಅಲ್ಲಿನ ಆಡಳಿತ. ಅಮೆರಿಕ ಅಧ್ಯಕ್ಷರ ಭದ್ರತೆಗಾಗಿಯೇ ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತೆ. ಅದರಲ್ಲೂ ಅಮೆರಿಕ ಅಧ್ಯಕ್ಷರ ಕಾರಿಗೆ ಖರ್ಚು ಮಾಡುವ ಹಣ, ಬಡ ರಾಷ್ಟ್ರಗಳ ಬಜೆಟ್‌ಗೆ ಸಮ ಎಂಬ ಕುಹಕ ಕೂಡ ರೂಢಿಯಲ್ಲಿದೆ. ಹಾಗಾದರೆ ಜೋ ಬೈಡನ್ ಕಾರಿನ ವಿಶೇಷತೆ ಏನು? ಈ ಕಾರಿನ ಬೆಲೆ ಎಷ್ಟು? ಸಂಪೂರ್ಣ ಮಾಹಿತಿಯನ್ನು ತಿಳಿಯೋಣ, ಮುಂದೆ ಓದಿ.

ಅಮೆರಿಕ ಅಧ್ಯಕ್ಷರ ಕಾರಿನ ವಿಶೇಷತೆಗಳು
* 'ದಿ ಬೀಸ್ಟ್' ಕಾರಿನಲ್ಲಿ 7 ಜನ ಕೂರಲು ವ್ಯವಸ್ಥೆ ಇರುತ್ತದೆ
* ಅಮೆರಿಕ ಅಧ್ಯಕ್ಷರ ಕಾರಿನ ಕಿಟಕಿ ಗಾಜು 5 ಇಂಚು ದಪ್ಪ ಇರುತ್ತದೆ
* ಬುಲೆಟ್ ಪ್ರೂಫ್ ಮತ್ತು ಬಾಂಬ್ ಪ್ರೂಫ್ ಅಮೆರಿಕ ಅಧ್ಯಕ್ಷರ ಕಾರು
* ಕೆಮಿಕಲ್ ಅಟ್ಯಾಕ್ ನಿಭಾಯಿಸುವ ಸಾಮರ್ಥ್ಯ ಕಾರಿನಲ್ಲಿ ಇರುತ್ತದೆ
* ಜೈವಿಕ ಅಸ್ತ್ರದ ದಾಳಿ ವೇಳೆ ಕಾರಲ್ಲಿ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಇದೆ
* 'ದಿ ಬೀಸ್ಟ್' ಕಾರಿನ ಬೆಲೆಯು ಬರೋಬ್ಬರಿ 12.5 ಕೋಟಿ ರೂಪಾಯಿ
* ಸ್ಯಾಟಲೈಟ್ ಫೋನ್, ಜಿಪಿಎಸ್, ನೈಟ್ ವಿಷನ್ ಡ್ರೈವಿಂಗ್ ವ್ಯವಸ್ಥೆ
* ಕಾರು ಟೈರ್ ಪಂಚರ್ ಆದರೂ 100 ಕಿ.ಮೀ ಚಲಿಸುವ ಸಾಮರ್ಥ್ಯ
* ಅಮೆರಿಕ ಅಧ್ಯಕ್ಷರ ರಕ್ತದ ಗುಂಪಿಗೆ ಹೋಲುವ 2 ಯುನಿಟ್ ರಕ್ತ ಶೇಖರಣೆ
* ಜನರ ಗುಂಪು ಕಾರು ಸುತ್ತುವರಿದರೆ ಅಶ್ರುವಾಯು ಸಿಡಿಸುವ ಸಾಮರ್ಥ್ಯ
* ಮಿಸೈಲ್ ಅಥವಾ ಕ್ಷಿಪಣಿ ದಾಳಿ ನಡೆದರೂ ಕಾರಿಗೆ ಸಂಪೂರ್ಣ ರಕ್ಷಣೆ
* ಕಾರಿನ ಮೇಲೆ ದಾಳಿ ಮಾಡಿದರೆ ಹೊರಗಿನಿಂದ ಕರೆಂಟ್ ಶಾಕ್ ಸಿಗಲಿದೆ
* ಹಿಂದೆ ಕೂತ ಅಮೆರಿಕ ಅಧ್ಯಕ್ಷರ ಕೈಯಲ್ಲಿ ಕಾರಿನ ಕಂಟ್ರೋಲ್ ಇರುತ್ತೆ

ಹೀಗೆ ಒಂದೆರಡಲ್ಲ ಹತ್ತಾರು ವಿಶೇಷತೆ ಹೊಂದಿರುವ 'ದಿ ಬೀಸ್ಟ್' ಕಾರು ಜಗತ್ತಿನಲ್ಲೇ ಅತಿ ಹೆಚ್ಚು ಮೌಲ್ಯದ ಕಾರು. 12.5 ಕೋಟಿ ರೂಪಾಯಿ ಬೆಲೆ ಬಾಳುವ ಈ ಕಾರು ಜಗತ್ತಿನಲ್ಲಿ ಕೆಲವೇ ಜನರಿಗೆ ಮೀಸಲು. ಅದರಲ್ಲೂ ಅಮೆರಿಕ ಅಧ್ಯಕ್ಷರಿಗೆ ವಿಶೇಷ ಉಪಕರಣಗಳನ್ನು ಅಳವಡಿಸಿ ಕಾರು ರೆಡಿ ಮಾಡಿ ಕೊಡಲಾಗುತ್ತದೆ. ಇದೀಗ ಭಾರತಕ್ಕೆ ಬಂದಿರುವ ಅಮೆರಿಕ ಅಧ್ಯಕ್ಷ ಬೈಡನ್ ಕೂಡ ಇದೇ ಕಾರಲ್ಲಿ ಓಡಾಡಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ 'ದಿ ಬೀಸ್ಟ್' ಸಂಪೂರ್ಣ ರಕ್ಷಣೆ ನೀಡಲಿದೆ.
4 ಅಮೆರಿಕ ಅಧ್ಯಕ್ಷರ ಭೀಕರ ಹತ್ಯೆ
ಹೀಗೆ ವಿಶ್ವದ ದೊಡ್ಡಣ್ಣ ತನ್ನ ದೇಶದ ಅಧ್ಯಕ್ಷರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಭದ್ರತೆ ಒದಗಿಸಲು ಕಾರಣವೂ ಇದೆ. ಈ ಹಿಂದೆ 4 ಅಮೆರಿಕ ಅಧ್ಯಕ್ಷರನ್ನು ಹತ್ಯೆ ಮಾಡಿದ ಘಟನೆ ಜಗತ್ತನ್ನು ಬೆಚ್ಚಿಬೀಳಿಸಿತ್ತು. 1865ರಲ್ಲಿ ಅಬ್ರಹಾಂ ಲಿಂಕನ್ ಹಾಗೂ 1881ರಲ್ಲಿ ಜೇಮ್ಸ್ ಗಾರ್ಫೀಲ್ಡ್, 1901ರಲ್ಲಿ ವಿಲಿಯಂ ಮೆಕಿನ್ಲೆ ಮತ್ತು 1963ರಲ್ಲಿ ಜಾನ್ ಎಫ್ ಕೆನಡಿ ಅವರನ್ನ ಕೊಲೆ ಮಾಡಲಾಗಿತ್ತು. ಅದರಲ್ಲೂ ಜಾನ್ ಎಫ್ ಕೆನಡಿ ಹತ್ಯೆ ಬಳಿಕ ಅಮೆರಿಕ ಅಧ್ಯಕರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಹೀಗಾಗಿ ಆಧುನಿಕ ಕಾಲಕ್ಕೆ ತಕ್ಕಂತೆ ಅಮೆರಿಕ ಅಧ್ಯಕ್ಷರಿಗೆ ಇಡೀ ಜಗತ್ತಿನಲ್ಲಿ ಯಾವ ನಾಯಕನಿಗೂ ಇಲ್ಲದ ರೀತಿಯಲ್ಲಿ ಭದ್ರತೆ ಒದಗಿಸಲಾಗಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications